ಸಿಂಧನೂರು | ಟೆಕ್ನೋ ಶಾಲೆಯಲ್ಲಿ ಏಕತಾ ದಿನ, ಕನ್ನಡ ರಾಜ್ಯೋತ್ಸವ ಸಂಭ್ರಮ

ಸಿಂಧನೂರು: ಇಲ್ಲಿನ ನೋಬಲ್ ಟೆಕ್ನೋ ಶಾಲೆಯಲ್ಲಿ ಏಕತಾ ದಿನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಏಕತಾ ದಿನದ ಅಂಗವಾಗಿ ಶಾಲೆಯಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಉಡುಪು ಹಾಗೂ ಆಹಾರ ಮೇಳ ಆಯೋಜಿಸಲಾಯಿತು. ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ರೀತಿಯಲ್ಲಿ ಉಡುಪು ಧರಿಸಿ, ವಿವಿಧ ರಾಜ್ಯಗಳ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿದರು.
ಈ ಮಾರಾಟದಿಂದ ಸಂಗ್ರಹಿಸಿದ ಮೊತ್ತವನ್ನು ಹಿರಿಯ ನಾಗರಿಕರ ಆಶ್ರಮಕ್ಕೆ (Old Age Home) ದೇಣಿಗೆಯಾಗಿ ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಏಕತೆ, ಸೇವಾಭಾವನೆ ಮತ್ತು ಸಾಮಾಜಿಕ ಜವಾಬ್ದಾರಿತ್ವದ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸಲು ಪ್ರಯತ್ನಿಸಲಾಯಿತು.
ಅದೇ ಸಮಯದಲ್ಲಿ, ತಾಲೂಕು ಆಡಳಿತ ಮಂಡಳಿಯ ವತಿಯಿಂದ ಟೌನ್ ಹಾಲ್ ನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಶಾಲೆಯ ಕನ್ನಡ ಶಿಕ್ಷಕರಾದ ಸೈಯದ್ ಗೌಸ್ ಮೊಹಿಯುದ್ದೀನ್ ಪೀರ್ಝಾದೆ ಅವರ ಮಾರ್ಗದರ್ಶನ ದೊರಕಿದ್ದು, ಅವರು ಕನ್ನಡದ ಅಪರೂಪದ ಮೇಷ್ಟ್ರು ಎಂದು ಖ್ಯಾತಿಯನ್ನು ಪಡೆದಿದ್ದಾರೆ.
ಕಾರ್ಯಕ್ರಮವನ್ನು ಸಿಂಧನೂರಿನ ತಹಶೀಲ್ದಾರರು ಅರುಣ್ ಕುಮಾರ್ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವಲಿಂಗಪ್ಪ, ಸಿಆರ್‌ಪಿ ಲ ವೀರನಗೌಡ ಹಾಗೂ ವಿವಿಧ ಕನ್ನಡ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಏಕತೆ, ಸಂಸ್ಕೃತಿ ಮತ್ತು ಭಾಷಾ ಪ್ರೇಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ನೋಬಲ್ ಟೆಕ್ನೋ ಶಾಲೆಯ ಸಂಸ್ಥಾಪಕರಾದ ಸೈಯದ್ ತನ್ವೀರ್ ಹೇಳಿದರು.







