ಗವಾಯಿ ಮೇಲೆ ಶೂ ಎಸೆದ ಘಟನೆಯು ಸಂವಿಧಾನದ ಮೇಲೆ ಆಕ್ರಮಣ ಮಾಡುವ ಹುನ್ನಾರ : ವೆಲ್ಫೇರ್ ಪಾರ್ಟಿ

ಮಾನ್ವಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಹಿ ಅವರ ಮೇಲೆ ಬೂಟ್ ಎಸೆದ ಘಟನೆಯು ಸಂವಿಧಾನದ ಮೇಲೆ ಆಕ್ರಮಣ ಮಾಡುವ ಹುನ್ನಾರ. ಈ ಕೃತ್ಯ ಅತ್ಯಂತ ಖಂಡನೀಯ, ಅಪರಾಧಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಮತ್ತು ಈ ಷಡ್ಯಂತ್ರ ದ ಹಿಂದೆ ಇರುವ ಸಂಘಟನೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೇನ್ ಅಗ್ರಹಿಸಿದ್ದಾರೆ.
ನಗರದಲ್ಲಿ ವೆಲ್ಫೇರ್ ಪಾರ್ಟಿ ವತಿಯಿಂದ ಆಯೋಜಿಸಲಾಗಿದೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಸಂವಿಧಾನ ವಿರೋಧಿ ಶಕ್ತಿಗಳು ದಿನೇ ದಿನೇ ಸಂವಿಧಾನ ಮತ್ತು ಸಂವಿಧಾನಿಕ ಹುದ್ದೆಗಳನ್ನು ಅವಮಾನ ಮಾಡುವ ಮೂಲಕ ಸಂವಿಧಾನ ನಾಶಕ್ಕೆ ಯತ್ನಿಸುತ್ತಿವೆ. ಈ ಘಟನೆ ಸ್ವತಃ ಸಂಭವಿಸಿದುದಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಹೇಳಿದರು.
ಭಾರತದಲ್ಲಿ ಪರ್ಯಾಯ ಸಂವಿಧಾನ ರಚನೆಯ ಹೋರಾಟವನ್ನು ಖಂಡಿಸುವ ಪ್ರಯತ್ನಗಳು ಸಂವಿಧಾನ ವಿರೋಧಿ ಶಕ್ತಿಗಳಿಗೆ ಹೆಚ್ಚುವರಿ ಧೈರ್ಯ ನೀಡಿವೆ. ಅಂಬೇಡ್ಕರ್ ವಾದಿಗಳು ಮತ್ತು ಸಂವಿಧಾನ ಪ್ರೇಮಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಜಾನೇಕಲ್ ದಲಿತ ಮುಖಂಡರು, ಮಾರೆಪ್ಪ ಹರವಿ ಜಿಲ್ಲಾಧ್ಯಕ್ಷರು ಜನಶಕ್ತಿ ರಾಯಚೂರು, ಶರಣು ಜಿಲ್ಲಾಧ್ಯಕ್ಷರು ಎದ್ದೇಳು ಕರ್ನಾಟಕ,ಹನುಮಂತ ಕೋಟೆ ಅಧ್ಯಕ್ಷರು ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್, ಫರೀದ್ ಉಮರಿ ಮತ್ತು ಶರ್ಫುದ್ದಿನ್ ಪೋಟ್ನಾಳ್ ಸೀಟು ಅಧ್ಯಕ್ಷರು ಮಾತನಾಡಿದರು.







