Sindhanur | ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನಕ್ಕಾಗಿ ಪಾದಯಾತ್ರೆ

ಸಿಂಧನೂರು : ಐದು ಬಾರಿ ಶಾಸಕರಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಕಾಂಗ್ರೆಸ್ ಮುಖಂಡ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಶುಕ್ರವಾರ ನಗರದಲ್ಲಿ ಪಾದಯಾತ್ರೆ ನಡೆಸಿದರು.
ನಗರದ ಎಪಿಎಂಸಿಯ ಗಣೇಶ ಗುಡಿಯಿಂದ ಆರಂಭವಾದ ಪಾದಯಾತ್ರೆ ವಾದ್ಯ ಮೇಳದೊಂದಿಗೆ ಗಾಂಧಿ ಸರ್ಕಲ್‌ಗೆ ತಲುಪಿತು. ಈ ವೇಳೆ ಗಾಂಧಿ ಪ್ರತಿಮೆಗೆ ಕಾಂಗ್ರೆಸ್ ಮುಖಂಡರು ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.
ಬಳಿಕ ಪಾದಯಾತ್ರೆಯು ಹೊಸಳ್ಳಿ ಕ್ರಾಸ್, ಶ್ರೀಪುರಂ ಜಂಕ್ಷನ್, ಗೊರೇಬಾಳ ಕ್ಯಾಂಪ್, ಗೊರೇಬಾಳ, ಬಂಗಾರಿ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್ ಹಾಗೂ ರೌಡಕುಂದಾ ಮಾರ್ಗವಾಗಿ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನ ತಲುಪಿತು.
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಂಪನಗೌಡ ಬಾದರ್ಲಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ, ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ದೊರೆಯಲಿ ಎಂದು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಮುಖಂಡರಾದ ಪಂಪನಗೌಡ ಬಾದರ್ಲಿ, ಬಾಬುಗೌಡ ಬಾದರ್ಲಿ, ರಾಜುಗೌಡ ಬಾದರ್ಲಿ, ಲಿಂಗಪ್ಪ ದಡೇಸುಗೂರು, ಬಸವರಾಜ ಹಿರೇಗೌಡರ್, ಶಿವನಗೌಡ ಎಲೆಕೂಡ್ಲಿಗಿ, ಎನ್.ಅಮರೇಶ, ಶಬ್ಬೀರ್ ನಾಯಕ್, ಶಪ್ಪುವುಲ್ಲಾ ಖಾನ್, ಶೇಖರಪ್ಪ ಗಿಣಿವಾರ, ಸೈಯದ್ ಹಾರೂನ್ ಜಾಹಗೀರ್ ದಾರ, ಶಿವಕುಮಾರ ಗುಂಜಳ್ಳಿ, ನಿಸಾರ್ ಖಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್ ವಕೀಲ, ಕಾರ್ಯದರ್ಶಿ ವೈ.ಅನಿಲ್ ಕುಮಾರ್, ಮುಖಂಡರಾದ ಶರಣಪ್ಪ ಉಪ್ಪಲದೊಡ್ಡಿ, ಪ್ರಭುರಾಜ್ ಕರ್ಪೂರಮಠ, ಅಶೋಕಗೌಡ, ವೀರೇಶ ಹಟ್ಟಿ, ದುರುಗಪ್ಪ ಕಟಾಲಿ, ಸಣ್ಣತಿಮ್ಮಯ್ಯ ಭಂಗಿ, ವೆಂಕಟೇಶ ದತ್ತುರಾವ್, ಹೆಚ್.ಭಾಷಾ, ಅಶೋಕ ಉಮಲೂಟಿ, ಮುದಿಯಪ್ಪ ಡೈಮೆಂಡ್, ಹನುಮೇಶ ನಾಯಕ ಮುಳ್ಳೂರು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು, ಬೆಂಗಲಿಗರು ಇದ್ದರು.






