Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಮಹಾತ್ಮಾ ಗಾಂಧಿಯೊಂದಿಗೆ ಮುಖಾಮುಖಿ

ಮಹಾತ್ಮಾ ಗಾಂಧಿಯೊಂದಿಗೆ ಮುಖಾಮುಖಿ

ಗಣೇಶ ಅಮೀನಗಡಗಣೇಶ ಅಮೀನಗಡ21 Aug 2026 10:21 AM IST
share
ಮಹಾತ್ಮಾ ಗಾಂಧಿಯೊಂದಿಗೆ ಮುಖಾಮುಖಿ

‘ಸ್ವಾತಂತ್ರ್ಯದ ಓಟ’ ನಂತರ ಶಿವಮೊಗ್ಗ ರಂಗಾಯಣವು ಈಗ ತಿರುಗಾಟ ಆರಂಭಿಸಿದ್ದು ‘ನಮ್ಮೊಳಗೊಬ್ಬ ಗಾಂಧಿ’ ನಾಟಕದ ಮೂಲಕ. ಈ ಎರಡೂ ನಾಟಕಗಳಿಗೆ ಅಂತರ್ಪಠ್ಯ ಸಂಬಂಧವಿದೆ. ಎರಡೂ ನಾಟಕಗಳಲ್ಲಿ ಮಹಾತ್ಮಾ ಗಾಂಧಿ ಪ್ರಸ್ತಾಪವಿದೆ. ಆದರೆ ಈ ಎರಡೂ ನಾಟಕಗಳಲ್ಲಿ ಮಹಾತ್ಮಾ ಗಾಂಧಿಯ ಪಾತ್ರ ಪ್ರವೇಶವಿಲ್ಲ ಎನ್ನುವುದು ಮುಖ್ಯ.

ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ವಿಚಾರಧಾರೆಗಳನ್ನು ಮುಕ್ಕಾಗಿಸುವ ಅಂದರೆ ಭಗ್ನಗೊಳಿಸುವ ಚಟುವಟಿಕೆಗಳು ಹೆಚ್ಚುತ್ತಿವೆ. ಹೀಗಿರುವಾಗ ಅವರ ವಿಚಾರಧಾರೆಗಳನ್ನು ಮತ್ತೆ ಮತ್ತೆ ಮನಗಾಣಿಸುವ ಪ್ರಯತ್ನ ನಿರಂತರವಾಗಿ ಇರಬೇಕು ಎನ್ನುವ ತುಡಿತದ ನಾಟಕವಿದು. ಗ್ರಾಮವೊಂದು ಅಜ್ಜನ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಗೆ ಧ್ವನಿಯಾಗುವ, ಹೋರಾಡುವ ಮೂಲಕ ಸಕ್ರಿಯವಾಗುವುದನ್ನು ಈ ನಾಟಕ ಅನಾವರಣಗೊಳಿಸುತ್ತದೆ.

ಮುಖ್ಯವಾಗಿ ಈ ನಾಟಕದಲ್ಲಿ ಬಸವಣ್ಣನವರ ವಚನಗಳ ಜೊತೆಗೆ ಕಬೀರರ ದೋಹೆ, ಜ್ಯೋತಿ ಝಾ ಅವರ ಕವಿತೆಯನ್ನು ಮಂಜುಳಾ ಕಿರುಗಾವಲು ಅವರು ಅನುವಾದಿಸಿದ್ದು, ಪುತಿನ, ಅರಬ್ ಕವಿ ಮಿಕೆಲ್ ನೋಯ್ಮಾ, ಸುರಭಿ ರೇಣುಕಾಂಬೆ ಅವರ ಕವಿತೆಗಳನ್ನು ರಾಘವ ಕಮ್ಮಾರ ಅವರು ಸೊಗಸಾಗಿ ಹಾಡಿ ನಾಟಕಕ್ಕೆ ಮೆರುಗು ನೀಡಿದ್ದಾರೆ.

ನಾಟಕ ಶುರುವಾಗುವುದೇ ಅಜ್ಜ ಮತ್ತು ಮೊಮ್ಮಗನ ಮಾತುಕತೆಯಿಂದ. ಅದು ಚರಕವನ್ನು ಅಜ್ಜ ಜೋಡಿಸುವ ಮೂಲಕ. ಆಗ ಮೊಮ್ಮಗ ಬಂದು ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಹಾಡುತ್ತ ಬರುವ ಮೊಮ್ಮಗನಿಗೆ ‘‘ಈ ಚರಕ ಕೇವಲ ನೂಲು ತೆಗೆಯೋ ಯಂತ್ರವಲ್ಲ. ಇದು ಸ್ವಾತಂತ್ರ್ಯದ ಗುರುತು. ನಮ್ಮ ದುಡಿಮೆಯ ಸ್ವಾವಲಂಬಿ ಬದುಕು’’ ಎನ್ನುವಾಗ ‘‘ವಿದೇಶಿ ವಸ್ತ್ರ ಬಿಡಿ’’, ‘‘ಖಾದಿ ವಸ್ತ್ರ ತೊಡಿ, ಗಿರಣಿ ಬಿಡಿ ಚರಕ ಹಿಡಿ’’, ‘‘ಹತ್ತಿ ನೂಲು ಖಾದಿ ಇದೇ ಚಳವಳಿಯ ಹಾದಿ’’ ಎನ್ನುವ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಬಂದಾಗ ಅಜ್ಜ ಖುಷಿಯಾಗುತ್ತಾನೆ. ಅಲ್ಲದೆ ‘‘ವಿದೇಶಿ ವಸ್ತುಗಳ ಬಹಿಷ್ಕಾರ ಈ ಅಸಹಕಾರ ಚಳವಳಿಯ ಮುಖ್ಯ ಕಾರ್ಯಕ್ರಮ. ಭಾರತದ ಬಡ ಕಸುಬುದಾರರಿಂದ ಕೆಲಸ ಮತ್ತು ಜೀವನೋಪಾಯವನ್ನು ಕಸಿದುಕೊಳ್ಳಲು ಕಾರಣವಾಗಿದ್ದ ಈ ವಿದೇಶಿ ಬಟ್ಟೆಯ ಬಹಿಷ್ಕಾರ ಬಾಪುವಿನ ಕಾಳಜಿಯ ಕಾರ್ಯಕ್ರಮ. ಬಾಂಬೆಯಲ್ಲಿ ತಿಲಕರ ಪುಣ್ಯತಿಥಿಯ ಮುನ್ನಾದಿನ ನಡೆದ ಬೃಹತ್ ಸಭೆಯ ಮುಂದೆ ವಿದೇಶಿ ವಸ್ತ್ರಗಳ ರಾಶಿಗೆ ಬೆಂಕಿ ಇಡುವ ಕಾರ್ಯಕ್ರಮಕ್ಕೆ ಬಾಪು ಚಾಲನೆ ನೀಡಿದರು. ಈ ಚಳವಳಿಯಿಂದ ಉತ್ತೇಜಿತರಾಗಿ ಹಲವು ಊರುಗಳ ದೇಶಭಕ್ತರು ತಮ್ಮ ಊರುಗಳಲ್ಲೂ ವಿದೇಶಿ ವಸ್ತ್ರಗಳಿಗೆ ಬೆಂಕಿಯಿಡುವ ಕಾರ್ಯಕ್ರಮ ಆರಂಭಿಸಿದ್ದಾರೆ’’ ಎನ್ನುತ್ತಾನೆ.

ಆಗ ಅವರ ಮಗ ಸದಾಶಿವ ಬಂದು ಬೂಟಿಗೆ ಹಾರ ಹಾಕಿ ಪೂಜೆ ಮಾಡುವುದನ್ನು ಕಂಡ ಅವರ ಹೆಂಡತಿ ಸುಶೀಲಾ ಕೇಳಿದಾಗ ‘‘ನನ್ನ ಕಕ್ಷಿದಾರ ಸುಳ್ಳು ವಾದ ಮಾಡುವಂತೆ ಒತ್ತಾಯಿಸಿದ. ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಅದಕ್ಕೆ ಸುಳ್ಳಿಗೆ ವಿರುದ್ಧವಾಗಿ ಸತ್ಯವನ್ನೇ ಎತ್ತಿ ಹಿಡಿದೆ. ಆಗ ಸುಳ್ಳುಕೇಸು ಬಿದ್ದೋಯ್ತು. ಆಗ ಅವಮಾನಗೊಂಡ ಕಕ್ಷಿದಾರ ನನ್ನ ಮೇಲೆ ಬೂಟು ಎಸೆದ. ಇದನ್ನು ತಗೊಂಡು ಮನೆಗೆ ಬಂದೆ’’ ಎನ್ನುತ್ತಾರೆ. ಅಜ್ಜ ‘‘ಬೂಟಿನಿಂದ ಹೊಡೆಸಿಕೊಂಡೋನಿಗಿಂತ ಹೊಡೆದೋನಿಗೇ ಅದು ಅವಮಾನ’’ ಎನ್ನುವನು.

ನಂತರದ ದೃಶ್ಯ ವಿದೇಶಿ ವಸ್ತ್ರದಹನ. ರಹೀಮ್ ಮತ್ತು ರಮಾ ಅವರು ವಿದೇಶಿವಸ್ತ್ರಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ರಹೀಮ್ ‘‘ನನ್ನ ಹೃದಯದ ಬಾಗಿಲಲ್ಲಿ ಬರೆದಿದ್ದೆ ಪ್ರವೇಶ ನಿಷಿದ್ಧ ಎಂದು. ಪ್ರೀತಿ ನಗುತ್ತ ಹೇಳಿತು ಕ್ಷಮಿಸಿ ನಾನು ಕುರುಡಿ ಎಂದು’’ ಎಂದಾಗ ರಮಾ ‘‘ಜಗತ್ತು ನಮ್ಮ ಪ್ರೀತಿಯನ್ನು ಒಪ್ಪಲಿ, ಒಪ್ಪದಿರಲಿ ಪ್ರೀತಿ ಮಾಡುವ ನಾವಿಬ್ಬರೂ ಒಪ್ಪಿದರೆ ಸಾಕಲ್ಲವೆ?’’ ಎಂದು ಕೇಳುತ್ತಾಳೆ. ಬಳಿಕ ಕರ ನಿರಾಕರಣೆ ದೃಶ್ಯ. ಇದರಲ್ಲಿ ರಮಾ ‘‘ನೀರಿನ ಮೇಲೆ ತೆರಿಗೆ, ಉಸಿರಾಡೋ ಗಾಳಿ ಮೇಲೆ ತೆರಿಗೆ. ಕೊನೆಗೆ ನಮ್ಮ ಕಣ್ಣೀರ ಮೇಲೂ ತೆರಿಗೆ’ ಎಂದು ಹರಿಹಾಯುತ್ತಾಳೆ. ಆಗ ಮೂಕಮ್ಮ ‘‘ಕುಂತರೂ ಸುಂಕ, ನಿಂತರೂ ಸುಂಕ. ಬದುಕೋದಾದರೂ ಹೇಗೆ? ಸುಂಕ ಕಟ್ಟಿ ಸಾಯೋದಕ್ಕಿಂತ ಹಾಗೆ ಸಾಯೋದೆ ಒಳ್ಳೇದು’’ ಎಂದು ನಿಟ್ಟುಸಿರುಬಿಡುತ್ತಾಳೆ. ಇದಕ್ಕೆ ಪೂರಕವಾಗಿ ಅಜ್ಜ ‘‘ಈ ಕರ ನಿರಾಕರಣೆ ಗಾಂಧೀಜಿ ಕೊಟ್ಟ ಕರೆ. ನಾವು ಕರ ಕೊಡಲ್ಲ’’ ಎಂದು ಹಟ ಹಿಡಿಯುತ್ತಾರೆ. ಆಗ ಶಾನುಭಾಗ ಕೊಡಬೇಕೆಂದು ಒತ್ತಾಯಿಸುವಾಗ ಶೆಟ್ಟಿ ಬಂದು ಎಲ್ಲ ವಸ್ತುಗಳನ್ನು ಹರಾಜಿನಲ್ಲಿ ಕೊಳ್ಳುತ್ತಾನೆ. ಇದನ್ನು ವಿರೋಧಿಸುವ ಮೂಕಮ್ಮನಿಗೆ ಬೈಯ್ಯುತ್ತಾನೆ ಕೂಡಾ. ಆಗ ಮೂಕಮ್ಮ ಕೈ ಎತ್ತಿ ಹೊಡೆಯಲು ಹೋದಾಗ ಅಜ್ಜ ‘‘ನಮ್ಮ ಹೋರಾಟ ಅಹಿಂಸೆಯಿಂದ ಕೂಡಿರಬೇಕು. ಇಲ್ಲಿ ಹಿಂಸೆಗೆ ಅವಕಾಶ ಇಲ್ಲ. ನಾವು ನಮ್ಮ ವಿರೋಧಿಗಳನ್ನು ದ್ವೇಷಿಸಬಾರದು. ದ್ವೇಷದಿಂದ ಹಿಂಸೆ ಹುಟ್ತದೆ, ಪ್ರೀತಿಯಿಂದ ಶಾಂತಿ. ನಾವು ಪ್ರೀತಿಯಿಂದ ನೋಡಬೇಕು. ಬಾಪು ತಮ್ಮ ಕಡು ವಿರೋಧಿಗಳಲ್ಲೂ ಪ್ರೀತಿ, ಸಹನೆ ಇಟ್ಟುಕೊಂಡಿದ್ರು’’ ಎಂದು ತಿಳಿವಳಿಕೆ ಹೇಳುತ್ತಾನೆ. ಕೊನೆಗೆ ಮೂಕಮ್ಮಳೇ ಶೆಟ್ಟಿಯ ಮನಪರಿವರ್ತಿಸಿದಾಗ ಹರಾಜಿನ ಎಲ್ಲ ವಸ್ತುಗಳನ್ನು ವಾಪಸ್ ಕೊಡುತ್ತಾನೆ.

ಈ ನಾಟಕದಲ್ಲಿ ಅಪರೂಪದ ದೃಶ್ಯವಿದೆ. ಅಜ್ಜ ಸೀರೆಯುಟ್ಟ ಬರುವುದು. ಆಗ ಮೊಮ್ಮಗ ಕೇಳಿದಾಗ ಅಜ್ಜ ‘‘ನಮ್ಮೊಳಗಿನ ಹೆಣ್ತನಕ್ಕೆ ಮುಖಾಮುಖಿ ಆದರೇನೆ ಹೆಣ್ಣಿನ ನೋವು, ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಹುದು. ಬಾಪು ತಮ್ಮ ಮೇಲೆ ತಾವು ಈ ಪ್ರಯೋಗ ಮಾಡಿಕೊಂಡರು. ಪರರ ಜೊತೆಗಿನ ಸಂಘರ್ಷಕ್ಕಿಂತ ತನ್ನಂತರಂಗದ ಹೋರಾಟ ಉತ್ತಮ ಅಂತ ನಂಬಿದ್ದರು. ಈ ಭುವಿಗಿರೋ ತಾಯ್ತನ, ಸಹನೆಯನ್ನು ತಮ್ಮೊಳಗೆಯೇ ಶೋಧಿಸಿದರು. ಬ್ರಹ್ಮಚರ್ಯೆ ಸ್ವೀಕರಿಸಿದ ಮೇಲೆ ತಮ್ಮ ಪತ್ನಿ ಕಸ್ತೂರ್ಬಾ ಅವರನ್ನೇ ತಾಯಿಯ ಸ್ಥಾನದಲ್ಲಿಟ್ಟು ನೋಡಿದರು’’ ಎನ್ನುವ ಮಾತುಗಳು ಗಮನ ಸೆಳೆಯುತ್ತವೆ. ನಂತರ ಮೊಮ್ಮಗ ‘‘ಸೀರೆ ಉಟ್ಟವರೆಲ್ಲ ಗಾಂಧಿ ಆಗಿಬಿಡತಾರಾ?’’ ಎಂದು ಕೇಳಿದಾಗ ‘‘ಗಾಂಧಿ ಆಗೋದು ಕಷ್ಟ. ಅದೊಂದು ಜೀವನಶೈಲಿ, ವ್ರತ’’ ಎಂದು ತಿಳಿವಳಿಕೆ ಹೇಳುತ್ತಾರೆ.

ನಂತರ ದೊಡ್ಡಾಟದ ಶೈಲಿಯಲ್ಲಿ ಹರಿಶ್ಚಂದ್ರ ನಾಟಕವನ್ನು ಮಕ್ಕಳು ಪ್ರದರ್ಶಿಸುವ ದೃಶ್ಯ. ಇದರಲ್ಲಿ ಹರಿಶ್ಚಂದ್ರ ಗಾಂಧಿ ಹಾಗೂ ಈಸ್ಟ್ ಇಂಡಿಯಾ ಕಂಪೆನಿಯ ನಕ್ಷತ್ರಿಕ ಅವರ ಮುಖಾಮುಖಿಯಿದೆ. ಬಳಿಕ ಉಪ್ಪಿನ ಸತ್ಯಾಗ್ರಹದ ನಂತರ ಕೌದಿ ಹೊಲಿಯುತ್ತಿದ್ದ ಮೂಕಮ್ಮಳ ಮನೆಗೆ ಬರುವ ಶೆಟ್ಟಿ ಚಿನ್ನಾಭರಣಗಳನ್ನು ಕೊಟ್ಟು ಒಲಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಮೂಕಮ್ಮಳ ಗಂಡ ಬಂದಾಗ ಮೂಕಮ್ಮ ಮತ್ತು ಶೆಟ್ಟಿ ಕಂಗಾಲಾಗುತ್ತಾರೆ. ಆಗ ಅವಸರದಲ್ಲಿ ತಾನು ಕೊಟ್ಟ ಚಿನ್ನಾಭರಣಗಳನ್ನು ಜೊತೆಗೆ ಆಸ್ತಿಯ ಪತ್ರವನ್ನು ಶೆಟ್ಟಿ ಬಿಟ್ಟುಹೋಗುತ್ತಾನೆ. ನಂತರ ಬಾಪು ತಮ್ಮ ಹಳ್ಳಿಗೆ ಬರುವ ಸುದ್ದಿ ಕೇಳಿ ಮೂಕಮ್ಮ ಎಲ್ಲ ಚಿನ್ನಾಭರಣಗಳ ಜೊತೆಗೆ ಕೌದಿಯನ್ನೂ ಕೊಡುತ್ತಾಳೆ ಎನ್ನುವುದು ಗಮನಿಸಬೇಕು. ಹೀಗೆಯೇ ಅಸ್ಪಶ್ಯತೆ ಕುರಿತು, ಕ್ವಿಟ್ ಇಂಡಿಯಾ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಕೊನೆಗೆ ಬಾಪು ತಮ್ಮ ಊರಿಗೆ ಬರುತ್ತಾರೆಂದು ಊರು ಸಜ್ಜುಗೊಳಿಸಲು ಅಜ್ಜ ಹೇಳುತ್ತಾನೆ. ತಳಿರುತೋರಣ ಕಟ್ಟಿ, ಧ್ವಜಗಳನ್ನು ನೆಟ್ಟು, ಪ್ರತಿಯೊಬ್ಬರೂ ಗಾಂಧಿ ಕೊಡಲು ಉಡುಗೊರೆಗಳನ್ನು ತಂದು ಅಜ್ಜನಿಗೆ ಕೊಡುತ್ತಾರೆ. ಆದರೆ ಗಾಂಧಿ ಬರುತ್ತಾರೆಯೇ ಎನ್ನುವುದಕ್ಕೆ ನೀವು ನಾಟಕ ನೋಡಬೇಕು.

ಪುಟ್ಟ ಗ್ರಾಮದಲ್ಲೂ ಗಾಂಧಿಯೊಂದಿಗಿನ ಅನುಸಂಧಾನ ನಡೆಯುತ್ತದೆ ಎನ್ನುವುದನ್ನು ಸಾಬೀತುಪಡಿಸುವ ನಾಟಕ. ಗಾಂಧಿಯ ತತ್ವಗಳನ್ನು ಪಾಲಿಸುತ್ತ ಬದುಕುವ ಅಜ್ಜನಂಥವರು ಪ್ರತೀ ಊರಲ್ಲೂ ಸಿಗುತ್ತಾರೆಂದೂ ಸಾಬೀತು ಮಾಡಿದ ನಾಟಕವಿದು. ಅಜ್ಜನ ಪಾತ್ರದಲ್ಲಿ ಸಯ್ಯದ್ ಅಲಿ, ಶೆಟ್ಟಿ ಪಾತ್ರದಲ್ಲಿ ದರ್ಶನ್ ಭದ್ರಾವತಿ, ಮೂಕಮ್ಮಳ ಪಾತ್ರಧಾರಿಯಾಗಿ ಪೂಜಾ ಗಜಾಕೋಶ, ರಹೀಮನಾಗಿ ಬಸವರಾಜ್ ಹುಲ್ಲಳ್ಳಿ, ಶಾನುಭೋಗನಾಗಿ ಶ್ರೀಕಾಂತ ಜಾಕನಪಲ್ಲಿ, ಮೊಮ್ಮಗನಾಗಿ ಹಾಗೂ ಹರಿಶ್ಚಂದ್ರನಾಗಿ ಭೀಮೇಶ ಸಿಂಧನೂರು, ಸುಶೀಲಾ ಪಾತ್ರದಲ್ಲಿ ಪವಿತ್ರಾ, ರಮಾಳಾಗಿ ಅನುಷಾ, ಸದಾಶಿವನಾಗಿ ಸಚಿನ್, ಕ್ಷೌರಿಕನಾಗಿ ಧೀರಜ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸರಳ ರಂಗಸಜ್ಜಿಕೆಯ ಜೊತೆಗೆ ಚೌಗಲೆ ಅವರ ಸಂಭಾಷಣೆಗಳು ಮನ ಮುಟ್ಟುತ್ತವೆ. ಮುಖ್ಯವಾಗಿ ದಣಿವು ಅರಿಯದ ಎಂಭತ್ತರ ಹರೆಯದ ಚಿದಂಬರರಾವ್ ಜಂಬೆ ಅವರು ಈ ನಾಟಕವನ್ನು ಎಲ್ಲೂ ಬೇಸರಾಗದ ಹಾಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮತ್ತು ಇಂಥ ನಾಟಕ ಕೊಟ್ಟ ಶಿವಮೊಗ್ಗ ರಂಗಾಯಣಕ್ಕೂ ಶರಣು.

Tags

Mahatma Gandhi
share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X