ರಾಯಚೂರು | ಕಾರು ಪಲ್ಟಿಯಾಗಿ ಉಡುಪಿ ಮೂಲದ ಮಹಿಳೆ ಮೃತ್ಯು, ಐವರಿಗೆ ಗಾಯ

ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮನ್ಸಲಾಪುರು ಕೆರೆಯ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 5 ಗಂಟೆಗೆ ಕಾರೊಂದು ರಸ್ತೆ ಬಳಿಯಿದ್ದ ಕಲ್ಲೊಂದಕ್ಕೆ ಕಾರು ಢಿಕ್ಕಿಯಾಗಿ ಉಡುಪಿಯ ಕುಂದಾಪುರ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟ್ರೇಶ್ವರ ಗ್ರಾಮದ ಹಾಜೀರಾ (65) ಎಂಬವರು ಮೃತಪಟ್ಟಿದ್ದಾರೆ. ಇಶಾನ್ ಅಬ್ದುಲ್, ಇಲಾನ್ ಇಸ್ಮಾಯಿಲ್, ಮುಹಮದ್ ಇಝಾನ್, ಮುಹಮದ್ ಇಮ್ರಾನ್, ಕಾರು ಚಲಾಯಿಸುತ್ತಿದ್ದ ಫರಾನಾ ಎಂಬವರು ಗಾಯಗೊಂಡಿದ್ದು, ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಿಂದ ಹೈದ್ರಾಬಾದ್ ಗೆ ಪ್ರವಾಸಕ್ಕೆಂದು ಕುಟುಂಬ ಸದಸ್ಯರು ಕಾರಿನಲ್ಲಿ ಕುಂದಾಪುರ, ಹುಬ್ಬಳ್ಳಿ, ಸಿಂಧನೂರು, ರಾಯಚೂರು ಮಾರ್ಗವಾಗಿ ಹೋಗುವಾಗ ಬೆಳಗಿನ ಜಾವ 5ಗಂಟೆಗೆ ಮನ್ಸಲಾಪುರ ಕ್ರಾಸ್ ಬಳಿಯಲ್ಲಿ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ಪಕ್ಕದಲ್ಲಿ ಹೊಲಕ್ಕೆ ಬಿದ್ದಿದೆ. ಇದರ ಪರಿಣಾಮ ಹಿಂಬದಿ ಕುಳಿತಿದ್ದ ಹಾಜಿರಾ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







