ಶಾಸಕ ಹಂಪನಗೌಡ ಬಾದರ್ಲಿ ಅವರಿಂದ ಸಿಂಧನೂರು ತಾಲೂಕಿಗೆ 14 ಹೊಸ ಬಸ್‌ಗಳ ಕೊಡುಗೆ

ಸಿಂಧನೂರು: ರಾಜ್ಯದಲ್ಲೇ ಸಿಂಧನೂರು ತಾಲೂಕಿನ ಶಾಸಕ ಹಂಪನಗೌಡ ಬಾದರ್ಲಿ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶಾಸಕರ ವಿಶೇಷ ಪ್ರಯತ್ನದ ಫಲವಾಗಿ ಇನ್ನು ಮುಂದೆ ತಾಲೂಕಿನ ಪ್ರತಿ ಹಳ್ಳಿಹಳ್ಳಿಗಳಿಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸುಲಭವಾಗಿ ಸಂಚರಿಸುವಂತೆ 14 ಹೊಸ ಸರ್ಕಾರಿ ಬಸ್‌ಗಳು ರಸ್ತೆಗಿಳಿಯಲಿವೆ.
ರಾಯಚೂರು ಜಿಲ್ಲೆಯಲ್ಲಿಯೇ ಸಿಂಧನೂರು ತಾಲೂಕಿನಲ್ಲಿ ದಾಖಲೆ ಬಸ್ ಸೌಕರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಂಬಾಮಠದ ಆವರಣದಲ್ಲಿ ಬಸ್‌ಗಳಿಗೆ ವಿದ್ಯುಕ್ತ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) 5 ಕೋಟಿ ರೂ. ಅನುದಾನದಲ್ಲಿ ಖರೀದಿಸಲಾದ ತಿಳಿ ಹಸಿರು ಬಣ್ಣದ ಮಿಶ್ರಿತ 10 ಬಸ್‌ಗಳಿಗೆ ಸಾಂಕೇತಿಕವಾಗಿ ಹಸಿರು ನಿಶಾನೆ ತೋರಿಸಲಾಯಿತು.
ಬಸ್‌ಗಳಿಗೆ ವಿಶೇಷ ಅಲಂಕಾರ :
ಉದ್ಘಾಟನೆ ಹಿನ್ನೆಲೆಯಲ್ಲಿ ಅಂಬಾಮಠದ ಅಂಗಳದಲ್ಲಿ ನಿಲುಗಡೆಯಾಗಿದ್ದ ಎಲ್ಲಾ ಬಸ್‌ಗಳಿಗೆ ಬಲೂನ್‌ಗಳು ಹಾಗೂ ತಳಿರು–ತೋರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಶಿವರಾಜ ತಂಗಡಗಿ, ಸತೀಶ ಜಾರಕಿಹೊಳಿ, ಸಂಸದರಾದ ರಾಜಶೇಖರ ಹಿಟ್ನಾಳ್, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರವಿಹಾಳ, ಬಿಎಂ ನಾಗರಾಜ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಂ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಎಸ್ಪಿ ಅರುಣಾಂಕ್ಷು ಗಿರಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸುಶೀಲಾ, ಮುಖ್ಯ ತಾಂತ್ರಿಕ ಶಿಲ್ಪಿಗಳಾದ ಸಂತೋಷಕುಮಾರ, ವಿಭಾಗೀಯ ನಿಯಂತ್ರಾಧಿಕಾರಿ ಚಂದ್ರಶೇಖರ, ವಿಭಾಗೀಯ ತಾಂತ್ರಿಕ ಶಿಲ್ಪಿಗಳಾದ ನಾಗರಾಜ ವಾರದ ಹಾಗೂ ಇನ್ನೀತರರು ಇದ್ದರು.







