ಸಿರವಾರ | ಸೊಳ್ಳೆಗಳ ಹಾವಳಿಗೆ ಫಾಗಿಂಗ್ ಸಿಂಪಡಿಸಲು ಮನವಿ

ಸಿರವಾರ : ತಾಲೂಕಿನ ಅತ್ತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಕ್ಕಲದಿನ್ನಿ ಗ್ರಾಮದಲ್ಲಿ ವಿಪರೀತ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮದಲ್ಲಿ ಡೆಂಗ್ಯೂ, ಮಲ್ಲೇರಿಯಾ ಹಾಗೂ ಇನ್ನಿತರ ಆನೇಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಜನರು ಭಯಭೀತರಾಗಿದ್ದಾರೆ. ಮುಂಜಾಗ್ರತವಾಗಿ ಗ್ರಾಮದಲ್ಲಿ ಫಾಗಿಂಗ್ (ಹೊಗೆ) ಹೊಡಿಸುವಂತೆ ಗ್ರಾಮಸ್ಥರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆ ಹಾಗೂ ಕುಡಿಯುವ ಟ್ಯಾಂಕರ್ ಒಳಗೆ ನೀರಿನಲ್ಲಿ ಹುಳಗಳು ಕೂಡ ಹೆಚ್ಚಾಗಿವೆ. ಟ್ಯಾಂಕರ್ ಸ್ವಚ್ಛಗೊಳಿಸಿ ಮಾಹಿತಿ ಹಾಗೂ ಇನ್ನಿತರ ಮೂಲ ಸೌಕರ್ಯಗಳು ಬಗ್ಗೆ ಅತ್ತನೂರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೌಲಭ್ಯ ಒದಗಿಸುವಂತೆ ತಾ.ಪಂ ಇಓ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಪಿಕಾಶಿ, ಶಿವಂಗಿ, ಮಲ್ಲಯ್ಯ, ಶೇಖರಪ್ಪ ಮಡಿವಾಳ, ದೇವರಾಜ ಪಾಟೀಲ್, ರಮೇಶ ಮಡಿವಾಳ, ದೇವಂದ್ರ ನಾಯಕ, ವೆಂಕಟೇಶ್ ನಾಯಕ, ರಮೇಶ ಗುಡಸಲಿ, ಸಂತೋಷ ಕುಮಾರ, ಹನುಮನಗೌಡ ನಾಯಕ, ಉಮೇಶ ನಾಯಕ, ಅಂಬರೇಶ ಕುರುಕುಂದ, ಶಿವುಪುತ್ರ ನಾಯಕ ಹಾಗೂ ಅನಿಲ್ ಕುಮಾರ್ ಜಕ್ಕಲದಿನ್ನಿ ಸೇರಿದಂತೆ ಇತರರಿದ್ದರು.







