ರಾಯಚೂರು | ಕೃಷಿ ಹೊಂಡದಲ್ಲಿ ಬಿದ್ದು ಯುವಕ ಮೃತ್ಯು

ಸುರೇಶ್ ಶರಣಪ್ಪ
ರಾಯಚೂರು : ಕೃಷಿ ಹೊಂಡದಲ್ಲಿ ಬಿದ್ದು ಯುವಕನೊರ್ವ ಮೃತಪಟ್ಟಿರುವ ಘಟನೆ ರಾಯಚೂರು ತಾಲ್ಲೂಕಿನ ಕಸ್ಬೆ ಕ್ಯಾಂಪ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ರಾಯಚೂರು ತಾಲ್ಲೂಕಿನ ನೆಲಹಾಳ ಗ್ರಾಮದ ನಿವಾಸಿ ಸುರೇಶ್ ಶರಣಪ್ಪ (25) ಎಂದು ಗುರುತಿಸಲಾಗಿದೆ.
ಯುವಕರ ಗುಂಪೊಂದು ಈಜಾಡಲು ಹೋದ ಸುರೇಶ್ ನೀರಿನಲ್ಲಿ ಜಿಗಿದು ಮೇಲೆಕ್ಕೆ ಬರಲಿಲ್ಲ. ಯುವಕರು ಗಾಬರಿಗೊಂಡು ಗ್ರಾಮದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗ್ರಾಮದವರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
Next Story





