ಜಾಲಹಳ್ಳಿಯಲ್ಲಿ ಎಸ್‍ಎಫ್‍ಐ ರಾಜ್ಯ ಮಟ್ಟದ ಜಾಥಾಕ್ಕೆ ಅದ್ದೂರಿ ಸ್ವಾಗತ

ರಾಯಚೂರು: ಹಾಸ್ಟೆಲ್ ಗಳ ಬಲವರ್ಧನೆಗಾಗಿ ರಾಜ್ಯ ವ್ಯಾಪಿ ನಡೆಯುತ್ತಿರುವ ಎಸ್‍ಎಫ್‍ಐನ ರಾಜ್ಯ ಮಟ್ಟದ ಜಾಥ ಗುರುವಾರ ಜಿಲ್ಲೆಯ ಲಿಂಗಸುಗೂರು ತಾಲೂಕು, ಹಟ್ಟಿ ಮಾರ್ಗವಾಗಿ ದೇವದುರ್ಗ ತಾಲೂಕಿನ ಜಾಲಹಳ್ಳಿಗೆ ತಲುಪಿತು.
ಜಾಲಹಳ್ಳಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪ್ರಗತಿ ಪರಚಿಂತಕರಾದ ಬಸನಗೌಡ ದೇಸಾಯಿ ಮಾತನಾಡಿ,ರಾಜ್ಯ ಸರ್ಕಾರ ವಾರ್ಷಿಕ ಬಜೆಟ್‍ನಲ್ಲಿ ಶೇಕಡಾ 10ರಷ್ಟು ಹಣ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳು ಮುಚ್ಚಿವೆ ಜೊತೆಗೆ ಶಿಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ ಎಂದು ದೂರಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳು ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದ್ದವರಿಗೆ ಶಿಕ್ಷಣ ಇಲ್ಲದವರಿಗೆ ಮೃಷ್ಟಾನ್ನಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಕೂಡಲೇ ಸರ್ಕಾರ ತನ್ನ ವಾರ್ಷಿಕ ಬಜೆಟ್‍ನಲ್ಲಿ ಶೇಕಡಾ 10ರಷ್ಟ್ಟು ಹಣ ಮೀಸಲಿಡಬೇಕು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಗನೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯ ಸಾಕಷ್ಟ್ಟು ಹಣವನ್ನು ಶಿಕ್ಷಣಕ್ಕೆ ಈ ಭಾಗದ ಚುನಾಯಿತ ಪ್ರತಿನಿಧಿಗಳು ಖರ್ಚು ಮಾಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಪೂಜಾರಿ,ಶಬ್ಬಿರ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಎಸ್‍ಎಫ್‍ಐ ರಾಜ್ಯ ಉಪಾಧ್ಯಕ್ಷರಾದ ಡಾ.ದೊಡ್ಡ ಬಸವರಾಜ ಅವರು, ದಾಂಡೆಲಿಯಿಂದ ಆರಂಭವಾದ ಎಸ್‍ಎಫ್‍ಐ ಜಾಥಾ ಕುರಿತು ವಿವರಿಸಿದರು.
ರಾಜ್ಯ ಮುಖಂಡರಾದ ಗಣೇಶ ರಾಠೋಡ್,ಗ್ಯಾನೇಶ ಕಡಗದ್, ರಮೇಶ್ ವೀರಾಪೂರ ದಿಲ್ ಶಾದ್ ಹಾಗೂ ವಿವಿಧ ಸಂಘನೆಯ ಮುಖಂಡರಾದ ಮೋನೇಶ ದಾಸರ, ರಿಯಾಜ್, ಹನುಮಂತ ಗುರಿಕಾರ, ದುರುಗಪ್ಪ ಹೊರಟ್ಟಿ, ರಾಜು ಹಾಗೂ ಮತ್ತಿತರರಿದ್ದರು. ಮಹಾಲಿಂಗ ದೊಡ್ಡಮನಿ ಸ್ವಾಗತಿಸಿದರು. ಸಂತೋಷ ತ್ಯಾಪ್ಲಿ ವಂದಿಸಿದರು.







