ರಾಯಚೂರು: ಒಂದೇ ಗ್ರಾಮದ ಮೂವರು ಬಾಲಕರು ನಾಪತ್ತೆ

ರಾಯಚೂರು: ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಹಿಂದಿರುಗಿ ಬಾರದೆ ನಾಪತ್ತೆಯಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದಲ್ಲಿ ನಡೆದಿದೆ.
ಕರಡಕಲ್ ಗ್ರಾಮದ ಗೆಳೆಯರಾದ ಮಂಜುನಾಥ ಪರಸಪ್ಪ ಬ್ಯಾಗಿ(14), ರೋಹಿತ್ ಗದ್ದೆಪ್ಪ ಭಜಂತ್ರಿ(14) ಹಾಗೂ ಪ್ರಜ್ವಲ್ ಗದ್ದೆಪ್ಪ (16) ನಾಪತ್ತೆಯಾದವರು. ಮೇ 6ರಂದು ಸಂಜೆ 7 ಗಂಟೆಗೆ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಕರಡಕಲ್ ಗ್ರಾಮ ಸೇರಿ ಸುತ್ತಮುತ್ತ ಊರುಗಳಲ್ಲಿ ಹುಡುಕಾಡಿದರೂ ಬಾಲಕರು ಪತ್ತೆಯಾಗಿಲ್ಲ ಎಂದು ಮಕ್ಕಳ ಪೋಷಕರು ಹೇಳಿದ್ದಾರೆ.
ಮಕ್ಕಳು ಕಾಣೆಯಾಗಿರುವ ಬಗ್ಗೆ ಪೋಷಕರು ಜೂನ್ 9ರಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story