ಸಿರವಾರ | ನಿವೃತ್ತ ಬಿಎಸ್ಸೆಫ್ ಯೋಧ ತಿಮ್ಮಪ್ಪರಿಗೆ ಅದ್ದೂರಿ ಸ್ವಾಗತ

ಸಿರವಾರ : ತಾಲೂಕಿನ ಹರವಿ ಗ್ರಾಮದ ನಿವೃತ್ತ ಬಿಎಸ್ಸೆಫ್ ಯೋಧ ಜಿ.ತಿಮ್ಮಪ್ಪ ಗುಜ್ಜಲ್ ಅವರು 36 ವರ್ಷಗಳ ಸೇವೆಯ ನಂತರ ನಿವೃತ್ತಿ ಆದ ಹಿನ್ನೆಲೆಯಲ್ಲಿ ನೀರಮಾನ್ವಿಯಿಂದ ಹರವಿವರೆಗೆ ದೇಶಾಭಿಮಾನಿಗಳು ಹಾಗು ಸೈನಿಕರ ಅಭಿಮಾನಿ ಯುವಕರು ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.
ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಸನ್ಮಾನಿಸಲಾಯಿತು.
ಹರವಿ, ಸಾದಾಪುರ, ಕಪಗಲ್, ಬೆಟ್ಟದೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದೇಶಭಕ್ತರು, ಯುವಕರು ನಿವೃತ್ತಿ ಯಾದ ಯೋಧ ತಿಮ್ಮಪ್ಪ ಅವರೊಂದಿಗೆ ನೀರಮಾನ್ವಿಯ ಶ್ರೀ ರೇಣುಕಾ ಎಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ, ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವೀರಮರಣವನ್ನಪ್ಪಿದ್ದ ಮಂಜುನಾಥ ಅಂಗಡಿ ಅವರುಗಳ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಜಯಘೋಷಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ನಿರಂತರವಾಗಿ 36 ವರ್ಷಗಳ ಸುದೀರ್ಘವಾದ ಅವಧಿಯನ್ನು ಭಾರತ ಮಾತೆಗೆ ಸೇವೆಗೆ ಮುಡಿಪಾಗಿಟ್ಟಿದ್ದ ತಿಮ್ಮಪ್ಪ ಅವರನ್ನು ಸಂಭ್ರಮದಿಂದ ಸ್ವಾಗತ ಕೋರಿದ್ದು ಒಂದಡೆಯಾದರೆ, ಮಗಳು ವೈಷ್ಣವಿ ಗುಜ್ಜಲ್ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿ ನೇಮಕವಾಗಿದ್ದು, ನಿವೃತ್ತ ಯೋಧನ ಸಂತೋಷವನ್ನು ಇಮ್ಮಡಿಗೊಳಿಸಿತ್ತು.
ಡಾ.ಅಂಬಿಕಾ ಮಧುಸೂದನ್ ನಾಯಕ, ಜೆಲ್ಲಿ ಆಂಜನೇಯ ನೀರಮಾನ್ವಿ, ಬಸವರಾಜ ಮುಸ್ಟೂರು, ಜೆ.ಸಂಜೀವ, ಕರ್ನಾಟಕ ರಾಜ್ಯ ಬೇಡರ ಸಮಿತಿಯ ರಾಜ್ಯಾಧ್ಯಕ್ಷ ಅಂಬಣ್ಣ ನಾಯಕ ಗುಜ್ಜಲ, ಆಂಜನೇಯ ನಸ್ಲಾಪುರ್ ಮಾತನಾಡಿದರು.
ಮಾಜಿ ಸೈನಿಕರಾದ ಜೆಲ್ಲಿ ಹನುಮಂತಪ್ಪ ನೀರಮಾನ್ವಿ, ಅಂಜೀನಯ್ಯ ನಾಯಕ, ಹನುಮಂತ ನಸಲಾಪೂರ್, ಶಿವರಾಜ ಕರಡಿಗುಡ್ಡ, ರಂಗನಗೌಡ ವೀರಾಪುರ, ಗೋಪಾಲ್ ಬೆಟ್ಟದೂರು, ತಿಪ್ಪಣ್ಣ ನಾಯಕ ಹರವಿ, ಯೋಧರ ಪತ್ನಿಯರಾದ ಪರಿಮಳ ಕೃಷ್ಣಪ್ಪ, ದಿವ್ಯಾ ಹನುಮಂತ, ಲಕ್ಷ್ಮಿ ಜೆಲ್ಲಿ ಮಂಜುನಾಥ ರತ್ನಮ್ಮ ಎಲ್ಲಪ್ಪ ನಾಯಕ್, ಹಾಗೂ ಎಲ್ಲಪ್ಪ ಪೆದರಡ್ಡಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಂಪಣ್ಣ ಚಂಡೂರ್ ಸೇರಿದಂತೆ ನೂರಾರು ಜನರು ಇದ್ದರು.







