ರಾಯಚೂರು | ಶಮ್ಸ್ ಎ ಆಲಂ ಹುಸೇನಿ ಉರೂಸ್‌ಗೆ ಅದ್ಧೂರಿ ಚಾಲನೆ

ರಾಯಚೂರು: ನಗರದ ಸೂಫಿ ಸಂತ ಹಝರತ್ ಸೈಯದ್ ಶಾಹ್ ಶಮ್ಸ್ –ಎ–ಆಲಂ ಹುಸೇನಿ(ರ) ದರ್ಗಾದ ಉರ್ಸ್ ಅಂಗವಾಗಿ ಶನಿವಾರ ಗಂಧದ ಮೆರವಣಿಗೆ( ಸಂದಲ್ ಮಾಲಿ) ನಡೆಯಿತು.
ಹಝರತ್ ಸೈಯದ್ ಶಮ್ಸ್–ಎ ಆಲಂ ಬಾಬಾ ಅವರ 555ನೇ ಉರ್ಸ್ ಅಂಗವಾಗಿ ದರ್ಗಾದ ಮುತವಲ್ಲಿ ಸೈಯದ್ ಅಶ್ರಫ್ ರಜಾ ಹುಸೇನಿ ಅವರ ನಗರದ ಅಂದ್ರೂನ್ ಕಿಲ್ಲಾ ಬಡಾವಣೆಯಲ್ಲಿರುವ ನಿವಾಸದಿಂದ ದರ್ಗಾದವರೆಗೆ ಗಂಧದ ಮೆರವಣಿಗೆ ನಡೆಯಿತು.
ಸಚಿವ ಎನ್.ಎಸ್.ಬೋಸರಾಜು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಸರ್ವಧರ್ಮದ ಮುಖಂಡರು ಪಾಲ್ಗೊಂಡರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಪೊಲೀಸರು ಸಂಚಾರ ನಿಯಂತ್ರಣ ಹಾಗೂ ಭಕ್ತರಿಗೆ ದರ್ಗಾದಲ್ಲಿ ದರ್ಶನ ಪಡೆಯಲು ನೆರವಾದರು.
ರವಿವಾರ ಝಿಯಾರತ್ ಕಾರ್ಯಕ್ರಮದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಒಂದು ತಿಂಗಳ ಕಾಲ ನಡೆಯುವ ಉರೂಸಿಗೆ ಜಿಲ್ಲೆಯ ಜನ ಮಾತ್ರವಲ್ಲದೇ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಾರೆ.
ಮುಸ್ಲಿಮರಿಗಿಂತ ಹಿಂದು ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ದರ್ಗಾಕ್ಕೆ ಆಗಮಿಸುತ್ತಾರೆ.







