ಸಿಂಧನೂರು | ಸಾಲಿಡಾರಿಟಿ ಯೂತ್ ಮೂವ್ಮೆಂಟ್ ನಿಂದ ಡಿಜಿಟಲ್ ಸ್ವಾತಂತ್ರ್ಯ ಅಭಿಯಾನ

ಸಿಂಧನೂರು : ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯವ್ಯಾಪಿಯಾಗಿ ಆರಂಭಿಸಿರುವ “ಡಿಜಿಟಲ್ ಸ್ವಾತಂತ್ರ” ಅಭಿಯಾನದ ಭಾಗವಾಗಿ ಸಿಂಧನೂರಿನ ಬಸವ ವೃತ್ತ ಮತ್ತು ಟಿಪ್ಪು ಸುಲ್ತಾನ್ ವೃತ್ತ ಬಡಿಬಸ್‌ನಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜಾಗೃತಿ ಸ್ಟಾಲ್‌ಗಳನ್ನು ಹಾಕಿ, ಸಾರ್ವಜನಿಕರಿಗೆ ಆನ್‌ಲೈನ್ ವಂಚನೆ, ಜೂಜಾಟ ಹಾಗೂ ಗ್ಯಾಂಬ್ಲಿಂಗ್‌ನ ಅಪಾಯಗಳನ್ನು ವಿವರವಾಗಿ ತಿಳಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹ್ಯಾಕಿಂಗ್, ಕಳ್ಳತನ ಮತ್ತು ಡಿಜಿಟಲ್ ಮೋಸಗಳಿಂದ ಜನರನ್ನು ಎಚ್ಚರಿಸುವುದು ಹಾಗೂ ಸುರಕ್ಷಿತವಾಗಿ ಆನ್‌ಲೈನ್ ವಲಯವನ್ನು ಬಳಸಲು ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲ್ಲೂಕು ಅಧ್ಯಕ್ಷ ಅಬ್ಯುಲೈಸ್ ನಾಯ್ಕ, ಡಾ.ವಾಸೀಮ್, ತನ್ವೀರ್, ಸಿರಾಜ್ ಪಾಷಾ, ನಯೀಮ್, ಇರ್ಫಾನ್, ಫಾರೂಖ್ ಅತ್ತರ್ ಇಂತಿಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ಥಳೀಯ ಜನರು ಈ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಇಂತಹ ಅಭಿಯಾನಗಳು ಸಮಾಜದಲ್ಲಿ ಡಿಜಿಟಲ್ ಜಾಗೃತಿಯನ್ನು ಬೆಳೆಸಲು ಸಹಾಯಕವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.





