ರಾಯಚೂರು | ಪೊಲೀಸ್, ಪತ್ರಕರ್ತರ ಕ್ರೀಡಾಕೂಟಕ್ಕೆ ಎಸ್ಪಿ ಎಂ.ಪುಟ್ಟಮಾದಯ್ಯ ಚಾಲನೆ
ರಾಯಚೂರು : ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಮತ್ತು ಪತ್ರಕರ್ತರ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಬ್ಯಾಟ್ ಬೀಸಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪೊಲೀಸರು ಮತ್ತು ಪತ್ರಕರ್ತರು ಕೆಲಸದ ಒತ್ತಡದ ಮಧ್ಯೆ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಸೋಲು ಗೆಲುವು ಸಾಮಾನ್ಯ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ಹರೀಶಕುಮಾರ, ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೆಯ ಕರ್ನಾಡ್, ಯರಗೇರ ಸಿಪಿಐ ಲಿಂಗಪ್ಪ, ಸದರ್ ಬಜಾರ್ ಸಿಪಿಐ ಉಮೇಶ ಕಾಂಬ್ಳೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಪತ್ರಕರ್ತರಾದ ಭೀಮೇಶ ಪೂಜಾರ್, ರಾಮಕೃಷ್ಣ, ಭೀಮ್ ಸೇನ್ ಆಚಾರ್, ಸಿದ್ದಯ್ಯ ಸ್ವಾಮಿ, ನೀಲಕಂಠ ಸ್ವಾಮಿ ದಿನ್ನಿ, ಶ್ರೀನಿವಾಸ, ಶ್ರೀಕಾಂತ್ ಸಾವೂರ ಸೇರಿದಂತೆ ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.