ರಾಯಚೂರು | ಹಳೆ ದ್ವೇಷ ಹಿನ್ನೆಲೆ: ಗಣೇಶ ವಿಸರ್ಜನೆಯ ವೇಳೆ ಕಲ್ಲು ತೂರಾಟ

ರಾಯಚೂರು, ಸೆ.7: ಹಳೆ ದ್ವೇಷ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಅದರ ವೀಡಿಯೊ ವೈರಲ್ ಆಗಿರುವುದು ವರದಿಯಾಗಿದೆ.
ರಾಯಚೂರು ನಗರದ ಗಂಗಾನಿವಾಸ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಯ ವಿಸರ್ಜನೆ ಮೆರವಣಿಗೆ ಹೋಗುವಾಗ ಪ್ರಶಾಂತ್ ಹಾಗೂ ಪ್ರವೀಣ್ ಎಂಬ ಯುವಕರು ವಿನಯ್ ಕುಮಾರ್ ಹಾಗೂ ಗಣೇಶ ಎಂಬವರ ಮೇಲಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮನೆಯ ಮಾಳಿಗೆಯ ಮೇಲಿಂದ ಕಲ್ಲೆಸೆದಿದ್ದಾರೆ. ಮೆರವಣಿಗೆಯಲ್ಲಿ ಇದ್ದವರು ಪ್ರಶಾಂತ್ ಹಾಗೂ ಪ್ರವೀಣ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಗಾಯಗೊಂಡ ವಿನಯ ಕುಮಾರ್ ಹಾಗೂ ಗಣೇಶ ಅವರು ಮಂಗಳವಾರಪೇಟೆಯ ನಿವಾಸಿಗಳು ಎಂದು ತಿಳಿದು ಬಂದಿದ್ದು, ತಮ್ಮ ಏರಿಯಾದ ಗಣೇಶನನ್ನು, ಆರೋಪಿಗಳು ವಾಸಿಸುವ ಗಂಗಾನಿವಾಸದ ಬಳಿಯಿಂದಲೇ ವಿಸರ್ಜನಾ ರ‍್ಯಾಲಿ ನಡೆದಿದ್ದರಿಂದ ತಮ್ಮ ಏರಿಯಾದಲ್ಲಿ ರ‍್ಯಾಲಿ ಮಾಡಿದ್ದನ್ನು ಪ್ರಶ್ನಿಸಿ, ಕಲ್ಲೆಸೆದಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ಸದರ್‌ಬಝಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





