ರಾಯಚೂರು | ಸಾರಿಗೆ ಬಸ್- ಬೈಕ್ ನಡುವೆ ಢಿಕ್ಕಿ; ಸವಾರ ಮೃತ್ಯು

ರಾಯಚೂರು : ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸ್ಥಳದಲ್ಲೇ ಸವಾರ ಮೃತಪಟ್ಟಿರುವ ಘಟನೆ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಕೆಇಬಿ ಬಳಿ ನಡೆದಿದೆ.
ಸಿರಿಯಪ್ಪ ರಾಮೇಶ್ (30) ಮೃತ ಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.
ದೇವದುರ್ಗ ಕಡೆಯಿಂದ ಬರುತ್ತಿದ್ದ ಬಸ್‌ಗೆ ಬೈಕ್ ಸವಾರ ಕೆಇಬಿ ಕ್ರಾಸ್ ಬಳಿ ವೇಗವಾಗಿ ಚಲಾಯಿಸಿ ಬರುವಾಗ ನಿಯಂತ್ರಣ ತಪ್ಪಿ ಢಿಕ್ಕಿಯಾಗಿದೆ ಎನ್ನಲಾಗಿದೆ.
ಢಿಕ್ಕಿಯಾದ ರಭಸಕ್ಕೆ ಬೈಕ್ ಸವಾರನ ತೆಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Next Story





