ಸಿಂಧನೂರು | ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದಿಂದ ಜಾಗೃತಿ

ಸಿಂಧನೂರು: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ನೇತೃತ್ವದಲ್ಲಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ವುಮೆನ್ಸ್ ವಿಂಗ್ ಮತ್ತು ಗರ್ಲ್ ಇಸ್ಲಾಮಿಕ್ ಆರ್ಗನೈಸೇಷನ್ ಸಹಭಾಗಿತ್ವದಲ್ಲಿ ಜೂ.28 ರಂದು ಶನಿವಾರ ಮಧ್ಯಾಹ್ನ "ವಕ್ಫ್ ಉಳಿಸಿ ಸಂವಿಧಾನ ಉಳಿಸಿ" ಎಂಬ ಅಭಿಯಾನದ ಅಂಗವಾಗಿ ಮಿಲಾಪ್ ಶಾದಿ ಮಹಲ್ ನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು.
ಈ ಸಭೆಗೆ ಹೈದರಾಬಾದಿನ ಕನ್ವೀನರ್ ವುಮೆನ್ಸ್ ವಿಂಗ್ಸ್ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಜಲಿಸಾ ಸುಲ್ತಾನಾ ಯಾಸೀನ್ ಹಾಗೂ ಉಸ್ಮಾನೀಯ ಯುನಿವರ್ಸಿಟಿಯ ಪ್ರೊ.ಕುದ್ದುಸ ಸುಲ್ತಾನ ಹಾಗೂ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ ಜಮಾಅತೆ ಇಸ್ಲಾಮಿ ಹಿಂದ್ ಉಮೆನ್ಸ್ ವಿಂಗ್ ನಾಸಿರಾ ಖಾನಂ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಸಭೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರೊ.ಖುದ್ದುಸ ಸುಲ್ತಾನ ರವರು ವಕ್ಫ್ ಎಂದರೇನು? ಅದರ ಇತಿಹಾಸ ಹಾಗೂ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಸುಧೀರ್ಘ ಉಪಾನ್ಯಾಸ ನೀಡಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಜಲಿಸಾ ಸುಲ್ತಾನ ಯಾಸಿನ್ ರವರು "ವಕ್ಫ್ ತಿದ್ದುಪಡಿ ಕಾಯ್ದೆ 2025" ಕುರಿತು ಕಾಯ್ದೆಯ ತೊಡಕು ಮತ್ತು ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ನಾಸಿರಾ ಖಾನಂ ರವರು ಸಭೆಯ ಆಶಯ ಮತ್ತು ಮುಂದಿನ ಹೋರಾಟದ ಕುರಿತು ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯೆ ಉಮ್ಮೆ ಜಿಕ್ರಾ ಕುರಾನ್ ಪಠಣ ಮಾಡಿದರು.
ಸ್ಥಾನೀಯ ಅಧ್ಯಕ್ಷೆ ಸುಮಯ್ಯ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೌಜಿಯ ಸುಲ್ತಾನ ನಿರೂಪಿಸಿದರು. . 500 ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







