ಅಡ್ಡಮತದಾನ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಶಾಸಕ ಮಾನಪ್ಪ ವಜ್ಜಲ್

ಲಿಂಗಸುಗೂರು.ಜೂ.22- ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷ ಏನು ಹೇಳುತ್ತದೆಯೋ ಅದನ್ನು ಪಾಲಿಸುತ್ತೇನೆ. ಬಿಜೆಪಿ ಪಕ್ಷದ ಶಾಸಕನಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನೈಯಾ ಪೈಸೆ ಅನುದಾನ ನೀಡುತ್ತಿಲ್ಲ. ನನ್ನ ಉದ್ಯಮ ಬಂದ್ ಮಾಡಿ ನೂರಾರು ಕೋಟಿ ರೂ.ಗಳ ನಷ್ಟ ಅನುಭವಿಸಿದ್ದೇನೆ. ಇಂತಹ ಪಕ್ಷಕ್ಕೆ ಮತ ಹಾಕುತ್ತೇನೆಯೇ, ಒಂದು ವೇಳೆ ನಾನು ಅಡ್ಡ ಮತದಾನ ಮಾಡಿದ್ದನ್ನು ಸಾಬೀತು ಪಡಿಸಿದರೆ ಈ ಕ್ಷಣವೇ ರಾಜಕೀಯ ನಿವೃತ್ತಿಯಾಗಿ ಪಕ್ಷದ ಕಚೇರಿಯಲ್ಲಿ ಕಸ ಬಳೆದುಕೊಂಡು ಕಚೇರಿಯ ಗೇಟ್ ಕಾಯ್ದುಕೊಂಡು ಇರುತ್ತೇನೆಂದು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಶಾಸಕರ ಭವನದಲ್ಲಿ ರೇಷ್ಮೆ ಬೆಳೆಯುವ ರೈತರಿಗೆ ರೇಷ್ಮೆ ಕೃಷಿ ಸಕಲಕರಣೆಗಳನ್ನು ವಿತರಣೆ ಮಾತನಾಡಿದ ಅವರು, 40 ವರ್ಷಗಳಿಂದ ಗುತ್ತಿಗೆದಾರಿಕೆ ಮಾಡಿಕೊಂಡು ಬಂದಿರುವ ನಾನು. ಕಳೆದ 3 ವರ್ಷಗಳಿಂದ ನನ್ನ ಉದ್ಯಮ ಬಂದ್ ಮಾಡಿಕೊಂಡು ಕುಳಿತ್ತಿದ್ದೇನೆ. ಸುಮಾರು 750 ಕೋಟಿ ಬಿಲ್‌ನಲ್ಲಿ 1 ರೂಪಾಯಿ ಬಿಲ್ ಪಾವತಿ ಮಾಡಿಲ್ಲ, ಬದಲಿಗೆ 172 ಕೋಟಿ ರೂ.ಗಳನ್ನು ರಿಕವರಿ ಮಾಡಿದಂತಹ ಕಾಂಗ್ರೆಸ್ ಪಕ್ಷಕ್ಕೆ ಅಡ್ಡ ಮತದಾನ ಮಾಡಲು ಹೇಗೆ ಸಾಧ್ಯ ಎಂದರು.
ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷಗಳ ಇತಿಹಾಸವಿದೆ. ಖರ್ಗೆಯವರಿಗೆ 40 ರಿಂದ 45 ವರ್ಷ ವಯಸ್ಸಾಗಿರಬಹುದು, ಆರ್‌ಎಸ್‌ಎಸ್ ಬಗ್ಗೆ ಅವರಿಗೆ ಅಷ್ಟು ಪರಿಜ್ಞಾನವಿಲ್ಲ. ಹೆಸರು ಪಡೆಯಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಶೆಯಿಂದ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘಟನೆಯ ಹಿರಿಯ ಮುಖಂಡರು ತಕ್ಕ ಉತ್ತರ ನೀಡಿದ್ದಾರೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಯಂಕನಗೌಡ ಐದನಾಳ, ಯಂಕನಗೌಡ ಗುಡದನಾಳ, ಸಂಗಪ್ಪ ಗುಂತಗೋಳ, ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.






