Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಪ್ರೇಕ್ಷಕರನ್ನು ಸೆರೆ ಹಿಡಿವ ‘ಧರ್ಮನಟಿ’

ಪ್ರೇಕ್ಷಕರನ್ನು ಸೆರೆ ಹಿಡಿವ ‘ಧರ್ಮನಟಿ’

ಗಣೇಶ ಅಮೀನಗಡಗಣೇಶ ಅಮೀನಗಡ24 Jan 2025 4:21 PM IST
share
ಪ್ರೇಕ್ಷಕರನ್ನು ಸೆರೆ ಹಿಡಿವ ‘ಧರ್ಮನಟಿ’

ನಾಟಕ: ಧರ್ಮನಟಿ

ಹಿಂದಿ ಮೂಲ: ಸುರೇಂದ್ರ ವರ್ಮಾ

ಕನ್ನಡಕ್ಕೆ: ಸಿದ್ಧಲಿಂಗ ಪಟ್ಟಣಶೆಟ್ಟಿ

ತಂಡ: ರಂಗರಥ, ಬೆಂಗಳೂರು

ನಿರ್ದೇಶನ: ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್

ಸಂಗೀತ: ಭಿನ್ನಷಡ್ಜ

ಗೀತ ಸಾಹಿತ್ಯ: ಆಸಿಫ್ ಕ್ಷತ್ರಿಯ

ಗಾಯನ: ದಿಗ್ವಿಜಯ ಹೆಗ್ಗೋಡು, ಅಶ್ವಿನಿ, ಸ್ವಾತಿರಾವ್

ಸಂಗೀತ ನಿರ್ವಹಣೆ; ಆಸಿಫ್ ಕ್ಷತ್ರಿಯ

ವಸ್ತ್ರ, ನೃತ್ಯ ವಿನ್ಯಾಸ: ಶ್ವೇತಾ ಶ್ರೀನಿವಾಸ್

ರಂಗಸಜ್ಜಿಕೆ, ಪರಿಕರ: ರಂಗರಥ ತಂಡ

ಬೆಳಕಿನ ವಿನ್ಯಾಸ: ರವಿಶಂಕರ್

ಪ್ರಸಾಧನ: ಗುರು

ಸಂಚಾಲಕ: ವಿನಯ್ ಗೌಡ

ಪಾತ್ರವರ್ಗ

ಓಕ್ಕಾಕ: ಅನುಷ್ ಕೃಷ್ಣ, ಶೀಲವತಿ: ಶ್ವೇತಾ ಶ್ರೀನಿವಾಸ್,

ಪ್ರತೋಷ: ಸಚಿನ್ ಪವಾರ್, ಮಹತ್ತರಿಕಾ: ಶ್ರೀಯಾ ಅಗಮ್ಯ, ಅಲೇಖ್ಯ: ಕೃಪಾ ಜಗದೀಶ್, ಅಮಾತ್ಯ: ಆದಿತ್ಯ ಲೋಕೇಶ್, ಸೇನಾಪತಿ: ಮೋಹಿತ್ ರಾಜ್, ಪುರೋಹಿತ: ಪ್ರಣತಿ ರಾಘವೇಂದ್ರ, ವೈದ್ಯ: ಶಿವಸಾಗರ್

‘‘ಸ್ವಾರ್ಥ! ಯಾರು ಸ್ವಾರ್ಥಿಗಳು!? ಸಾಮರ್ಥ್ಯವಿಲ್ಲದಿದ್ದರೂ ಮದುವೆಯಂತಹ ಹೇಯಕೃತ್ಯವನ್ನು ಮಾಡಿದ್ದೀರಲ್ಲ!? ನೀವೆಂಥ ಪರಮಾರ್ಥಿಗಳು? ನಿಮಗೆ ರಾಜವೈದ್ಯರು ಹೇಳಿದ್ದರಲ್ಲವೆ? ಸಂಪೂರ್ಣ ಕಾಮದ ಉಷ್ಣತೆಯೊಂದಿಗೆ ಒಂದು ಹೆಣ್ಣು ನಿಮ್ಮ ಮುಂದೆ ಬಂದು ನಿಂತಾಗ ತಾನಾಗಿಯೇ... ಅಂದರೆ ನಾನು ನಿಮ್ಮ ಪಾಲಿಗೆ ಕೇವಲ ಮೂಲಿಕೆಯೆ? ಉಪಚಾರವೆ? ಒಂದು ಔಷಧಿಯೇ? ಒಂದು ವೇಳೆ ಈ ಚಿಕಿತ್ಸೆ ವ್ಯರ್ಥವಾದರೆ? ಈ ಜೀವಂತ ಮೂಲಿಕೆಯ ಪರಿಸ್ಥಿತಿ ಏನಾಗುತ್ತಿತ್ತು ಎಂದು ನೀವು ಯೋಚಿಸಲೇ ಇಲ್ಲ. ಹೇಳಿ... ಯಾರು ಸ್ವಾರ್ಥಿಗಳು? ನಾನೋ? ನೀವೋ? ಈ ಪುರುಷ ಪ್ರಧಾನ ಸಮಾಜವೋ? ಈ ವ್ಯವಸ್ಥೆಯೋ?’’

- ಹೀಗೆ ‘ಧರ್ಮನಟಿ’ ನಾಟಕದಲ್ಲಿ ಶೀಲವತಿಯು ರಾಜ ಓಕ್ಕಾಕನನ್ನು ಕೇಳುತ್ತಾಳೆ. ಈ ನಾಟಕವು ಮೈಸೂರು ರಂಗಾಯಣ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಈಗಾಗಲೇ ಕನ್ನಡದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ರಚನೆಯ ಈ ನಾಟಕವು ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ಎಂದು ಪ್ರದರ್ಶನಗೊಂಡಿದೆ.

ಇದು ಹತ್ತನೇ ಶತಮಾನದ ಮಲ್ಲರಾಜ್ಯದ ಕಥೆ. ಮದುವೆಯಾಗಿ ಐದು ವರ್ಷ ಕಳೆದರೂ ರಾಜನಿಗೆ ಮಕ್ಕಳಾಗದೆ ಇದ್ದಾಗ ರಾಜಸಿಂಹಾಸನಕ್ಕೆ ಉತ್ತರಾಧಿಕಾರಿ ಸಿಗುವ ಸಂಭವ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ನೆರೆಯ ರಾಜ್ಯಗಳ ರಾಜರು ಮಲ್ಲರಾಜ್ಯವನ್ನು ಕಬಳಿಸುವ ಪ್ರಯತ್ನ ಮಾಡುತ್ತಾರೆ. ಆಗ ಮಲ್ಲರಾಜ್ಯದ ಅಮಾತ್ಯ ಪರಿಷತ್ತು ವೈರಿಗಳ ಪ್ರಯತ್ನವನ್ನು ವಿಫಲಗೊಳಿಸಲು, ‘ನಿಯೋಗ’ ಪದ್ಧತಿಯ ಮೂಲಕ ರಾಜಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ಪಡೆಯುವ ಯೋಜನೆ ರೂಪಿಸುತ್ತದೆ. ಈ ಯೋಜನೆಯಿಂದ ಮಹಾರಾಣಿ ಶೀಲವತಿ ಹಾಗೂ ಮಹಾರಾಜ ಓಕ್ಕಾಕನ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ಶೀಲವತಿಯು ಇನ್ನೊಬ್ಬರೊಂದಿಗೆ ಒಂದು ರಾತ್ರಿ ಕಳೆದು ಗರ್ಭವತಿಯಾಗುವ ಬದಲು ದತ್ತು ತೆಗೆದುಕೊಳ್ಳುವ ಆಲೋಚನೆಯಲ್ಲಿರುತ್ತಾಳೆ. ಇದಕ್ಕೆ ಅಮಾತ್ಯಪರಿಷತ್ತು ಒಪ್ಪುವುದಿಲ್ಲ. ಅಮಾತ್ಯ ಬಂದು ‘‘ಸಜ್ಜಾಗಿ ಬನ್ನಿ’’ ಎಂದು ಹೇಳಿದಾಗ ‘‘ಅಮಾತ್ಯರೆ, ಜನ್ಮ ಕೊಟ್ಟವಳು ತಾಯಿಯಾದರೆ ಸಾಕಿ ಬೆಳೆಸಿದವಳು ಮಹಾತಾಯಿಯಂತೆ. ನಾನೇಕೆ ಮಹಾತಾಯಿಯಾಗಬಾರದು?’’ ಎಂದಾಗ ‘‘ಅರ್ಥವಾಗಲಿಲ್ಲ’’ ಎಂದ ಅಮಾತ್ಯನಿಗೆ ಶೀಲವತಿಯು ‘‘ಒಂದು ಮಗುವನ್ನು ದತ್ತು ಪಡೆದು ಅದನ್ನೇ ಸಾಕಿ ಬೆಳೆಸಿ ಉತ್ತರಾಧಿಕಾರಿಯನ್ನಾಗಿ ಮಾಡಿದರೆ ಆಗದೆ? ಈ ಧರ್ಮನಟಿ, ಈ ನಿಯೋಗ, ಈ ಎಲ್ಲ ಪ್ರಕ್ರಿಯೆಗಳು ಬೇಕೆ!?’’ ಎಂದು ಕೇಳುತ್ತಾಳೆ. ಏನನ್ನೂ ಉತ್ತರ ಕೊಡದ ಅಮಾತ್ಯ ‘‘ರಾಜಾಡಳಿತ ನಿಯಮಗಳ ಪ್ರಕಾರ ಈ ನಿಯೋಗ ಪ್ರಕ್ರಿಯೆ ಮೂರನೆಯ ಸಲವೂ ಅಸಫಲವಾದರೆ ಮಾತ್ರ ಮುಂದಿನ ನಿರ್ಧಾರ. ನಡೆಯಿರಿ, ಎಲ್ಲ ಸಜ್ಜಾಗಿದೆ’’ ಎಂದು ಅಮಾತ್ಯ, ನಿಯೋಗದ ಆಯ್ಕೆಗೆ ಕರೆದೊಯ್ಯುತ್ತಾನೆ. ನಿಯೋಗದಲ್ಲಿ ವ್ಯಾಪಾರಸ್ಥರಲ್ಲದೆ ಶೀಲವತಿಯ ಹಳೆಯ ಗೆಳೆಯ ಪ್ರತೋಷನೂ ಇರುತ್ತಾನೆ. ಆಗ ಪ್ರತೋಷನನ್ನು ಶೀಲವತಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಇದನ್ನು ಧರ್ಮನಟಿ ಎನ್ನುತ್ತಾರೆ. ಧರ್ಮನಟಿ ಎಂದರೆ ಧರ್ಮದ ಒಳಿತಿಗಾಗಿ ಹೆಂಡತಿಯಂತೆ ನಟಿಸುವುದು. ಹೀಗೆ ಒಂದು ರಾತ್ರಿ ಮಾತ್ರ ಪ್ರತೋಷನಿಗೆ ಹೆಂಡತಿಯಾಗುತ್ತಾಳೆ. ಹಳೆಯ ಗೆಳೆಯನಾಗಿದ್ದ ಪ್ರತೋಷನಿಗೆ ಧನವಂತನಲ್ಲದ ನನ್ನನ್ನು ತೊರೆದು ಮಹಾರಾಜರನ್ನು ಮದುವೆಯಾದ ಕುರಿತು ಕೇಳಿದಾಗ ‘‘ಮಹಾರಾಜರನ್ನು ಮದುವೆಯಾಗುವ ನಿರ್ಧಾರ ನನ್ನದಾಗಿರಲಿಲ್ಲ. ನನ್ನ ತಂದೆತಾಯಿಯರದಾಗಿತ್ತು. ಅದೂ ಅಲ್ಲದೆ, ರಾಜ್ಯದ ರಾಜನೇ ಬಂದು ಮದುವೆಯಾಗುವಂತೆ ಅಂಗಲಾಚಿದಾಗ ನನ್ನ ತಂದೆತಾಯಿಯರಿಗೂ ಬೇಡ ಎನ್ನಲಾಗಲಿಲ್ಲ. ರಾಜನ ಆಸೆಗಳ ವಿರುದ್ಧ ಹೋಗುವುದೆಂತು? ಅದು ಅಲ್ಲದೆ ಬಡವರು ನಾವು’’ ಎಂದಾಗ ಗೆಳೆಯ ಪ್ರತೋಷ ‘‘ನೀನು ಬೇಡ ಎಂದು ಹೇಳಬಹುದಿತ್ತು’’ ಎನ್ನುತ್ತಾನೆ. ಇದಕ್ಕೆ ‘‘ನೀನೇ ಬಂದು ಕರೆದುಕೊಂಡು ಹೋಗಬಹುದಿತ್ತು’’ ಎಂದು ಮರು ಉತ್ತರಿಸುತ್ತಾಳೆ.

‘‘ನಮಗೆ ಬೇಕಾದುದೆಲ್ಲ ಸಿಗುವವರೆಗೆ ಮಾತ್ರ ಪ್ರೀತಿ. ಸಿಗದೆ ಹೋದಾಗ ಪಯಣ ಮತ್ತೊಂದು ಕಡೆಗೆ’’ ಎನ್ನುವ ಪ್ರತೋಷ ತನ್ನನ್ನು ಬಿಟ್ಟು ಹೋಗಿದ್ದರ ಕಾರಣ ಕೇಳುತ್ತಾನೆ.

‘‘ನಿನ್ನನ್ನು ಪ್ರೀತಿಸುತ್ತಿದ್ದೆ. ಆದರೆ ಅಸಹಾಯಕಳಾಗಿದ್ದೆ. ಪ್ರೀತಿ ಎನ್ನುವುದು ಮುಗಿಯಲ್ಲ. ಅದು ಅನವರತ. ಒಡನಾಟ ಕಡಿಮೆಯಾಗಬಹುದಷ್ಟೇ’’ ಎಂದು ಶೀಲವತಿ ಹೇಳುತ್ತಾಳೆ. ಖಲೀಲ್ ಗಿಬ್ರಾನ್ ಹೇಳುವ ಹಾಗೆ ‘ಪ್ರೀತಿ ತನ್ನನ್ನು ಬಿಟ್ಟು ಬೇರೇನನ್ನೂ ಕೊಡುವುದಿಲ್ಲ ಮತ್ತು ತನ್ನಿಂದ ತಾನೇ ಏನನ್ನೂ ತೆಗೆದುಕೊಳ್ಳುವುದಿಲ್ಲ, ಪ್ರೀತಿಗೆ ಪ್ರೀತಿಯೇ ಸಾಕು’ ಎನ್ನುವ ಹಾಗೆ ಅವರಿಬ್ಬರು ಬದುಕಿದ್ದರು. ಅವರ ಭೇಟಿಗೆ ನಿಯೋಗವು ಅವಕಾಶ ಕೊಡುತ್ತದೆ. ಶೀಲವತಿಯು ಧರ್ಮನಟಿಯಾಗುತ್ತಾಳೆ.

‘‘ದುಡ್ಡಿನ ಸಲುವಾಗಿ ರಾಜನನ್ನು ಮದುವೆಯಾಗಿದ್ದೆ. ನನ್ನ ಬಳಿ ದುಡ್ಡಿರಲಿಲ್ಲ ಎನ್ನುವ ಕಾರಣಕ್ಕೆ ಬಿಟ್ಟು ಹೋದೆ’ ಎನ್ನುವ ಪ್ರತೋಷನ ಅಸಮಾಧಾನಕ್ಕೆ ಸಾಮಾಜಿಕ, ರಾಜಕೀಯ ಒತ್ತಡಗಳಿಗೆ ಒಳಗಾಗಿದ್ದೆ ಎನ್ನುವುದನ್ನು ಶೀಲವತಿ ವಿವರಿಸುತ್ತಾಳೆ. ಆನಂತರ ಅವರಿಬ್ಬರ ಮಿಲನವಾದರೆ ಅತ್ತ, ಓಕ್ಕಾಕ ನರಳುತ್ತಾನೆ. ಮರುದಿನ ಬಂದ ಶೀಲವತಿಗೆ ‘ರಾತ್ರಿ ಹೇಗೆ ಕಳೆಯಿತು?’’ ಎಂದು ಓಕ್ಕಾಕ ಕೇಳುತ್ತಾನೆ.

‘‘ಯಾವಾಗ ಬೆಳಗಾಯಿತೋ ಗೊತ್ತೇ ಆಗಲಿಲ್ಲ’’ ಎನ್ನುತ್ತಾಳೆ ಶೀಲವತಿ. ಹತ್ತಿರ ಬರುವ ಮಹಾರಾಜ ‘‘ಇದೆಂಥ ಮೈವಾಸನೆ?’’ ಎಂದು ಪ್ರಶ್ನಿಸುತ್ತಾನೆ. ‘‘ನಿಮಗೆ ಈ ಪರಿಮಳದ ಪರಿಚಯ ಇಲ್ಲ. ಇದ್ದಿದ್ದರೆ ನಿನ್ನೆ ಬಂದ ರಾತ್ರಿ ನನ್ನ ಅಥವಾ ನಮ್ಮ ಜೀವನದಲ್ಲಿ ಎಂದೂ ಬರುತ್ತಿರಲಿಲ್ಲ’’ ಎನ್ನುತ್ತಾಳೆ. ಕೂಡಲೇ ಮಹಾರಾಜ ಸಹಾಯಕಿಯನ್ನು ಕರೆದು ‘‘ಮಹಾದೇವಿಯವರ ಸ್ನಾನಕ್ಕೆ ವ್ಯವಸ್ಥೆ ಮಾಡು’’ ಎಂದಾಗ ‘‘ಈಗಲೇ ಬೇಡ. ಇನ್ನೂ ಕೆಲಹೊತ್ತು ಈ ಪರಿಮಳದಲ್ಲಿ ನನ್ನನ್ನು ಬಂದಿಯಾಗಿರಲು ಬಿಡಿ. ಇದು ನನ್ನ ಅಸ್ತಿತ್ವದ ಜೊತೆಗೆ ಒಂದಾಗಿಸಿಕೊಳ್ಳಬೇಕು. ರೋಮರೋಮಗಳಲ್ಲಿ ತುಂಬಿಕೊಳ್ಳಬೇಕು. ನನ್ನ ಎಚ್ಚೆತ್ತ ಕನಸುಗಳಿಗೆ ಈ ಪರಿಮಳದ ಸಿಂಚನವಾಗಬೇಕು’’ ಎನ್ನುತ್ತಾಳೆ. ಸಿಟ್ಟಿಗೇಳುವ ಮಹಾರಾಜನಿಗೆ ‘‘ಈ ವಾಸನೆಯಲ್ಲಿ ಏನೆಲ್ಲಾ ಅಡಗಿದೆ ಗೊತ್ತೆ?’’ ಎಂದು ಕೇಳಿದಾಗ ಶೀಲವತಿಗೆ ‘‘ಅಸಂಬದ್ಧ ಮಾತುಗಳು’’ ಎನ್ನುತ್ತಾನೆ.‘‘ಅಸಂಬದ್ಧವಾಗಿದ್ದುದು ನಿಮ್ಮ ಜೊತೆಗಿನ ಐದು ವರ್ಷಗಳ ವೈವಾಹಿಕ ಜೀವನ. ಇಷ್ಟು ವರ್ಷಗಳವರೆಗೆ ಪ್ರತೀ ರಾತ್ರಿ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದೆ. ನಿಮ್ಮ ತಪ್ಪಿದ್ದರೂ ಸಹಿಸಿಕೊಂಡು ನಿಯೋಗದ ಕಾರ್ಯಕ್ಕೆ ಮುಂದಾದೆ’’ ಎಂದು ಸಿಟ್ಟಾಗಿ ಹೇಳುತ್ತಾಳೆ.

ಬಳಿಕ ಬರುವ ಸೇನಾಪತಿಗೆ ‘‘ನಿಮ್ಮ ಪ್ರಕಾರ ಯುದ್ಧಭೂಮಿಯಲ್ಲಿ ವೈರಿಯನ್ನು ಸೋಲಿಸುವುದು ಗೆಲುವೋ ಅಥವಾ ಪ್ರಣಯದಲ್ಲಿ ಶರಣಾಗುವುದು ಗೆಲುವೋ?’’ ಎಂದು ಶೀಲವತಿ ಕೇಳಿದಾಗ ಸೇನಾಪತಿ ‘‘ಮುಜುಗರ ಕ್ಕೀಡುಮಾಡಬೇಡಿ’’ ಎನ್ನುತ್ತಾನೆ. ‘‘ಸುಖ ನಮ್ಮ ಅಧಿಕಾರವಲ್ಲವೆ? ಸ್ತ್ರೀ ಇದರಿಂದ ಏಕೆ ವಂಚಿತಳಾಗಬೇಕು? ಅದೂ ಅವಳದಲ್ಲದ ತಪ್ಪಿಗೆ!?’’ ಎಂದು ಪ್ರಶ್ನಿಸುತ್ತಾಳೆ.

ಹೀಗೆ ಹೆಣ್ಣಿನ ಅಸ್ತಿತ್ವವನ್ನು ಪ್ರಶ್ನಿಸುತ್ತಲೇ ದಬ್ಬಾಳಿಕೆ, ಶೋಷಣೆ ಕುರಿತು ಆಕ್ರೋಶವನ್ನು ಶೀಲವತಿ ವ್ಯಕ್ತಪಡಿಸುತ್ತಾಳೆ. ಹತ್ತನೆಯ ಶತಮಾನದಿಂದ ಹಿಡಿದು ಈಗಿನವರೆಗೂ ಹೆಣ್ಣಿನ ಸ್ಥಾನಮಾನ ಬದಲಾಗಿಲ್ಲ ಎನ್ನುವುದನ್ನೂ ನಾಟಕ ಸೂಚಿಸುತ್ತದೆ. ಶೀಲವತಿ ಪಾತ್ರದಲ್ಲಿ ಶ್ವೇತಾ ಶ್ರೀನಿವಾಸ್ ಅದ್ಭುತವಾಗಿ ಅಭಿನಯಿಸಿ ನಾಟಕವನ್ನು ಗೆಲ್ಲಿಸುತ್ತಾರೆ. ಉಳಿದವರೂ ಅವರಿಗೆ ಸಾಥ್ ನೀಡುತ್ತಾರೆ. ರಂಗ ಪರಿಕರಗಳು ನಾಟಕಕ್ಕೆ ಪೂರಕವಾಗಿದ್ದು, ಯಾವುದೂ ಅತಿ ಎನ್ನಿಸುವುದಿಲ್ಲ. ಆಸಿಫ್ ಕ್ಷತ್ರಿಯ ಅವರ ಹಾಡುಗಳು ಚೆನ್ನಾಗಿವೆ. ಮುಖ್ಯವಾಗಿ ಆಸಿಫ್ ಕ್ಷತ್ರಿಯ ಹಾಗೂ ಶ್ವೇತಾ ಶ್ರೀನಿವಾಸ್ ಅವರು ಜಂಟಿಯಾಗಿ ನಿರ್ದೇಶಿಸಿದ ಈ ನಾಟಕ ಎಲ್ಲೂ ಬೋರಾಗುವುದಿಲ್ಲ.

ಅಂದ ಹಾಗೆ ಅವರ ರಂಗರಥ ತಂಡಕ್ಕೆ ಐದು ವರ್ಷಗಳು ತುಂಬಿದವು. ಇದುವರೆಗೆ 18 ನಾಟಕಗಳು, 125 ಪ್ರದರ್ಶನಗಳು ಮತ್ತು ಮೂವತ್ತು ಸಾವಿರ ಪ್ರೇಕ್ಷಕರನ್ನು ತಲುಪಿದ ಸಾರ್ಥಕತೆ ಈ ತಂಡದ್ದು. ಇದರ ಪ್ರಯುಕ್ತ ಜನವರಿ 25ರಂದು ಸಂಜೆ ಐದೂವರೆಗೆ ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದ ಸಭಾಂಗಣದಲ್ಲಿ ರಂಗ ಸಂಕ್ರಾಂತಿ ಕಾರ್ಯಕ್ರಮವನ್ನು ತಂಡ ಹಮ್ಮಿಕೊಂಡಿದೆ. ಕಾರ್ಯಕ್ರಮದ ನಂತರ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶಿಸಲಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X