ರಾಯಚೂರು: ರಸ್ತೆ ಕಾಮಗಾರಿ ವಿಳಂಬ; ಅಧಿಕಾರಿಗೆ ಸಚಿವ ಎನ್ ಎಸ್ ಬೋಸರಾಜು ತರಾಟೆ

ರಾಯಚೂರು:ರಸ್ತೆ ಕಾಮಗಾರಿ ನಡೆಸುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಯೊಬ್ಬರನ್ನು ವಿರುದ್ಧ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ಘಟನೆ ಸಿರವಾರ ತಾಲ್ಲೂಕಿನ ಮರಾಟ ಗ್ರಾಮದಲ್ಲಿ ರವಿವಾರ ನಡೆದಿದೆ.
ಮರಾಟ ಗ್ರಾಮದ ಶಾಲಾ ಕಟ್ಟಡ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ಮರಾಟ ಹಾಗೂ ಬಾಗಲವಾಡ ಗ್ರಾಮಗಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಸಚಿವರಿಗೆ ದೂರು ನೀಡಿದರು. ಸರ್ಕಾರದಿಂದ ಈ ರಸ್ತೆಗಾಗಿ ಈಗಾಗಲೇ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಆರಂಭಿಸದ ವಿಷಯ ತಿಳಿದು ಸಚಿವರು ಕೋಪಗೊಂಡರು.
ಈ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಹಾಗೂ ಸಂಸದ ಕುಮಾರ್ ನಾಯಕ್ ಕೂಡ ಇದ್ದರು.
Next Story





