ಸುರೇಶ ಕಟ್ಟಿಮನಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ; ಶಿಕ್ಷಕರ ಬಳಗದಿಂದ ಅಭಿನಂದನೆ

ದೇವದುರ್ಗ: ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಸುರೇಶ ಕಟ್ಟಿಮನಿ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಧಾ ಬಾಯಿ,ಶಿವರಾಜ ಪುಜಾರಿ, ಗಂಗಾಧರ್, ನಂದೀಶ್ ಮಹಾಂತೇಶ ತಂಡದವರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಯಚೂರಿನ ಚುನಾಯಿತ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
ಸುರೇಶ ಕಟ್ಟಿಮನಿ ಅವರ ನಿರಂತರ ಶ್ರಮ, ಸೇವಾ ಮನೋಭಾವ ಹಾಗೂ ಸಾಧನೆಗೆ ಈ ಪ್ರಶಸ್ತಿ ಸಂದ ಗೌರವವಾಗಿದೆ. ಅವರ ಸಾಧನೆಯಿಂದ ಪ್ರಶಸ್ತಿಯ ಗೌರವವೂ ಹೆಚ್ಚಾಗಿದೆ ಎಂದು ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
Next Story




