ಯುವ ಕಾಂಗ್ರೆಸ್ ಸಮಿತಿಯಿಂದ ರಾಯಚೂರಿನಲ್ಲಿ ʼಮತಗಳ್ಳತನ ನಿಲ್ಲಿಸಿ’ ಅಭಿಯಾನ

ರಾಯಚೂರು: ಭಾರತ ಚುನಾವಣೆ ಆಯೋಗವು ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ‘ಸ್ಟಾಪ್ ವೋಟ್ ಚೋರಿ’ ( ಸಾಕು ಮತಗಳ್ಳತನ ನಿಲ್ಲಿಸಿ ) ಸ್ಟಿಕರ್ ಅಭಿಯಾನಕ್ಕೆ ಚಾಲನೆ ನೀಡಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿಯಿಂದ ರಾಷ್ಟ್ರವ್ಯಾಪಿ ನಡೆಸುತ್ತಿರುವ ಅಭಿಯಾನದ ಭಾಗವಾಗಿ ಇಂದು ರಾಯಚೂರಿನಲ್ಲಿ ವೋಟ್ ಚೋರಿ ನಿಲ್ಲಿಸಿ ಅಭಿಯಾನ ನಡೆಯಿತು.
ಪ್ರತಿಭಟನೆಯಲ್ಲಿ ಲೋಕಸಭಾ ಸಂಸದರಾದ ಜಿ.ಕುಮಾರ, ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಹಮ್ಮದ ಶಾಲಂ, ನಗರ ಬ್ಲಾಕ್ ಅಧ್ಯಕ್ಷರಾದ ಎನ್.ಶ್ರೀನಿವಾಸ ರೆಡ್ಡಿ, ಯುವ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷರಾದ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದ ಮಹಮ್ಮದ್ ಶೈಜಾದ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಫೈಸಾಲಖಾನ್, ಮಹಾನಗರ ಪಾಲಿಕೆಯ ಪ್ರಭಾರ ಅಧ್ಯಕ್ಷ ಜೆ.ಸಾಜೀದ್ ಸಮೀರ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಮಧುಕುಮಾರ, ರಾಷದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ರೆಡ್ಡಿ ಗುಡ್ಸಿ, ಅಜ್ಜು, ರಾಬರ್ಟ, ಬಾಬು, ದೇವಸಗೂರು ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಗೌಸ್, ಗಿಲ್ಲೇಸಗೂರು ಉಪಧ್ಯಕ್ಷರಾದ ಸಿದ್ದು ನಾಯಕ, ನಗರ ಬ್ಲಾಕ್ ಅಧ್ಯಕ್ಷರಾದ ಕಿಶೋರ್ ಎಮ.ಡಿ ಜಾವೀದ್, ಸೋಷಲ್ ಮೀಡಿಯಾ ಆಸೀಫ್, ನಗರ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ವೀರನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ ಆಸ್ತಿಹಾಳ ಪಾಲ್ಗೊಂಡಿದ್ದರು.







