ರಾಯಚೂರು | ನರೇಗಾ ಯೋಜನೆಯ ಕುರಿತು ತರಬೇತಿ ಕಾರ್ಯಾಗಾರ

ರಾಯಚೂರು : ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ನೈಸರ್ಗಿಕ ಸಂಪತ್ತನ್ನು ರಕ್ಷಿಸುವಲ್ಲಿ ಕಾಯಕ ಬಂಧುಗಳ ಪಾತ್ರ ಬಹು ದೊಡ್ಡದಿದೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಪಣ ತೊಡಬೇಕು ಎಂದು ತಾಲೂಕು ಪಂಚಾಯತ್ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಂದ್ರಶೇಖರ ರವರು ತಿಳಿಸಿದರು.
ಇಂದು ಶುಕ್ರವಾರ ರಾಯಚೂರು ತಾಲೂಕಿನ ಗಿಲ್ಲೇಸೂಗುರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಸ್ವರಾಜ್ ಅಭಿಯಾನ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ರಾಯಚೂರು ಮತ್ತು ಇನಗ್ರೀಡ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಕಾಯಕ ಬಂಧುಗಳಿಗೆ ನರೇಗಾ ಯೋಜನೆಯ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮೇಟ್ ನಲ್ಲಿ ತಾಳ್ಮೆ, ಸಹಬಾಳ್ವೆ ಮತ್ತು ಜ್ಞಾನದೊಂದಿಗೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ನಿಷ್ಠೆಯಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೆಲ ಜಲ ಸಂರಕ್ಷಣೆಗಾಗಿ ಹೆಚ್ವಿನ ಅದ್ಯತೆಯನ್ನು ನೀಡಿದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವ ದಿಸೆಯಲ್ಲಿ ಕಾಯಕ ಬಂಧುಗಳು ಶಕ್ತಿ, ಸಾಮರ್ಥ್ಯವನ್ನು ಅರಿತುಕೊಂಡು, ಪರಿಸರ ಪ್ರೇಮಿಯಾಗಿ ಕೆಲಸ ಮಾಡಿ ಈ ಪ್ರಕೃತಿ ಒದಗಿಸಿರುವ ಸಂಪತ್ತನ್ನು ಉಳಿಸಿ ಬೆಳೆಸಲು ಪ್ರಮಾಣಿ ಪ್ರಯತ್ನ ಮಾಡಬೇಕೆಂದು ಕಾಯಕ ಬಂಧುಗಳಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಐಇಸಿ ಧನರಾಜ, ಎಪ್ ಇ.ಸಿ ಶಂಕಗೌಡ, ಇನಗ್ರೇಡ್ ಸಂಸ್ಥೆಯ ಜಯರಾಜ ಜಕೋಬ್, ಬಿ.ಎಪ್.ಟಿ ಇಮಾನವೇಲ್ ಹಾಗೂ ತರಬೇತುದಾರರು ಮತ್ತು ಐದು ಗ್ರಾ.ಪಂ ಕಾಯಕ ಬಂಧುಗಳು ಹಾಜರಿದ್ದರು.







