ರಾಯಚೂರು | ಪ್ರಧಾನಿ ಮೋದಿ ಕುರಿತು ಆಕ್ಷೇಪಾರ್ಹ ಪೋಸ್ಟ್ ಆರೋಪ : ಯುವಕನ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ರಾಯಚೂರು : ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಫೇಲ್ ವಿಮಾನದ ಕುರಿತು ಆಕೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಪೋಲಿಸರು ಯುವಕನೊರ್ವನನ್ನು ಬಂಧಿಸಿದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಬಂಧಿತನನ್ನು ಸಿಂಧನೂರು ತಾಲೂಕಿನ ಕೆ.ಹೊಸಳ್ಳಿ ಗ್ರಾಮದ ನಿವಾಸಿ ಅಜ್ಮೀರ್ (37) ಎಂದು ಗುರುತಿಸಲಾಗಿದೆ.
ಎಡಿಟೆಡ್ ವೀಡಿಯೊದಲ್ಲಿ ರಫೇಲ್ ಯುದ್ಧ ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾರಿಸುವಂತೆ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಎನ್ನಲಾಗಿದೆ. ಯುವಕನನ್ನು ತುರ್ವಿಹಾಳ ಪೊಲೀಸರು ಬಂಧಿಸಿದ್ದಾರೆ.
Next Story





