ರಾಯಚೂರು |ಮುಕುಂದ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಸಲು ಹರಿಯುವ ನದಿ ದಾಟಿ ಹೋಗುವ ಪರಿಸ್ಥಿತಿ : ಸೇತುವೆ ನಿರ್ಮಿಸಲು ಒತ್ತಾಯ

ರಾಯಚೂರು: ಮೃತರೊರ್ವರ ಅಂತ್ಯ ನಡೆಸಲು ಮಾಡಲು ಹರಿಯುವ ನದಿ ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಸಿಂಧನೂರು ತಾಲ್ಲೂಕಿನ ಮುಕುಂದ ಗ್ರಾಮದಲ್ಲಿ ನಡೆದಿದೆ
ಮುಕುಂದ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ಮಾಡಲು ಮೃತದೇಹವನ್ನು ತೆಪ್ಪದಲ್ಲಿ ತೆಗೆದುಕೊಂಡು ಅಂತ್ಯ ಸಂಸ್ಕಾರ ಮಾಡಬೇಕಿದೆ. ಗ್ರಾಮದಲ್ಲಿ ಸೋಮವಾರ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಮೃತರ ಅಂತ್ಯ ಸಂಸ್ಕಾರಕ್ಕಾಗಿ ಸಾರ್ವಜನಿಕರು ನದಿಯಲ್ಲಿ ಈಜಿ ಹಾಗೂ ಹರಿಗೋಲಿನಲ್ಲಿ ಮೃತದೇಹವನ್ನು ಸಾಗಿಸಿ ಅಂತ್ಯಕ್ರಿಯೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಗ್ರಾಮದ ಸ್ಮಶಾನ ನದಿ ದಂಡೆ ಮೇಲಿದೆ. ಮಳೆಗಾಲದಲ್ಲಿ ತುಂಗಭದ್ರ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಮಯದಲ್ಲಿ ಪ್ರತಿ ವರ್ಷ ಇದೆ ಸಮಸ್ಯೆ ಕಾಡುತ್ತದೆ. ಹಲವು ಬಾರಿ ಅಧಿಕಾರಿಗಳಿಗೆ ರಸ್ತೆ ಅಗತ್ಯ ಸೌಲಭ್ಯಗಳು ಒದಗಿಸಿ ಎಂದು ಮನವಿ ಮಾಡಿದರು, ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಡುಗಡ್ಡೆಯಲ್ಲಿರುವ ಸ್ಮಶಾನಕ್ಕೆ ಹೋಗಲು ಹರಿಗೋಲು ಮೂಲಕ ಮೃತದೇಹವನ್ನು ಸಾಗಿಸಿ, ಈಜಿ ನಡುಗಡ್ಡೆ ತಲುಪಿ ಶವಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಶವ ಸಂಸ್ಕಾರ ಮಾಡಲು ಹೋಗುವವರು ಜೀವ ಕೈಯಲ್ಲಿಟ್ಟುಕೊಂಡು ಹೋಗುವ ಪರಿಸ್ಥಿತಿ ಇದ್ದು, ಕನಿಷ್ಠ ರಸ್ತೆಯಾದರು ನಿರ್ಮಿಸಿ ಅನುಕೂಲ ಮಾಡಲಿ ಎಂದು ಗ್ರಾಮಸ್ಥರ ಮನವಿಯಾಗಿದೆ.







