ಸಿಂಧನೂರು | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ರಾಯಚೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಲ್ಲೆಯ ಸಿಂಧನೂರು ತಾಲೂಕಿನ ಮಸ್ಜಿದ್ ಎ ಹುದಾ ಪಟೇಲ್ ವಾಡಿ ರಸ್ತೆಯಲ್ಲಿ ಇಂದು ಮಾನವ ಸರಪಳಿ ನಿರ್ಮಸಿ ಪ್ರತಿಭಟನೆ ನಡೆಸಿ ವಕ್ಪ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಲಾಯಿತು.
ಹುದಾ ಮಸೀದಿಯಿಂದ ಹಳೆ ಬಜಾರ್ ರವರೆಗೆ ಸುಮಾರು ಸಾವಿರ ಜನರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ತಾಲೂಕು ಅಧ್ಯಕ್ಷ ಮುಹಮ್ಮದ್ ಹುಸೇನ್, ಕಾರ್ಯದರ್ಶಿ ಶರ್ಫುದ್ದೀನ್, ಹುದಾ ಮಸೀದಿಯ ಇಮಾಮದ ಹಾಫಿಜ್ ಸೈಯದ್ ಉಸಾಮ, ನಿವೃತ್ತಿ ಶಿಕ್ಷಕ ಹುಸೇನ್ ಬಾಷಾ, ಸ್ವಾಲಿಡಾರಿಟಿ ಯುಥ್ ಮೂಮೆಂಟ್ ಜಿಲ್ಲಾ ಅಧ್ಯಕ್ಷ ವಸಿಂ, ಮುಹಮ್ಮದ್ ಚೌದ್ರಿ, ನಯೀಮ್ ಪಾಶ ಚೌದ್ರಿ, ಮೌಲಾಸಾಬ, ಮಹೆಬೂಬ ಸಾಬ ಅತ್ತಾರ, ಬಾವುದ್ದೀನ್, ಆಲಂ ಬಾಷ ಚೌದ್ರಿ, ಮುಸ್ತಾಕ್, ಮುಹಮ್ಮದ್ ಮೇಸ್ತ್ರಿ, ಮಹೆಬೂಬ್ ಸಾಬ ಹಾಗೂ ಗೌಸ್ ಸಾಬ ಇನ್ಮಾದಾರ ಕಾಟಿಬೇಸ್, ಇನ್ನಿತರ ಹಲವಾರು ಜನರು ಇದ್ದರು.
ಸಿಂಧನೂರಿನ ವಿವಿಧೆಡೆ ಪ್ರತ್ಯೇಕವಾಗಿ ಮಾನವ ಸರಪಳಿ ಪ್ರತಿಭಟನೆ ಮಾಡಲಾಯಿತು.
ಸಿಂದನೂರಿ ಮಸ್ಜಿದ್ ಏ ಹುದ, ಮಸ್ಜಿದ್ ಏ ಮದೀನ, ಮಸ್ಜಿದ್ ಏ ಅಕ್ಸಾ, ಮಸ್ಜಿದ್ ಏ ಅಬೂಬಕ್ಕರ್, ಜಾಮಿಯಾ ಮಸೀದಿ ಪಿ. ಡಬ್ಲೂ. ಡಿ. ಕ್ಯಾಂಪ್, ಜಾಮಿಯಾ ಮಸೀದಿ Qila ಇನ್ನೂ ಉಳಿದ ಎಲ್ಲಾ ಮಸೀದಿ ಮುಂದೆ ಜುಮ್ಮಾ ನಮಾಜ್ ಆದ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ನಾಯಕರು ನಗರದ ಜಾಯಿಂಟ್ ಆಕ್ಷನ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.







