Ramanagara | ಪ್ರಜಾಸೇವಾ ಆಂದೋಲನ ಸಭೆಯ ಸದುಪಯೋಗಕ್ಕೆ ಶಾಸಕ ಇಕ್ಬಾಲ್ ಹುಸೇನ್ ಕರೆ
ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆ

ರಾಮನಗರ : ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ವ್ಯವಸ್ಥಿತವಾಗಿ ಬಗೆಹರಿಸುವ ಕೆಲಸವನ್ನು ರಾಜ್ಯಾದ್ಯಂತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಜಾಸೇವಾ ಆಂದೋಲನದ ಮೂಲಕ ಮಾಡುತ್ತಿದ್ದಾರೆ, ಈ ಅಭಿಯಾನದಲ್ಲಿ ಜನರು ಅಹವಾಲುಗಳ ಅರ್ಜಿ ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಕರೆ ನೀಡಿದರು.
ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಅಹವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಪಂದಿಸಲಾಗುತ್ತಿದೆ. ಇದು ಸಾಧಾರಣವಾದ ಕಾರ್ಯಕ್ರಮವಲ್ಲ. ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲ ವರ್ಗದ ಜನರ ದುಃಖ ದುಮ್ಮಾನಗಳನ್ನು ಸ್ಥಳದಲ್ಲಿಯೇ ಪರಿಹರಿಸಿ, ಅಹವಾಲುಗಳ ವಿಲೇವಾರಿ ಮಾಡಲಾಗುವುದು ಎಂದರು.
ಜನರ ಕಷ್ಟಗಳನ್ನು ದೂರಮಾಡುವ ಕಾರ್ಯಕ್ರಮವೇ ಪ್ರಜಾ ಸೇವೆ, ಈ ಕಾರ್ಯಕ್ರಮದಲ್ಲಿ 48 ಇಲಾಖೆಗಳು ಜನರ ಮನೆ ಬಾಗಿಲಿಗೆ ಬಂದಿವೆ. ಎಲ್ಲ ಇಲಾಖೆಗಳಲ್ಲೂ ಸಾರ್ವಜನಿಕರ ಅಹವಾಲುಗಳ ಅರ್ಜಿಯನ್ನು ಪಡೆಯುತ್ತಾರೆ. ಇದು ಒಂದು ಅರ್ಜಿ ಒಂದು ಇಲಾಖೆಗೆ ಸೀಮಿತವಾಗುವ ಕಾರ್ಯಕ್ರಮ ಇದಲ್ಲ ಎಂದು ಅವರು ಹೇಳಿದರು.
ಜನರು ನೀಡುವ ಅರ್ಜಿಗಳಿಗೆ ಸರಕಾರ ನೀಡುವ ಗೌರವ, ಸ್ವೀಕರಿಸಿದ ಅರ್ಜಿಗಳಿಗೆ 15 ದಿನಗಳೊಳಗೆ ಸಂಬಂಧಪಟ್ಟ ಇಲಾಖೆಗಳು ಪರಿಹಾರ ನೀಡಬೇಕು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರೆಯಲಿದೆ. ಇದು ಪ್ರಜಾಸೇವೆಯ ಮೂಲ ಉದ್ದೇಶ. ದೇಶದಲ್ಲಿ ಈ ರೀತಿಯ ಯೋಜನೆಗಳು ಎಲ್ಲೂ ಇಲ್ಲ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಈ ಯೋಜನೆಯನ್ನು ಅನುμÁ್ಠನಗೊಳಿಸಿದ್ದಾರೆ ಎಂದು ಅವರು ಹೇಳಿದರು.
ತಮ್ಮ ಕೆಲಸಗಳಿಗಾಗಿ ಅಧಿಕಾರಿಗಳನ್ನು ಹುಡುಕುವ ಹಾಗೂ ಕಚೇರಿಗಳಿಗೆ ತೆರಳುವ ಅವಶ್ಯಕತೆ ಇಲ್ಲ. ನಿವೇಶನ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಅಹವಾಲುಗಳನ್ನು ಇಲ್ಲಿ ಸಲ್ಲಿಸಬಹುದು. ಜನಸಾಮಾನ್ಯರ ನೆರವಿಗೆ ನಿಲ್ಲಲು ರಾಜ್ಯದ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ನಿವೇಶನ ನೀಡಲು ಮುಖ್ಯಮಂತ್ರಿ ಚಿಂತಿಸಿ ಕಾರ್ಯಪ್ರವೃತ್ತರಾಗಿದ್ದಾರೆ, ಅದಕ್ಕಾಗಿ ಸರಕಾರಿ ಜಮೀನುಗಳನ್ನು ಗುರುತಿಸಲಾಗುತ್ತಿದೆ ಎಂದು ಅವರು ತಿಳೀಸಿದರು.
ನಿವೇಶನ ರಹಿತರಿಗೆ ಹಾಗೂ ಬಡವರಿಗೆ ನಿವೇಶನ ಒದಗಿಸಲು ಜಿಲ್ಲೆಯಲ್ಲಿ 1300 ಎಕರೆ ಸರಕಾರಿ ಜಮೀನನ್ನು ಗುರುತಿಸಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 300 ಎಕರೆ ಸರಕಾರಿ ಜಾಗವನ್ನು ನಿವೇಶನ ಹಂಚಿಕೆಗಾಗಿ ಗುರುತಿಸಲಾಗಿದೆ. 27 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿಗಳನ್ನು ಮಾಡಿ ನಿವೇಶನಗಳನ್ನು ನೀಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.
ರಾಮನಗರ ಕಸಬಾ ಹಾಗೂ ಕೈಲಾಂಚಕ್ಕೆ ಕುಡಿಯುವ ನೀರು ಒದಗಿಸಲು ಮಂಚನಬೆಲೆಯಿಂದ ಪೈಪ್‍ಲೈನ್ ವ್ಯವಸ್ಥೆ ಮಾಡಲಾಗಿದೆ. 300 ಕೋಟಿ ರೂ.ವೆಚ್ಚದಲ್ಲಿ ಪೈಪ್‍ಲೈನ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಸಲಾಗುವುದು. ಇದನ್ನು ಮಾ.31ರೊಳಗೆ ಅನುμÁ್ಠನಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾಳೇಗೌಡನ ದೊಡ್ಡಿಯಲ್ಲಿ 28 ಕೋಟಿ ರೂ.ಗಳಲ್ಲಿ ಏತ ನೀರಾವರಿ ವ್ಯವಸ್ಥೆ ಮಾಡಲಾಗುವುದು. ವಡ್ಡರದೊಡ್ಡಿಯಲ್ಲ್ಲಿ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಮೊಟ್ಟೆದೊಡ್ಡಿಯಲ್ಲಿ ಏತ ನೀರಾವರಿ ಯೋಜನೆಯಡಿ 500 ರಿಂದ 1000 ಎಕರೆ ನೀರಾವರಿ ಕಲ್ಪಿಸಲಾಗಿದೆ. ಕೆ.ಪಿ.ದೊಡ್ಡಿಯಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕಿದೆ ಎಂದು ಅವರು ಹೇಳಿದರು.






