ರಾಯಚೂರು : ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ರಾಯಚೂರು: ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯ ರಾಯಚೂರು ಜಿಲ್ಲಾ ಮಟ್ಟದ ಸಭೆಯನ್ನು ರಾಯಚೂರು ನಗರದ ಸರಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದಿದ್ದು ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಭಾರತೀಯ ದಲಿತ ಪ್ಯಾಂಥರ್ಸ್ ನ ರಾಜ್ಯ ಉಪಾಧ್ಯಕ್ಷ ಆರ್.ತಿಮ್ಮಾರೆಡ್ಡಿ ಉಪಸ್ಥಿತಿಯಲ್ಲಿ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಜಾನೇಕಲ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ವೆಂಕಟೇಶ್ ಅರೋಲಿಕರ್, ಉಪಾಧ್ಯಕ್ಷರಾಗಿ ನರಸಪ್ಪ ವಕೀಲರು ಚಿಂಚೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ್ ನಂದಿಹಾಳ್, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲಕ್ಷ್ಮಣ್ ಜಾನೇಕಲ್, ಹನುಮಂತು ಉದ್ಬಾಳ್, ಗಣೇಶ್ ಕುರ್ಡಿ ಬಸವರಾಜ ನೀರಭಾವಿಕುಂಟಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಂಘಟನೆಯ ಉನ್ನತ ಮಟ್ಟದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವ ಮತ್ತು ದಲಿತರ, ಶೋಷಿತರ ಧ್ವನಿಯಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಆರ್. ತಿಮ್ಮಾರೆಡ್ಡಿ ಮಾತನಾಡಿ, ರಾಯಚೂರು ಜಿಲ್ಲಾ ಘಟಕಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ರಾಯಚೂರು ಜಿಲ್ಲೆಯಲ್ಲಿ ಇಂದಿಗೂ ದಲಿತರು, ಶೋಷಿತರ ಮೇಲೆ ನಿರಂತರ ದೌರ್ಜನ್ಯ ಹತ್ಯೆಗಳು ನಡೆಯುತ್ತಿವೆ. ಶೋಷಿತರು ಎದುರಿಸುತ್ತಿರುವ ಸಮಸ್ಯೆಗಳು ಶಿಕ್ಷಣ, ಉದ್ಯೋಗ, ಭೂಮಿ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಬೇಕು. ಜಿಲ್ಲೆಯ ಪ್ರತಿಯೊಂದು ಹಳ್ಳಿ ಮತ್ತು ತಾಲೂಕಿನಲ್ಲೂ ಭಾರತೀಯ ದಲಿತ ಪ್ಯಾಂಥರ್ಸ್ ಸಮಿತಿಯನ್ನು ಬಲಪಡಿಸಬೇಕು. ಅನ್ಯಾಯ ನಡೆದ ತಕ್ಷಣ ನಮ್ಮ ಸಂಘಟನೆ ಅಲ್ಲಿಗೆ ಧಾವಿಸಿ ಶೋಷಿತರ ಪರವಾಗಿ ನಿಲ್ಲಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ "ಸಂಘಟಿಸಿ, ಹೋರಾಡಿ, ಶಿಕ್ಷಿತರಾಗಿ" ಎಂಬ ಮಂತ್ರವೇ ನಮ್ಮ ದಾರಿ ಆಗಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷ ವೆಂಕಟೇಶ್ ಅರೋಲಿಕರ್ ಅವರಿಗೆ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ, ಶಿಸ್ತಿನಿಂದ ಸಂಘಟನೆಯನ್ನು ಮುನ್ನಡೆಸೋಣ ಎಂದರು.
ಸಭೆಯಲ್ಲಿ ಹಿರಿಯರಾದ ಜಗನ್ನಾಥ ಸುಂಕಾರಿ, ವೆಂಕಟಸ್ವಾಮಿ, ಆಂಜನೇಯ ಗೋಡಿಹಾಳ, ದೇವೇಂದ್ರ ದಾದಸ್, ಶ್ರೀನಿವಾಸ್ ಮಾಚರ್ಲಾ, ಈರಣ್ಣ ಗೋರಂಟಲಿ, ಗಿರಿಯಪ್ಪ ನೆಲಹಾಳ, ಶೇಖರ ರಾಂಪೂರಿ, ಹನುಮಂತು ಉದ್ಬಾಳ್, ಹನುಮಂತು ಸೀಕಲ್, ಕಾಶಿನಾಥ್ ಕುರ್ಡಿ, ಶ್ರೀನಿವಾಸ್ ನಂದಿಹಾಳ್, ಹನುಮಂತು ಬಯಲು ಮರ್ಚೆಡ್, ನರಸಿಂಹಲು ಸೀಕಲ್, ಈಶಪ್ಪ ವಕೀಲರು ಬೈಲ್ ಮರ್ಚೆಡ್, ಶರಣಪ್ಪ ದಿನ್ನಿ, ಮಲ್ಲೇಶಪ್ಪ ಅಮರೇಶ್ವರ್ ಕ್ಯಾಂಪ್, ಈರಣ್ಣ ಕುರ್ಡಿ, ನರಸಿಂಹಲು ಕುರ್ಡಿ ನರಸಿಂಹಲು ರಾಂಪೂರು, ಹನುಮಂತು ಅರೋಲಿ, ಬಸವರಾಜ ಅರೋಲಿಕರ್, ಕಾರ್ಯಕರ್ತರು ಭಾಗವಹಿಸಿದ್ದರು.






