ರಾಯಚೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸಾವು, 7 ಮಂದಿಗೆ ಗಂಭೀರ ಗಾಯ

ರಾಯಚೂರು: ಭತ್ತ ನಾಟಿ ಮಾಡಿ ವಾಪಸ್ ತೆರಳುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಹೊರವಲಯದ ಬಂಡೆಮ್ಮಳ ಹಳ್ಳದ ಹತ್ತಿರ ನಡೆದಿದೆ.
ಮೃತ ಮಹಿಳೆಯನ್ನು ಗೌರಮ್ಮ ಬಳಗಾನೂರು (40) ಎಂದು ಗುರುತಿಸಲಾಗಿದೆ.
ಮೌನಮ್ಮ , ಪಾರ್ವತಮ್ಮ , ಬಸವರಾಜ್ ದೇಸಾಯಿ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಟ್ರ್ಯಾಕ್ಟರ್ ನಲ್ಲಿ 16 ಜನ ಕಾರ್ಮಿಕರು ಇದ್ದರು ಎನ್ನಲಾಗಿದೆ.
ಭತ್ತ ನಾಟಿ ಹಚ್ಚಲು ಹೋಗಿದ್ದರು ಸಂಜೆ ವಾಪಸ್ ಮರಳುವಾಗ 7 ಗಂಟೆ ಸುಮಾರು ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎಂದು ಗ್ರಾಮದ ನಿವಾಸಿಯೊಬ್ಬರು ಮಾಹಿತಿ ನೀಡಿದರು.
ಸಿರವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.
Next Story





