ರಾಯಚೂರು| ಉಚಿತ್ರ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ: 400ಕ್ಕೂ ಹೆಚ್ಚು ಜನರು ನೋಂದಣೆ

ಲಿಂಗಸುಗೂರು: ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಬಯ್ಯಾಪೂರ ಅಭಿಮಾನಿಗಳ ಬಳಗ, ಸ್ಥಾಮಿ ವಿವೇಕಾನಂದ ಸೇವಾಶ್ರಮ ಬೆಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಘ ರಾಯಚೂರು ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಯಶಸ್ವಿಯಾಯಿತು.
ಶಿಬಿರದಲ್ಲಿ ಇದುವರೆಗೆ 400ಕ್ಕೂ ಅಧಿಕ ಜನರು ನೋಂದಣೆ ಮಾಡಿಸಿದ್ದಾರೆ. 500ರ ಗಡಿ ದಾಟಿದರೂ ನೋಂದಣೆ ಮಾಡಿಕೊಳ್ಳುತ್ತೇವೆ. ಅವರಿಗೆ ಇನ್ನೊಂದು ದಿನಾಂಕ ನಿಗದಿಪಡಿಸಿ ಶಸ್ತ್ರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಬಿರದ ಆಯೋಜಕರಾದ ಡಾ.ನಾಗನಗೌಡ ಪಾಟೀಲ್ ಬಯ್ಯಾಪುರ, ಮುಖಂಡ ಬಸವರಾಜಗೌಡ ಗಣೇಕಲ್ ಹೇಳಿದರು.
ಈ ಉಚಿತ ನೇತ್ರಾ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಕಣ್ಣು ಎನ್ನುವುದು ಮನುಷ್ಯನಿಗೆ ಅತ್ಯಂತ ಮಹತ್ವದ ಅಂಗ. ಜಗವ ನೋಡುವ ಜೀವಿಗಳು ಕೊನೆಯವರೆಗೂ ಸುಖವಾಗಿರಬೇಕು. ನೇತ್ರ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳುವ ವಯೋವೃದ್ದರು ನೆಮ್ಮದಿಯಾಗಿ ಬದುಕು ಕಳೆಯುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ಡಿ.ಜಿ.ಗುರಿಕಾರ, ಶಶಿಧರ ಆಶಿಹಾಳ, ಶರಣಪ್ಪ ಹುನಕುಂಟಿ, ನಾಗರಾಜ ಆಸ್ಕಿಹಾಳ, ಚಂದ್ರು ಗೊರೇಬಾಳ ಸೇರಿ ಹಲವರು ಉಪಸ್ಥಿತರಿದ್ದರು.







