Sindhanur: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ; ಜಿ.ಪಂ. ಎಇಇ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಜಿ.ಪಂ. ಉಪವಿಭಾಗದ ಕಚೇರಿಯಲ್ಲಿ ಶೋಧ
ರಾಯಚೂರು: ಜಿ.ಪಂ. ಸಿಂಧನೂರು ಉಪವಿಭಾಗದ ಎಇಇ ವಿಜಯಲಕ್ಷ್ಮಿ ಅವರ ಮೇಲೆ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ದೂರು ಸಲ್ಲಿಕೆಯಾದ ಹಿನ್ನೆಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಉಪವಿಭಾಗದ ಕಚೇರಿ ಮೇಲೆ ದಾಳಿ ಮಾಡಿ ಶೋಧ ನಡೆಸಿದರು.
ಕೊಪ್ಪಳದ ಲೋಕಾಯುಕ್ತ ಪೊಲೀಸ್ ಅಧಿಕಾರಿ ಶೈಲಾ ಪ್ಯಾಟೆಶೆಟ್ಟರ್ ತಂಡದಿಂದ ಮಂಗಳವಾರ ಬೆಳಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಿಂಧನೂರು ಉಪವಿಭಾಗದ ಕಛೇರಿ ಮೇಲೆ ದಾಳಿ ನಡೆದು ದಾಖಲಾತಿಗಳ ಶೋಧಕಾರ್ಯ ನಡೆಸಲಾಯಿತು.
ವಿಜಯಲಕ್ಷ್ಮಿ ಅವರು ಕಳೆದ ಎರಡು ವರ್ಷದಿಂದ ಸಿಂಧನೂರಿನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Next Story





