RAYACHUR | ಸಿಂಧನೂರು: ನಿರ್ಮಾಣ ಹಂತದ ಸೇತುವೆ ಬೈಕ್ ಢಿಕ್ಕಿ; ಇಬ್ಬರು ಮೃತ್ಯು

ರಾಯಚೂರು: ನಿರ್ಮಾಣ ಹಂತದ ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಬೂತಲದಿನ್ನಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಮೃತರು ಲಿಂಗಸಗೂರು ತಾಲೂಕಿನ ಹಿರೇನಗನೂರು ನಿವಾಸಿ ಶರಣಪ್ಪ(28) ಹಾಗೂ ಯದ್ದಲದೊಡ್ಡಿ ನಿವಾಸಿ ಯಲ್ಲಪ್ಪ (29) ಮೃತಪಟ್ಟವರು ತಿಳಿದುಬಂದಿದೆ. ಇವರಿಬ್ಬರು ಸೋಮವಾರ ರಾತ್ರಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೂತಲದಿನ್ನಿ ಗ್ರಾಮದ ಹತ್ತಿರ ಸಿಂಧನೂರು ಮತ್ತು ಮಸ್ಕಿ ಹೆದ್ದಾರಿಯ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸಿಂಧನೂರು ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
Next Story





