ಸಿರವಾರ | ಜಿಈ ಹೆಲ್ತ್ ಕೇರ್ ಸಂಸ್ಥೆಯ ವತಿಯಿಂದ ಮಹಿಳಾ ಕ್ಷೇಮಾ ತಪಾಸಣೆ ಶಿಬಿರ

ಸಿರವಾರ : ತಾಲೂಕಿನಲ್ಲಿ ಬಲ್ಲಟಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಿಪಲ್ ಟೂ ಪಿಪಲ್ ಹೆಲ್ತ್ ಫೌಂಡೇಶನ್ ಮತ್ತು ಜಿಈ ಹೆಲ್ತ್ ಕೇರ್ ರಾಯಚೂರು ಸಂಸ್ಥೆ ವತಿಯಿಂದ ಉಚಿತ ಆರೊಗ್ಯ ತಪಾಸಣೆಯಲ್ಲಿ ಕಣ್ಣು ,ಹಲ್ಲು ,ಬಿಪಿ,ಶುಗರ್, ಮತ್ತು ಹೆಚ್ ಬಿ, ಪರೀಕ್ಷೆ ಪೌಷ್ಟಿಕ ಆಹಾರದ ಕುರಿತು ಮತ್ತು ಮಹಿಳೆಯರಿಗೆ ಮೆಹಂದಿ ಹಾಕುವುದರ ಮೂಲಕ ಉಚಿತವಾಗಿ ಮಹಿಳಾ ಸ್ವಸ್ಥ ಆರೋಗ್ಯ ಶಿಬಿರವನ್ನು ಗುರುವಾರದಂದು ಹಮ್ಮಿಕೊಂಡಿದ್ದರು. ಈ ಶಿಬಿರದಲ್ಲಿ 380ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಬಲ್ಲಟಗಿ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅತಿ ಮುಖ್ಯ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲಸವನ್ನು ಪಿಪಲ್ ಟೂ ಪಿಪಲ್ ಹೆಲ್ತ್ ಪೌಂಡೇಶನ್ ಮತ್ತು ಜಿ ಈ ಹೆಲ್ತ್ ಕೇರ್ ಮಾಡುತ್ತಿದೆ. ಈ ಸಂಸ್ಥೆಯು ರಾಯಚೂರು ಜಿಲ್ಲೆಯ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಬಲ್ಲಟಗಿ , ಉಡಮಗಲ್,ಗುಂಜಳ್ಳಿ, ಗಿಲ್ಲೆಸೂಗೂರು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ,ಚರ್ಮ ರೋಗ, ಕಣ್ಣಿನ ತಪಾಸಣೆ, ಹಲ್ಲು ತಪಾಸಣೆ ಮತ್ತು ಮಹಿಳೆಯರಿಗೆ ಮಹಿಳಾ ವೈದ್ಯರಾದ ಡಾ.ರೋಹಿಣಿ ಮಾನ್ವಿಕರ್, ಹಲ್ಲು ತಪಾಸಣೆಯನ್ನು ದಂತ ವೈದ್ಯರು ಡಾ.ನಾಗರತ್ನ ,ಚರ್ಮರೋಗ ತಜ್ಞರು ಡಾ.ರವಿ ಕುಮಾರ್ ಮುದ್ಗಲ್ ತಪಾಸಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ PPHF ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು







