Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ನಮ್ಮನ್ನು ಮೂರ್ಖರನ್ನಾಗಿಸುವ ಕಾರ್ಪೊರೇಟ್...

ನಮ್ಮನ್ನು ಮೂರ್ಖರನ್ನಾಗಿಸುವ ಕಾರ್ಪೊರೇಟ್ ಜಗತ್ತು: ಸಿ. ಬಸವಲಿಂಗಯ್ಯ

ಗಣೇಶ ಅಮೀನಗಡಗಣೇಶ ಅಮೀನಗಡ31 Jan 2025 9:37 AM IST
share
ನಮ್ಮನ್ನು ಮೂರ್ಖರನ್ನಾಗಿಸುವ ಕಾರ್ಪೊರೇಟ್ ಜಗತ್ತು: ಸಿ. ಬಸವಲಿಂಗಯ್ಯ
ಸಿ. ಬಸವಲಿಂಗಯ್ಯ ಅವರು ಕನ್ನಡದ ಪ್ರಮುಖ ರಂಗಕರ್ಮಿ. ದಿಲ್ಲಿಯ ಎನ್‌ಎಸ್‌ಡಿ (ರಾಷ್ಟ್ರೀಯ ನಾಟಕ ಶಾಲೆ) ಪದವೀಧರರು. ಮೈಸೂರು ರಂಗಾಯಣಕ್ಕೆ ಎರಡು ಅವಧಿಗೆ ನಿರ್ದೇಶಕರಾಗಿದ್ದಾಗ ‘ಶೂದ್ರ ತಪಸ್ವಿ’, ‘ಟಿಪ್ಪು ಕನಸುಗಳು’, ‘ಗಾಂಧಿ ವರ್ಸಸ್ ಗಾಂಧಿ’, ಒಂಭತ್ತು ಗಂಟೆಯ ‘ಮಲೆಗಳಲ್ಲಿ ಮದುಮಗಳು’, ‘ಗೋರಮಾಟಿ’ ಮೊದಲಾದ ನಾಟಕಗಳನ್ನು ನಿರ್ದೇಶಿಸುವ ಮೂಲಕ ಪ್ರಸಿದ್ಧರಾದವರು. ಈಚೆಗೆ ಅವರಿಗೆ ಮೈಸೂರಿನ ಡಾ.ಗಂಗೂಗಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.


ಸಾಮಾನ್ಯವಾಗಿ ರಂಗಕರ್ಮಿಗಳನ್ನು ಗುರುತಿಸಿ, ಗೌರವ ಡಾಕ್ಟರೇಟ್ ಕೊಟ್ಟಿದ್ದು ಅಪರೂಪ ಅಲ್ಲವೇ ಸರ್?

ಸಿ. ಬಸವಲಿಂಗಯ್ಯ: ಹೌದು. ಸಂಗೀತ, ನೃತ್ಯದ ಜೊತೆಗೆ ಪ್ರದರ್ಶನ ಕಲೆಗಳ ಯುನಿವರ್ಸಿಟಿ ಎಂದು ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ಗುರುತಿಸಿಕೊಂಡಿದ್ದಕ್ಕೆ ಖುಷಿಯಿದೆ.

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ವಿನ್ಯಾಸ ಇವೆಲ್ಲಕ್ಕೆ ಪ್ರೇಕ್ಷಕರು ಮತ್ತು ನಟರು ಮುಖಾಮುಖಿಯಾಗುತ್ತಾರೆ. ಆದರೆ ನೃತ್ಯ, ಸಂಗೀತ ಕೃಪಾಪೋಷಿತಗಳೇ. ಅರಮನೆ, ಗುರುಮನೆಗಳು ಪ್ರಾಯೋಜಕವಾಗಿದ್ದವು. ಈಗ ಸರಕಾರ ಅಂದರೆ ಪ್ರಭುತ್ವವೇ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ನನ್ನೊಂದಿಗೆ ಗಿರಿಜಾ ಲೋಕೇಶ್ ಅವರು ರಂಗಭೂಮಿ ಕಲಾವಿದೆ. ಅವರ ಮಾವ ಸುಬ್ಬಯ್ಯ ನಾಯ್ಡು ಅವರು ರಂಗ ಪರಂಪರೆ ಬೆಳೆಸಿದವರು. ಸಾಧು ಕೋಕಿಲ ಅವರು ರಂಗಭೂಮಿಯಿಂದ ಬಂದವರು. ಇವರೊಂದಿಗೆ ಗೌರವ ಡಾಕ್ಟರೇಟ್ ಪಡೆದುದಕ್ಕೆ ಹೆಮ್ಮೆಯಿದೆ.

ಈಗ ದುಡ್ಡು ಕೊಟ್ಟು ಗೌರವ ಡಾಕ್ಟರೇಟ್ ಪಡೆದುಕೊಳ್ಳುವ ಕಾಲ. ಇಂಥ ಸಂದರ್ಭದಲ್ಲಿ ಒಂದು ಪೈಸೆ ಕೊಡದೆ, ಅದರಲ್ಲೂ ಪಿಎಚ್.ಡಿ. ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದುಕೊಳ್ಳುವುದಕ್ಕಿಂತ ಈಗ ಪುರಸ್ಕೃತವಾದ ಗೌರವ ಡಾಕ್ಟರೇಟ್ ಹಾಗೂ ಗಂಗೂಬಾಯಿ ಹಾನಗಲ್ ಅವರು ಹಿಂದುಳಿದ ಸಮುದಾಯದ ಸಂಗೀತಗಾರ್ತಿ. ಅವರ ಹೆಸರಿನ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದದ್ದು ಹೆಚ್ಚಿನ ಖುಷಿ ಕೊಟ್ಟಿದೆ. ತಮಾಷೆ ಅಂದರೆ ವಿಚಾರ ಸಂಕಿರಣ, ಉಪನ್ಯಾಸಗಳಿಗೆ ಹೋದಾಗ ಡಾಕ್ಟರ್ ಎಂದು ಆಹ್ವಾನಪತ್ರದಲ್ಲಿ ಹಾಕುತ್ತಿದ್ದರು, ಸಮಾರಂಭಗಳಲ್ಲಿ ಡಾಕ್ಟರ್ ಎಂದು ಕರೆಯುತ್ತಿದ್ದರು. ಆಗೆಲ್ಲ ಡಾಕ್ಟರ್ ಅಲ್ಲವೆಂದು ಸ್ಪಷ್ಟಪಡಿಸುತ್ತಿದ್ದೆ.

ರಂಗಭೂಮಿಯ ಮೂಲಕ ನೀವು ಹೇಳಬೇಕೆಂದಿರುವ ಮಾತು...

ಸಿ. ಬಸವಲಿಂಗಯ್ಯ: ನೋಡಿ, ರಂಗಭೂಮಿಯಲ್ಲಿ ಜಾತಿ, ಧರ್ಮವಿಲ್ಲ. ಅದು ಜಾತ್ಯತೀತ, ಧರ್ಮಾತೀತ. ಎಲ್ಲವನ್ನೂ ಪ್ರೇಕ್ಷಕರೆದುರು ತೆರೆದಿಟ್ಟು ಸರಿ, ತಪ್ಪುಗಳನ್ನು ಅವರ ನಿರ್ಧಾರಕ್ಕೆ ಬಿಡುತ್ತೇವೆ. ರಂಗಭೂಮಿ ರಂಜನೆ ಕೊಡಬೇಕು, ಚಿಂತನೆಗೆ ಹಚ್ಚಬೇಕು, ನಾಟಕ ನೋಡಿದ ಮೇಲೆ ನಿದ್ದೆಗೆಡಬೇಕು ಅಂದರೆ ನಿದ್ದೆಗೆಡುವ ಹಾಗೆ ನಾಟಕ ತಿವಿಯಬೇಕು. ಎಚ್ಚರಿಸಬೇಕು. ಇದರೊಂದಿಗೆ ಮನಸ್ಸನ್ನು ಮುದಗೊಳಿಸುವ, ಅರಳಿಸುವ ಕೆಲಸವನ್ನು ರಂಗಭೂಮಿ ಮಾಡುತ್ತದೆ. ಇಡೀ ಜಗತ್ತಿಗೆ ಸಂಕಟ, ನೋವು ತರೋದೇ ಮನಸ್ಸು. ಆದರೆ ಈಗ ಕೇಡಿನ ಮನಸ್ಸುಗಳು ಹೆಚ್ಚುತ್ತಿವೆ. ಹೀಗೆಯೇ ಒಂದರ ವಿರುದ್ಧ ಇನ್ನೊಂದನ್ನು ನಿಲ್ಲಿಸಿ ಇದು ಶ್ರೇಷ್ಠ, ಇದು ಕನಿಷ್ಠ ಎಂದು ಹೇಳುವ ಮೀಮಾಂಸೆ ಇದೆ. ನಾಟಕದಲ್ಲೂ ನಾಯಕ, ಖಳನಾಯಕ ಇರುತ್ತಾರೆ. ಗಂಡಿಗೆ ಹೆಣ್ಣು, ಬಿಳಿಗೆ ಕಪ್ಪು ಎನ್ನುವ ವಿರೋಧ ಶಬ್ದಗಳನ್ನು ಬಳಸಲಾಗುತ್ತದೆ.

ಆದರೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದೆ. ಈ ನಾಟಕದಲ್ಲಿ ನಾಯಕನಿಲ್ಲ, ಕುವೆಂಪು ಹೇಳುವ ಹಾಗೆ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಕಶ್ಚಿತವಲ್ಲ. ಇದಕ್ಕೆ ಮೊದಲಿಲ್ಲ, ತುದಿಯಿಲ್ಲ, ಕೊನೆ ಮುಟ್ಟುವುದಿಲ್ಲ. ಈ ತತ್ವವನ್ನು ಅನುಸರಿಸಿದೆ.

ಮೈಸೂರಿನಿಂದ ಬೆಂಗಳೂರಲ್ಲೂ ‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನಗೊಂಡಿತು.

ಸಿ. ಬಸವಲಿಂಗಯ್ಯ: ಹೌದು. ಮೈಸೂರು ರಂಗಾಯಣದಲ್ಲಿ 15 ಪ್ರದರ್ಶನಗಳನ್ನು ಕಂಡಿತು. ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ 101 ಪ್ರದರ್ಶನಗಳಾದವು. ಮತ್ತೆ ಈ ನಾಟಕವನ್ನು ರಾಮನಗರದ ಜಾನಪದ ಲೋಕದಲ್ಲಿ ಪ್ರದರ್ಶಿಸುವ ಉದ್ದೇಶವಿದೆ.

ಈ ನಾಟಕವನ್ನು ಆಡಿಸುವ ಉದ್ದೇಶ ಏನೆಂದರೆ, ಪೌರಾಣಿಕ ನಾಟಕಗಳನ್ನು, ಯಕ್ಷಗಾನವನ್ನು ರಾತ್ರಿಯಿಡೀ ನೋಡುವ ಪ್ರೇಕ್ಷಕರಿದ್ದಾರೆ. ಬೃಹತ್ತಾದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಒಂಭತ್ತು ಗಂಟೆಯವರೆಗೆ ತೋರಿಸೋಣವೆಂದಾಗ ವಿರೋಧ ಬಂತು. ಯಾರು ನೋಡುತ್ತಾರೆ ಎಂಬ ಆತಂಕ ನಮ್ಮ ಕಲಾವಿದರಲ್ಲೇ ಇತ್ತು. ಆದರೆ ಎಲ್ಲ ಜಾತಿ, ಜನಾಂಗದ ಸಂಸ್ಕೃತಿ, ಆತಂಕಗಳು, ಬದುಕಿನ ಬದಲಾವಣೆ, ಶಿಕ್ಷಣ ಪದ್ಧತಿ ಇಂಥ ಮೊದಲಾದ ಅಂಶಗಳ ಕುರಿತು ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರೆದಿದ್ದಾರೆ. ಈ ಕಾದಂಬರಿಯಲ್ಲಿ ಹೊಲತಿ ತಿಮ್ಮಿಯು ಹುಲಿಕಲ್ ಗುಡ್ಡದ ಮೇಲೆ ಮಲಗಿ, ಮರುದಿನ ಸೂರ್ಯೋದಯ ಕಂಡು ‘ಮಾವ ಹ್ಯಾಗೆ ಸೂರ್ಯ ಹುಟ್ತಿದಾನೆ’ ಎನ್ನುತ್ತಾಳೆ. ಅಂದರೆ ಸೌಂದರ್ಯ ಕಾಣುವುದು ಒಂದು ವರ್ಗದ, ಶ್ರೇಷ್ಠ ಜಾತಿಯಲ್ಲಿ ಇಲ್ಲ. ಬಡವರೂ ಕಾಣುತ್ತಾರೆ. ಬಡವರಲ್ಲೂ ಸೌಂದರ್ಯವಿದೆ.

ಕುಂಭಮೇಳದಲ್ಲಿ ಕಂಡ ಮೊನಾಲಿಸಾ...

ಸಿ. ಬಸವಲಿಂಗಯ್ಯ: ಸರಿಯಾಗಿ ಹೇಳಿದ್ರಿ. ಮೊನಾಲಿಸಾ ಎಂಬ ಬಂಜಾರ ಹುಡುಗಿ ತನ್ನ ಕಣ್ಣು, ಮುಗ್ಧತೆ ಕಾರಣಕ್ಕೆ ವೈರಲ್ ಆದಳು. ಬಡವರಲ್ಲೂ ಸೌಂದರ್ಯ ಇರುತ್ತದೆ. ಇದನ್ನೇ ನಾನು ತಿಮ್ಮಿಯಲ್ಲಿ ಕಂಡಿದ್ದು.

ಗಮನಿಸಿ; ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ರಾಷ್ಟ್ರಪತಿ ಮುರ್ಮು ಅವರ ಫೋಟೊವನ್ನು ಮುದ್ರಣ ಮಾಧ್ಯಮಗಳು ಪ್ರಕಟಿಸಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ. ಯಾಕೆ ಹೇಳಿ? ಅವರು ಆದಿವಾಸಿ ಎನ್ನುವ ಕಾರಣಕ್ಕೆ. ಸಂಸತ್ತಿನ ಒಳಗೂ ಅವರನ್ನು ಕರೆಯಲಿಲ್ಲ. ಹೀಗಿದ್ದಾಗ ಹೇಗೆ ನಾಟಕವಾಡುವುದು?

ಕುವೆಂಪು ಅವರು ‘ಶೂದ್ರ ತಪಸ್ವಿ’ ನಾಟಕ ಬರೆದಾಗಲೂ ವಿರೋಧ ಬಂದಿತ್ತು...

ಸಿ. ಬಸವಲಿಂಗಯ್ಯ: ಹೌದು, ಈ ನಾಟಕವನ್ನು ನಿರ್ದೇಶಿಸುವ ಮೂಲಕ ಉತ್ತರ ಕೊಟ್ಟೆ. ಈ ಕೃತಿಯಲ್ಲಿ ಊರ್ಮಿಳೆ, ಶೂರ್ಪನಖಿ, ಮಂಥರೆಯನ್ನು ಕುವೆಂಪು ಅವರು ಉದಾತ್ತಗೊಳಿಸಿದ್ದಾರೆ. ಅವರ ಕೃತಿಯಲ್ಲಿ ಶಂಬೂಕನನ್ನು ರಾಮ ಕೊಲ್ಲುವುದಿಲ್ಲ. ವಾಲ್ಮೀಕಿ ಶೂದ್ರ, ಶಂಬೂಕ ಶೂದ್ರ. ಹೀಗಿದ್ದಾಗ ಹೇಗೆ ಕೊಲ್ಲುತ್ತಾರೆ?

ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಮಹಾತ್ಮಾ ಗಾಂಧಿಯ ಸರ್ವೋದಯ, ಪೂರ್ಣದೃಷ್ಟಿ, ವಿಶ್ವಮಾನವತ್ವ ಅಂಶಗಳು ಅಡಕಗೊಂಡಿವೆ. ಅವರ ಮಹಾಕಾವ್ಯದಲ್ಲಿ ಅಲ್ಲದೆ ರಾಮಾಯಣ, ಮಹಾಭಾರತ, ಭಾಗವತದಲ್ಲೂ ಜೀವನಮೌಲ್ಯಗಳಿವೆ. ಅವುಗಳನ್ನು ನಮ್ಮ ಕಾಲಕ್ಕೆ ಮುರಿದು ಕಟ್ಟಬೇಕು. ಹಳೆಯ ಆಭರಣಗಳಿಗೆ ಹೊಸ ರೂಪ ಕೊಡುತ್ತೇವಲ್ಲ ಹಾಗೆ.

ನೀವು ನಾಟಕಗಳ ಮೂಲಕ, ಉಪನ್ಯಾಸದ ಮೂಲಕ ಪ್ರಸಕ್ತ ವಿದ್ಯಮಾನಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತೀರಿ...?

ಸಿ. ಬಸವಲಿಂಗಯ್ಯ: ಮಾಡಬೇಕಲ್ರಿ. ನೋಡಿ, ಬಂಜಾರ ಸಮುದಾಯದ ಹನುಮಂತನಿಗೆ ಬಿಗ್ ಬಾಸ್ ವಿನ್ನರ್ ಎಂದು ಮಾಡಿ ಬಡವರ ಬಾಯಿಗೆ ಚೂರ್ಣ ಉಣಿಸಲಾಯಿತು. ಹೇಗೆ ವಿನ್ನರ್ ಮಾಡಲಾಗುತ್ತದೆ? ಅತಿ ಹೆಚ್ಚು ವೋಟ್ ಬಂದಿರುವವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ ನಿಜ. ಆದರೆ ಐದು ಕೋಟಿ ಜನರು ಹನುಮಂತನಿಗೆ ವೋಟ್ ಮಾಡಿದರು. ಹೇಗೆ ಮಾಡಿದರು? ಮೊಬೈಲ್ ಫೋನ್ ಮೂಲಕ. ಇದು ವ್ಯಾಪಾರವಲ್ಲವೆ? ಹಾಗೆಯೇ ಬಡವ, ಮುಗ್ಧ, ಹಿಂದುಳಿದ ಹುಡುಗನನ್ನು ವಿನ್ನರ್ ಮಾಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತದೆ ಎನ್ನುವುದೆಲ್ಲ ಸರಿಯಲ್ಲ. ಇದು ಕಾರ್ಪೊರೇಟ್ ಜಗತ್ತಿನ ಹುನ್ನಾರ. ಇದನ್ನು ಅರಿಯಬೇಕಷ್ಟೆ. ಹನುಮಂತ ವಿನ್ನರ್ ಆದ ಕೂಡಲೇ ಅವರ ಜಾತಿ, ಮೀಸಲಾತಿ, ಗ್ರಾಮೀಣ ಎನ್ನುವ ಚರ್ಚೆಗೆ ಬರುತ್ತದೆ. ಹನುಮಂತನ ಎದುರು ಮಹಾತ್ಮಾ ಗಾಂಧಿ ನಿಂತಿದ್ದರೂ ಹನುಮಂತನೇ ಗೆಲ್ಲುತ್ತಿದ್ದ ಎಂದವರ ಮನಸ್ಥಿತಿ ಎಂಥದು? ಹನುಮಂತನನ್ನು ಹೀರೋ ಮಾಡುವ ಮೂಲಕ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಹೀಗೆಂದಾಗ ಹನುಮಂತ ವಿನ್ನರ್ ಆಗಬಾರದಿತ್ತು ಎಂದಲ್ಲ ನನ್ನ ಮಾತು. ಈ ವಿದ್ಯಮಾನಗಳ ಹಿಂದಿನ ಹುನ್ನಾರ ಗೊತ್ತಿರಬೇಕು ಎನ್ನುವುದಷ್ಟೇ ನನ್ನ ಕಾಳಜಿ.

ಹೊಸ ನಾಟಕಗಳ ನಿರ್ದೇಶನ?

ಸಿ. ಬಸವಲಿಂಗಯ್ಯ: ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ನಾಟಕವಾಗಿಸುವ ಯೋಜನೆಯಿದೆ. ಅವರ ಚಿಂತನೆಗಳು, ಮಾನವೀಯತೆಯನ್ನು ಸಾರುವುದರ ಜೊತೆಗೆ ಅವರ ಸಂದರ್ಶನಗಳನ್ನು ಆಧರಿಸಿ ಈ ನಾಟಕ ಸಜ್ಜುಗೊಳ್ಳಲಿದೆ. ಮೈಸೂರಿನ ಕೀರ್ತಿಗೌಡ ಅವರು ತಮ್ಮ ಕಾವಲುಮನೆ ಸಾಂಸ್ಕೃತಿಕ ಕೇಂದ್ರದ ಮೂಲಕ ನಿರ್ಮಿಸುತ್ತಿದ್ದಾರೆ. ಇದು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ಬಿ.ವಿ. ಕಾರಂತ ಅಧ್ಯಯನ ಪೀಠದ ಸಹಯೋಗದಲ್ಲಿ ಸಿದ್ಧಗೊಳ್ಳಲಿದೆ. ಏಳು ಕಲಾವಿದರನ್ನು ಒಳಗೊಂಡ ಈ ನಾಟಕವು ಮಾರ್ಚ್ ಎರಡನೇ ವಾರದಲ್ಲಿ ಪ್ರದರ್ಶನಗೊಳ್ಳಲಿದೆ.

ಇದರೊಂದಿಗೆ ಕೆ.ವೈ. ನಾರಾಯಣಸ್ವಾಮಿ ರಚಿಸಿದ ‘ವಚನ ಕಲ್ಯಾಣ’ ನಾಟಕ ಒಂಭತ್ತು ಗಂಟೆಯದು. ಇದು ಸಿದ್ಧಗೊಂಡಿದೆ. ಆದರೆ ನಾಲ್ಕು ಸರಕಾರಗಳು ಬದಲಾದವು. ಅನುದಾನ ಮಂಜೂರಾಗಿದೆ. ಇನ್ನೇನು ಈ ನಾಟಕವನ್ನು ಕೈಗೆತ್ತಿಕೊಳ್ಳಬೇಕಿದೆ. ಇದು ಶರಣ ಚಳವಳಿ ಕುರಿತ ನಾಟಕ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X