ರಾಯಚೂರು | ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಸಲಹೆ

ರಾಯಚೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025ನೇ ಸಾಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ.22ರಿಂದ ನವೆಂಬರ್ 7ರವರೆಗೆ ನಡೆಯಲಿದ್ದು, ಸಮೀಕ್ಷೆಯು ಮನೆಮನೆಗೆ ಹೋಗಿ ಕುಟುಂಬದ ಅಂಕಿ-ಅಂಶಗಳನ್ನು ಸಂಗ್ರಹಿಸುವುದರ ಮೂಲಕ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.
ಸಮೀಕ್ಷೆಯ ಮುಖ್ಯ ಉದ್ದೇಶವು ರಾಜ್ಯದ ಎಲ್ಲಾ ವರ್ಗ/ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ತಿಳಿದು, ದುರ್ಬಲ ಅಥವಾ ಹಿಂದುಳಿದವರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಸೂಕ್ತ ಕಾರ್ಯಕ್ರಮ ರೂಪಿಸುವುದಾಗಿದೆ.
ಗಣತಿದಾರರು ಮನೆಮನೆಗೆ ಭೇಟಿ ನೀಡಿ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತಾರೆ. ಈ ಸಂದರ್ಭದಲ್ಲಿ ಪ್ರಶ್ನೆಗಳ ಸಂಬಂಧವಾಗಿ, ಮನೆಗೆ ಹಂಚಿದ UHI ಡಿ ಸ್ಟೀಕರ್ ಕಾಣದಿದ್ದರೆ, ಗಣತಿದಾರರು ತಮ್ಮ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿರುವ UHI ಡಿ ಸಂಖ್ಯೆಯನ್ನು ಉಪಯೋಗಿಸಬಹುದು. ಈ ಸಂಖ್ಯೆಯನ್ನು ವಿದ್ಯುತ್ ಮೀಟರ್ RR ನಂಬರೊಂದಿಗೆ ಹೊಂದಾಣಿಕೆ ಮಾಡಿದರೆ, ಆ ಮನೆಯ ಸಮೀಕ್ಷೆಗೆ ಬಳಸಬಹುದಾಗಿದೆ.
ಮನೆಗಳಿಗೆ UHI ಡಿ ನಂಬರ್ ಜನರೇಟ್ ಮಾಡದ ಅಥವಾ ಲಗತ್ತಿಸದ ಸಂದರ್ಭದಲ್ಲಿ, ಆ್ಯಪ್‌ನಲ್ಲಿ ಜನರೇಟ್ UHI ಡಿ ನಂಬರ್ ಆಯ್ಕೆ ಮಾಡಿಕೊಂಡು ಸಮೀಕ್ಷೆಯನ್ನು ಪೂರ್ಣಗೊಳಿಸಬಹುದು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 8050770004 ಅಥವಾ https://kscbc.karnataka.gov.in ಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







