ರಾಯಚೂರು | ಅಮೋಘ ವರ್ಷ ಬಸ್ ಗೆ ಗ್ರಾಮೀಣ ಶಾಸಕ ಬಸನಗೌಡ ಚಾಲನೆ

ರಾಯಚೂರು : ಅಮೋಘ ವರ್ಷ ನೂತನ ಬಸ್ಸಿಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಅಮೋಘ ವರ್ಷ ಬಸ್ ಸಂಚಾರ ರಾಯಚೂರಿನಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಇಂತಹ ಐಷಾರಾಮಿ ಬಸ್ಸುಗಳ ಮೂಲಕ ಪ್ರಯಾಣಿಸಲು ರಾಜ್ಯ ಸರ್ಕಾರ ಅನುಕೂಲ ಮಾಡಿದೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಗುಲ್ಬರ್ಗಾ ವಿಭಾಗೀಯ ವ್ಯವಸ್ಥಾಪಕರು, ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Next Story





