ಸಿರವಾರ | ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ 2ನೇ ವಾರ್ಷಿಕೋತ್ಸವದ ಸಂಭ್ರಮ

ಸಿರವಾರ : ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘವು ಅಲ್ಪಾವಧಿಯಲ್ಲೇ ಬೇರೆಡೆ ಶಾಖೆಗಳನ್ನು ತೆರೆದು, ಠೇವಣಿ ಮತ್ತು ಸಾಲ ನೀಡುವಿಕೆಯಲ್ಲಿ ಪ್ರತಿವರ್ಷ ಲಾಭಗಳಿಸಿ, ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘವು ಗ್ರಾಹಕರಿಗೆ ಹತ್ತಿರವಾಗಿರುವ ಸಹಕಾರಿ ಸಂಘವಾಗಿ ಎಲ್ಲ ಜನರ ವಿಶ್ವಾಸಗಳಿಸುತ್ತಿದೆ ಎಂದು ಕನ್ನಡ ಸೇನೆ ಸಂಘಟನೆಯ ತಾಲೂಕಧ್ಯಕ್ಷ ವೆಂಕಟೇಶ ದೊರೆ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ 2ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ರೈತರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಹೀಗೆ ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಗಳು ನಾನಾ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ ಎಂದ ಅವರು, ಈ ಭಾಗದಲ್ಲಿ ಮಾತ್ರವಲ್ಲದೆ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಶಾಖೆಗಳು ಬೇರೆಡೆ ಕೂಡ ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಗಡ್ಲ ಚನ್ನಬಸವ ನಾಯಕ, ಮಲ್ಲಿಕಾರ್ಜುನ ಮಹೇಂದ್ರಕರ್, ಬ್ಯಾಂಕ್ ವ್ಯವಸ್ಥಾಪಕ ಮನೋಜ್, ವೆಂಕಟೇಶ ದೊರೆ, ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಗಡ್ಲ ಚನ್ನಬಸವ ನಾಯಕ, ಹನುಮೇಶ ಮೇಟಿ, ವಿರುಪಾಕ್ಷಿ ಗೌಡ ಹಾಗೂ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳಾದ ಶ್ರೀಕಾಂತ, ಚನ್ನಬಸವ, ಶ್ರೀನಾಥ ಏಜೆಂಟರ್ ಗಳಾದ ಸುರೇಶ, ಶಿವಕುಮಾರ್ ಹಾಗೂ ಈರೇಶ ನಾಯಕ ಸೇರಿದಂತೆ ಇತರರಿದ್ದರು.





