ರಾಯಚೂರು | ಕಟ್ಟಡದ ಮೇಲ್ಚಾವಣಿ ಕುಸಿದು ಮೂವರು ಮೃತ್ಯು

ದೇವದುರ್ಗ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಕಿರುಚಿತ್ರವೊಂದರ ಪೊಸ್ಟರ್ ಹಾಕುವಾಗ ಕಟ್ಟಡದ ಮೇಲ್ಚಾವಣಿ ಕುಸಿದು ಮೂವರು ಮೃತಪಟ್ಟಿದ್ದು, 7 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಮೃತರನ್ನು ನಾಗರಾಜ(21), ರವಿಕುಮಾರ(21), ಅರ್ಜುನ ಕರಿಗುಡ್ಡ(21) ಎಂದು ಗುರುತಿಸಲಾಗಿದೆ. ಇವರು '2025 ಅಂತ್ಯವಾಯಿತು' ಎಂಬ ಕಿರುಚಿತ್ರದ ಪೋಸ್ಟರ್ ಹಾಕುವಾಗ ಏಕಾಏಕಿ ಕಟ್ಟದ ಮೇಲ್ಚಾವಣಿ ಕುಸಿದಿದೆ. ಘಟನೆಯಲ್ಲಿ ನಾಗರಾಜ ಮತ್ತು ರವಿಕುಮಾರ ಅವರು ಸ್ಥಳದಲ್ಲೇ ಮೃತಪಟ್ಟರೆ ಅರ್ಜುನ ಕರಿಗುಡ್ಡ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಇದಲ್ಲದೆ ಘಟನೆ ವೇಳೆ ಎಸ್ಟಿ ವಸತಿ ನಿಲಯದ 7 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
Next Story




