ಫೆ.21ರಂದು ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ ಅಹಮದ ಅವರ ವಿಚಾರ ಸಂಕಿರಣ: ಬಶೀರ್ ಅಹ್ಮದ್

ರಾಯಚೂರು: ಟ್ಯಾಗೋರ ಸ್ಮಾರಕ ಶಿಕ್ಷಣ ಸಂಸ್ಥೆ, ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಹೊಸಮನಿ ಪ್ರಕಾಶನ ರಾಯಚೂರು ವತಿಯಿಂದ ಫೆ. 21 ರಂದು ಬೆಳಿಗ್ಗೆ 10-30 ಗಂಟೆಗೆ ಕವಿ ಕೆ. ಎಸ್. ನಿಸಾರ ಅಹಮದ್ ಅವರ ಬದುಕು- ಬರಹ ಕುರಿತು ವಿಚಾರ ಸಂಕಿರಣವನ್ನು ನಗರದ ಟ್ಯಾಗೋರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹೊಸಮನಿ ಪ್ರಕಾಶನದ ಅಧ್ಯಕ್ಷ ಬಶೀರ ಅಹ್ಮದ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೆಬೂಬ್ ಪಾಷಾ ಹಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಟ್ಯಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಕೆ. ಅಮರೇಶ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ, ಎಸ್.ಆರ್. ಕೆ.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಎಂ. ವಿರೂಪಾಕ್ಷಿ, ಸುರಭಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಬಿ.ಸುರೇಶ, ತ್ರಿಮೂರ್ತಿ ಪ್ರಕಾಶನದ ಪ್ರಧಾನ ಸಂಚಾಲಕ ಯುವ ಕವಿ ಯಲ್ಲಪ್ಪ ಎಂ. ಮರ್ಚೇಡ್, ಕನ್ನಡ ಕ್ರಿಯಾಸಮಿತಿ ಜಿಲ್ಲಾ ಘಟಕದ ಸದಸ್ಯ ಸಿದ್ದಯ್ಯ ಭಾಗವಹಿಸಲಿದ್ದಾರೆ ಎಂದರು.
ಈಶಾನ್ಯ ವಾರ್ತೆ ಸಂಪಾದಕ ಖಾನ್ ಸಾಬ್ ಮೋಮಿನ್ ಹಾಗೂ ವರದಿಗಾರ ಗೌಡಪ್ಪಗೌಡ ಗುರಡ್ಡಿ ಅವರು ಕೆ.ಎಸ್. ನಿಸಾರ್ ಅಹಮದ್ ಅವರ ಬದುಕು ಹಾಗೂ ಬರಹ ಕುರಿತು ತಿಳಿಸಲಿದ್ದಾರೆ ಎಂದು ಹೇಳಿದರು.
ಷಂಷಾದ ಬೇಗಂ, ರುದ್ರಯ್ಯಗುಣಾರಿ,ರಾಮಣ್ಣ ಮ್ಯಾದಾರ,ಎಂ. ವೀರಭದ್ರಯ್ಯಸ್ವಾಮಿ, ಮಹೇಂದ್ರ ಸಿಂಗ್ ಉಪಸ್ಥಿತರಿದ್ದರು.







