ರಾಯಚೂರು | ಎಲ್‌ಬಿಎಸ್ ನಗರದಲ್ಲಿ ರಸ್ತೆ ಒತ್ತುವರಿ ಜಾಗದ ತೆರವು ಕಾರ್ಯಾಚರಣೆ

ರಾಯಚೂರು: ನಗರದ ವಾರ್ಡ್ ನಂ.29ರ ಎಲ್‍ಬಿಎಸ್ ನಗರದಲ್ಲಿ ಈಶ್ವರಗುಡಿಯಿಂದ ಮುನಿಯಮ್ಮ ಹಿಟ್ಟಿನ ಗಿರಣಿವರೆಗೆ ಹೋಗುವ 20ಅಡಿ ರಸ್ತೆ ಒತ್ತುವರಿಯಾಗಿದ್ದು, ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗಿತ್ತು. ಶನಿವಾರ ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಈ ರಸ್ತೆಯ ಮೇಲೆ ಹಲವು ವರ್ಷಗಳಿಂದ ಅನಧಿಕೃತ ಶೆಡ್‍ಗಳನ್ನು ನಿರ್ಮಿಸಿ ರಸ್ತೆ ಕಬಳಿಕೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿತ್ತು. ಸ್ಥಳೀಯರು ನಿರಂತರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ತಿಳಿದುಬಂದಿದೆ.
ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜೂಬಿನ್ ಮಹಾಪಾತ್ರ ಅಧಿಕಾರ ವಹಿಸಿಕೊಂಡ ನಂತರ, ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಂಡರು. ಶನಿವಾರ ಬೆಳಗ್ಗೆ 7ಗಂಟೆಗೆ ಮಹಾನಗರ ಪಾಲಿಕೆಯ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತ ಟೀನ್ ಶೆಡ್‍ಗಳನ್ನು ತೆರವುಗೊಳಿಸಿ, 20 ಅಡಿ ರಸ್ತೆ ಒತ್ತುವರಿಯಿಂದ ಮುಕ್ತಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Next Story







