RAICHURU | ಕೈಕಾಲು ತೊಳೆಯಲು ಕಾಲುವೆಗಿಳಿದ ಇಬ್ಬರು ಮಹಿಳೆಯರು ನೀರುಪಾಲು

ಸಾಂದರ್ಭಿಕ ಚಿತ್ರ
ಓರ್ವ ಮಹಿಳೆಯ ಮೃತದೇಹ ಪತ್ತೆ, ಇನ್ನೊಬ್ಬರು ಕಾಣೆ
ರಾಯಚೂರು: ಕಾಲುವೆ ನೀರಿನಲ್ಲಿ ಕೈಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಇಬ್ಬರು ಮಹಿಳೆಯರು ನೀರುಪಾಲಾದ ಘಟನೆ ನಾರಾಯಣಪುರ ಬಲದಂಡೆ ಕಾಲುವೆಯ ಆನೆಹೊಸೂರು ಬಳಿ ಬುಧವಾರ ಸಂಜೆ ನಡೆದಿದೆ.
ನೀರುಪಾಲಾದವರನ್ನು ನಂಜಲದಿನ್ನಿ ಗ್ರಾಮದ ಈರಮ್ಮ (35) ಹಾಗೂ ದೇವಮ್ಮ (30) ಎಂದು ಗುರುತಿಸಲಾಗಿದೆ.
ಇವರು ನಿತ್ಯದಂತೆ ಭತ್ತ ಹಚ್ಚುವ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವೇಳೆ, ಕಾಲುವೆಯ ನೀರಿನಲ್ಲಿ ಕೈಕಾಲು ಹಾಗೂ ಮುಖ ತೊಳೆಯಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ನೀರುಪಾಲಾದವರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬರಿಗಾಗಿ ಅಗ್ನಿಶಾಮಕ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.
Next Story





