ರಾಯಚೂರು | ಕಮಲಾಪೂರು ಗ್ರಾಮ ಪಂಚಾಯತ್‌ಯಲ್ಲಿ ʼದುಡಿಯೋಣ ಬಾʼ ಅಭಿಯಾನದಡಿ ವಿಶ್ವ ಕಾರ್ಮಿಕ ದಿನ ಆಚರಣೆ

ರಾಯಚೂರು : ಕಮಲಾಪೂರು ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದುಡಿಯೋಣ ಬಾ..! ಅಭಿಯಾನದಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಕ್ ಕತ್ತರಿಸಿ ಎಲ್ಲಾ ಕೂಲಿ ಕಾರ್ಮಿಕರಿಗೆ ಸಿಹಿ ಹಂಚಿ ಕಾರ್ಮಿಕ ದಿನಾಚರಣೆಯನ್ನು ಸಂಭ್ರಮಿಸಲಾಯಿತು.
ನಂತರ ಮಾತನಾಡಿದ ಹನುಮಂತ ಸಹಾಯಕ ನಿರ್ದೇಶಕರು ಮಾತನಾಡಿ, ಇಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಇಡೀ ವಿಶ್ವದಲ್ಲಿ ಆಚರಣೆ ಮಾಡಿ ಕಾರ್ಮಿಕ ವರ್ಗದ ಶ್ರಮೀಕರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುರೇಶ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಾರಕೇಶ್ವರಿ ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Next Story





