Sindhnur | ಹುಚ್ಚು ನರಿ ದಾಳಿ: ಇಬ್ಬರು ಬಾಲಕರಿಗೆ ಗಾಯ

ಸಿಂಧನೂರು: ತಾಲ್ಲೂಕಿನ ರಾಮತ್ನಾಳ ಗ್ರಾಮದಲ್ಲಿ ಗುರುವಾರ ಹುಚ್ಚು ನರಿ ದಾಳಿ ನಡೆಸಿ ಇಬ್ಬರು ಬಾಲಕರಿಗೆ ಗಾಯಗೊಳಿಸಿರುವ ಘಟನೆ ನಡೆದಿದೆ.
ದೇವಸ್ಥಾನದ ಬಳಿ ತೆರಳುತ್ತಿದ್ದ ಬಸನಗೌಡ (14) ಹಾಗೂ ವೆಂಕಟೇಶ (9) ಅವರ ಮೇಲೆ ನರಿ ಏಕಾಏಕಿ ದಾಳಿ ನಡೆಸಿದೆ. ಇದೇ ವೇಳೆ ಗ್ರಾಮದ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಲು ಮುಂದಾಗಿದ್ದು, ಮಹಿಳೆ ಚೀರಾಡುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ.
ಗ್ರಾಮಸ್ಥರು ಗುಂಪುಗೂಡಿ ಬರುತ್ತಿದ್ದಂತೆ ಹುಚ್ಚು ನರಿ ಸ್ಥಳದಿಂದ ಓಡಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಬಾಲಕರನ್ನು ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Next Story




