ಸಿಂಧನೂರು | ಬೆಂಕಿ ಅವಘಡ : ನಾಲ್ಕು ಅಂಗಡಿಗಳು ಸಂಪೂರ್ಣ ಭಸ್ಮ

ಸಿಂಧನೂರು : ನಗರದ ರಾಯಚೂರು-ಗಂಗಾವತಿ ಮಾರ್ಗದ ರಸ್ತೆಯ ಹಳೆ ಚಿಕನ್ ಮಾರ್ಕೆಟ್ ಬಳಿ ಬೆಂಕಿ ಅವಘಡ ಸಂಭವಿಸಿ, ನಾಲ್ಕು ಶೆಡ್ಡಿನ ಅಂಗಡಿಗಳು ಸುಟ್ಟು ಕರಕಲಾದ ಘಟನೆ ಜ.8ರ ಗುರುವಾರ ತಡರಾತ್ರಿ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬೆಂಕಿ ಅವಘಡದಲ್ಲಿ ಕಾಳಪ್ಪ ಎಂಬುವವರ ಹಗ್ಗದ ಅಂಗಡಿಯ 30ರಿಂದ 40 ಲಕ್ಷ ರೂ ಮೊತ್ತದ ಸಾಮಗ್ರಿಗಳು, ಮುಹಮ್ಮದ್ ಸುಲೇಮಾನ್ ಅವರ ಬಟ್ಟೆಯ ಅಂಗಡಿಯ 10 ರಿಂದ 16 ಲಕ್ಷ ರೂ., ಅನುರಾಗ್ ಎಂಬುವವರ ದೆಹಲಿ ಬಜಾರ್‌ನ 10 ಲಕ್ಷ ರೂ., ಫಯಾಜ್ ಅವರ ಬಟ್ಟೆಯ ಅಂಗಡಿಯ 10 ಲಕ್ಷ ರೂ., ಸೈಯ್ಯದ್ ರಬ್ಬಾನಿ ಅವರ 4 ಲಕ್ಷ ರೂ. ಹಾಗೂ ಸಿತಾರ ಚಿಕನ್ ಅಂಗಡಿ 1 ಲಕ್ಷ ರೂ.ಅಂದಾಜು ಮೊತ್ತದ ಸಾಮಗ್ರಿಗಳು ಸುಟ್ಟು ಹೋಗಿವೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
“ರಾತ್ರಿ ಏಕಾಏಕಿ ಅಂಗಡಿಗಳಲ್ಲು ಬೆಂಕಿ ಆವರಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಆರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story







