ರಾಯಚೂರು ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ : ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ

ರಾಯಚೂರು: ತಮ್ಮ ಅಧಿಕಾರಾವಧಿಯಲ್ಲಿ ಗತಿ ಶಕ್ತಿಯೋಜನೆಯಡಿ ಬಿಡುಗಡೆಯಾದ 50 ಕೋಟಿ ರೂ. ವೆಚ್ಚದ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ರೈಲ್ವೆ ಸಲಹಾ ಸಮಿತಿ ಸದಸ್ಯರುಗಳು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು, ಈಗಾಗಲೇ ಎರಡನೇ ಪ್ಲಾಟ್ ಫಾರಂ ಕಾಮಗಾರಿ ಪೂರ್ಣಗೊಂಡಿದ್ದು, ಮೂರು ಎಸ್ಕಲೇಟರ್ ಗಳು, ವಿದ್ಯುತ್ ಚಾಲಿತ ವಾಹನಗಳು ಕಾರ್ಯಾರಂಭ ಮಾಡಲಿದ್ದು, ಒಂದು ಲಿಪ್ಟ್ 8-10 ದಿನಗಳಲ್ಲಿ ಪುನರಾರಂಭವಾಗಲಿದ್ದು, ಇನ್ನೊಂದು ಲಿಪ್ಟ್ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ನಾಲ್ಕು ಓವರ್ ಬ್ರಿಡ್ಜ್ ಗಳು ಈಗಾಗಲೇ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಅಮೃತ್ ಭಾರತ ಯೋಜನೆಯಲ್ಲಿ ರಾಯಚೂರು ಮತ್ತು ಯಾದಗಿರಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಪಡಿಸುವುದಕ್ಕಾಗಿ ಜನಪ್ರತಿನಿಧಿಗಳಿಂದ ಸಲಹೆ ಮತ್ತು ಸೂಚನೆಯನ್ನು ಪಡೆಯಲು ಗುಂಟಕಲ್ ವಿಭಾಗದಿಂದ ಹಿರಿಯ ಅಧಿಕಾರಿಗಳಾದ DFntry ಗುಂತಕಲ್ ಮ್ಯಾನೇಜರ್ ಜಿತೇಂದ್ರ ಕುಮಾರ್, Du Du ಜಗದೀಶ EHSM DEN ನಾರ್ತ್ ಗುಂತಕಲ್ ಅವರು ನಿನ್ನೆ (ನ.01) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಕ್ಕೆ ಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ತಾವು ಮಾಹಿತಿ ನೀಡಿರುವುದಾಗಿ ಡಾ.ಬಾಬುರಾವ್ ಹಾಗೂ ರೈಲ್ವೆ ಸಲಹಾ ಸಮಿತಿ ಸದಸ್ಯರುಗಳಾದ ಎಂ.ಮಾರಪ್ಪ ಎ ಚಂದ್ರಶೇಖರ್, ರಮೇಶ್ ಭಾಗ್ರಾಜ್, ಸೀತಾ ನಾಯಕ್ ಚಂದ್ರಶೇಖರ್ ಜಾನೇಕಲ್ ತಿಳಿಸಿದ್ದಾರೆ.







