ರಾಯಚೂರು | ಶರಬಣ್ಣ ಪಾಟೀಲ್, ಸೈಯದ್ ಸಾಬ ಮನ್ಸಲಾಪೂರ ಅವರಿಗೆ ಸಹಕಾರ ರತ್ನ ಪ್ರಶಸ್ತಿ: ಗಣ್ಯರಿಂದ ಸನ್ಮಾನ

ರಾಯಚೂರು: ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ನಿರ್ದೇಶಕರಾದ ಶರಬಣ್ಣ ಪಾಟೀಲ್ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮೀನುಗಾರರ ಸಹಕಾರ ಮಹಾಮಂಡಲದ ಸೈಯದ್ ಸಾಬ ಮನ್ಸಲಾಪೂರು ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಸಹಕಾರ ಚಳುವಳಿಯ ಬೆಳವಣೆಗೆಗೆ ಇವರು ಸಲ್ಲಿಸಿರುವ ಅವಿರತ ಸೇವೆಗಾಗಿ ಈ ಪುರಸ್ಕಾರ ಲಭಿಸಿದೆ.
ಬೆಂಗಳೂರಿನ ಗಾಯಿತ್ರಿ ವಿಹಾರ್ ಮೇಕ್ರಿ ಸರ್ಕಲ್ ಬಳಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಹಕಾರ ಇಲಾಖೆಯ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಅದೇ ರೀತಿ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶರಬಣ್ಣ ಪಾಟೀಲ್ ಹಾಗೂ ಸೈಯದ್ ಸಾಬ ಇವರಿಗೆ ಸಚಿವರಾದ ಎನ್.ಎಸ್. ಭೋಸರಾಜು, ಶಾಸಕರಾದ ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಎ.ವಸಂತಕುಮಾರ್ ಹಾಗೂ ಇತರರು ಸನ್ಮಾನಿಸಿದ್ದರು.
ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ರಾಯಚೂರಿನ ಮುಖ್ಯ ಕಚೇರಿಯಲ್ಲಿ ಕೂಡ ಶರಬಣ್ಣ ಪಾಟೀಲ್ ಹಾಗೂ ಸೈಯದ್ ಸಾಬ ಅವರಿಗೆ ಸಂಘದ ಅಧ್ಯಕ್ಷ ಜಯವಂತರಾವ್, ಉಪಾಧ್ಯಕ್ಷ ಶಶಿಧರ ಪಾಟೀಲ್, ಮಲ್ಲನಗೌಡ ಪಾಟೀಲ್ ಇನ್ನಿತರರು ಸನ್ಮಾನಿಸಿ ಗೌರವಿಸಿದರು.







