ರಾಯಚೂರು: ಯುವಕ ನಾಪತ್ತೆ

ರಾಯಚೂರು: ಮನೆಯಿಂದ ಹೊರ ಹೋಗಿ ಬರುತ್ತೇನೆ ಎಂದು ಹೇಳಿ ಅ. 14 ರಂದು ಬೆಳಿಗ್ಗೆ ಹೋದ ರಾಯಚೂರು ನಗರದ ಮಂಗಳವಾರಪೇಟೆಯ ಪರಕೋಟಾ ಮೊಹಮ್ಮದ್ ಶೋಯೆಬ್ (19) ಎಂಬ ಯುವಕ ರಾತ್ರಿಯಾದರೂ ಮನೆಗೆ ಬಂದಿಲ್ಲ. ಹುಡುಕಾಡಲಾಗಿ ಪತ್ತೆಯಾಗಿಲ್ಲ ಎಂದು ಸದರ್ ಬಜಾರ್ ಪೊಲೀಸ್ ಠಾಣೆಯ ಗುನ್ನೆ ನಂ 97/2025 ಕಲಂ ಮನುಷ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈತ 5.6 ಅಡಿ ಎತ್ತರ, ಕಪ್ಪು ಕೂದಲಿನ ಬಣ್ಣ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕ್ರೀಮ್ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಬ್ರೌನ್ ಕಲರ್ ಫಾರ್ಮುಲಾ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ.
ಈತನ ಬಗ್ಗೆ ಯಾವುದಾದರೂ ಉಪಯುಕ್ತ ಮಾಹಿತಿ ಸಿಕ್ಕಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ದೂರವಾಣಿ ಸಂ: 08532-226148 ಅಥವಾ ಆರಕ್ಷಕ ನಿರೀಕ್ಷಕರು ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ಮೊ.ನಂ. 9480803830 ವಿಳಾಸಕ್ಕೆ ಮಾಹಿತಿ ನೀಡಲು ಸದರ್ ಬಜಾರ್ ಪೊಲೀಸ್ ಠಾಣೆಯ ಆರಕ್ಷಕರ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





