ರಾಯಚೂರು| ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಕೊಲೆ ಖಂಡಿಸಿ ಮೌನ ಪ್ರತಿಭಟನೆ

ಲಿಂಗಸುಗುರು: ಧಾರವಾಡ ನಗರ ನಿವಾಸಿಯಾಗಿರುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾರ ಕೊಲೆ ಇಡೀ ಮಾನವ ಕುಲ ತಲೆ ತಗ್ಗಿಸುವ ಹಾಗೂ ಖಂಡಿಸುವ ಘಟನೆಯಾಗಿದೆ ಎಂದು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯು ಲಿಂಗಸುಗುರಿನ ಗಡಿಯಾರ ಚೌಕಿನಲ್ಲಿ ಮೇಣದ ಬತ್ತಿ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸರ್, ಅಧ್ಯಕ್ಷರಾದ ಹುಸೇನ್ ಭಾಷಾ ಕೆ., ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾದ ಅಮೀನ್ , ಹಸನ್, ಆರಿಫ್, ವಸಿಂ, ಸಲೀಂ, ಅಬ್ದುಲ್ಲ ರಜಾಕ್, ಲಾಲಾ ಸಾಬ್, ಹಜರತ್, ಖಯ್ಯುಮ್, ಯುನುಸ್, ಬಾಬರ್, ಮಹೇಬೂಬ್, ಅಬ್ದುಲ್ಲ ವಹೀದ್ ಇಬ್ರಾಹಿಂ, ಅಬ್ಬಾಸ್, ಇರ್ಫಾನ್, ಹುಸೇನ್, ಅಯ್ಯುಬ್, ವಸಿಂ ಪಾಷಾ, ದಾದಾಪೀರ್ ಹಾಗೂ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story





