Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಸಮತೆಯೆಡೆಗೆ ನಡಿಗೆ ಸಾಗಿದ ‘ಕೂ ಹೂ’,...

ಸಮತೆಯೆಡೆಗೆ ನಡಿಗೆ ಸಾಗಿದ ‘ಕೂ ಹೂ’, ‘ಬೆಲ್ಲದ ದೋಣಿ’

ವಾರ್ತಾಭಾರತಿವಾರ್ತಾಭಾರತಿ16 Jan 2026 12:10 PM IST
share
ಸಮತೆಯೆಡೆಗೆ ನಡಿಗೆ ಸಾಗಿದ ‘ಕೂ ಹೂ’, ‘ಬೆಲ್ಲದ ದೋಣಿ’

ಈ ಬಾರಿ ಜನವರಿ 12ರಿಂದ 18ರ ವರೆಗೆ ನಡೆಯುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ. 2001ರಲ್ಲಿ ಪ್ರಸನ್ನ ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದಾಗ ‘ಅಕ್ಕ’ ಎಂಬ ರಾಷ್ಟ್ರೀಯ ನಾಟಕೋತ್ಸವ ಆರಂಭಿಸಿದರು. ನಂತರ ಅದು ‘ಬಹುರೂಪಿ’ ಎಂದಾಯಿತು. ಈ ಬಾರಿ ಬಹುರೂಪಿ ಬಾಬಾಸಾಹೇಬ್ ಎನ್ನುವ ಹೆಸರಿಟ್ಟು ‘ಸಮತೆಯೆಡೆಗೆ ನಡಿಗೆ...’ ಎನ್ನುವ ಆಶಯದೊಂದಿಗೆ ನಿರ್ದೇಶಕ ಸತೀಶ್ ತಿಪಟೂರು ರೂಪಿಸಿದ್ದಾರೆ.

‘‘ರಂಗಕಲಾವಿದರಾಗಿ ಖುಷಿ ಅನ್ನಿಸ್ತಿದೆ. ರಾಷ್ಟ್ರಮಟ್ಟದ ಕಲಾವಿದರ ಅಭಿನಯ ನೋಡುವ ಅವಕಾಶ, ರಂಗಕರ್ಮಿಗಳನ್ನು ಹತ್ತಿರದಿಂದ ನೋಡುವ ಸದವಕಾಶ. ಇದಕ್ಕಾಗಿ ಎಷ್ಟು ಖರ್ಚು ಮಾಡಿದೆವು ಎಂಬುದು ಮುಖ್ಯವಲ್ಲ. ಅನುಭವಕ್ಕೆ ಬೆಲೆ ಕಟ್ಟಲಾಗದು’’ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಎಂ.ಪಿ.ಪ್ರಕಾಶ್ ಅವರು ಕಟ್ಟಿ ಬೆಳೆಸಿದ ರಂಗಭಾರತಿ ತಂಡದ ಕಲಾವಿದರೂ ಕೃಷಿಕರೂ ಆದ ಮಂಜುನಾಥ್ ಪಾಟೀಲ ಹೆಮ್ಮೆಯಿಂದ ಹೇಳಿದರು.

‘‘ಕಳೆದ ಎಂಟ್ಹತ್ತು ವರ್ಷಗಳಿಂದ ಪ್ರತಿ ವರ್ಷ ಮೈಸೂರು ರಂಗಾಯಣಕ್ಕೆ ಬರುವುದೇ ನಮಗೆ ಸಂಕ್ರಾಂತಿ. ಬಹುರೂಪಿಗೆ ಬರುವುದನ್ನು ತಪ್ಪಿಸುವುದಿಲ್ಲ. ನನ್ನೊಂದಿಗೆ ಗೆಳೆಯರಾದ ಹೂವಿನಹಡಗಲಿಯಲ್ಲಿ ಮಣಿಕಂಠ ಹೋಟೆಲ್ ನಡೆಸುವ ಜಯಣ್ಣ ಕೋಡಿಹಳ್ಳಿ, ಕೃಷಿಕರಾದ ಚೈತನ್ಯ ರೆಡ್ಡಿ ಹಾಗೂ ಸತೀಶ್ ಮೋರಗೇರಿ ಬಂದೆವು’’ ಎಂದು ಖುಷಿಯಾಗಿ ಹೇಳಿದರು.

‘‘ಹೊಸ ಹೊಸ ವಿಷಯಗಳ ಆಧರಿಸಿ ರೂಪಿಸುವ ಬಹುರೂಪಿಗೆ ಬರಲು ಬಲು ಹುರುಪು. ಇಲ್ಲಿಗೆ ಬರುವುದೇ ಹಬ್ಬ. ನಾನು ಕಲಾವಿದನಲ್ಲ. ಆದರೆ ರಂಗಾಸಕ್ತಿ ಇರುವುದರಿಂದ ಪ್ರತೀ ವರ್ಷ ಬಂದು ವಾರಗಟ್ಟಲೆ ಉಳಿದು ನಾಟಕಗಳನ್ನು ನೋಡುತ್ತೇವೆ’’ ಎನ್ನುವ ಸಂತಸ ರೈತರಾದ ಚೈತನ್ಯ ರೆಡ್ಡಿ ಅವರದು. ಅವರ ಹಾಗೆ ಬೇರೆ ಬೇರೆ ಊರುಗಳಿಂದ ಬರುವ ರಂಗಾಸಕ್ತರು, ರಂಗಕರ್ಮಿಗಳು ಮೈಸೂರಿನ ರಂಗಾಯಣದಲ್ಲಿ ಸೇರುತ್ತಾರೆ. ಈ ಬಾರಿ ಜನವರಿ 12ರಿಂದ 18ರ ವರೆಗೆ ನಡೆಯುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ. 2001ರಲ್ಲಿ ಪ್ರಸನ್ನ ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದಾಗ ‘ಅಕ್ಕ’ ಎಂಬ ರಾಷ್ಟ್ರೀಯ ನಾಟಕೋತ್ಸವ ಆರಂಭಿಸಿದರು. ನಂತರ ಅದು ‘ಬಹುರೂಪಿ’ ಎಂದಾಯಿತು. ಈ ಬಾರಿ ಬಹುರೂಪಿ ಬಾಬಾಸಾಹೇಬ್ ಎನ್ನುವ ಹೆಸರಿಟ್ಟು ‘ಸಮತೆಯೆಡೆಗೆ ನಡಿಗೆ...’ ಎನ್ನುವ ಆಶಯದೊಂದಿಗೆ ನಿರ್ದೇಶಕ ಸತೀಶ್ ತಿಪಟೂರು ರೂಪಿಸಿದ್ದಾರೆ. ವಿವಿಧ ನಾಟಕಗಳ ಜೊತೆಗೆ ಸಾಕ್ಷ್ಯಚಿತ್ರ, ಸಿನೆಮಾ, ವಿಚಾರಸಂಕಿರಣ, ಚಿತ್ರಕಲಾ ಪ್ರದರ್ಶನ, ಅಂಬೇಡ್ಕರ್ ಕುರಿತ ಹಳೆಯ ನಾಣ್ಯಗಳ ಪ್ರದರ್ಶನ... ಹೀಗೆ ಬಾಬಾಸಾಹೇಬರ ಮೂಲಕ ಅಂಬೇಡ್ಕರ್ ಆಶಯಗಳನ್ನು ತಿಳಿಸುವ, ಮನಗಾಣಿಸುವ ಈ ನಾಟಕೋತ್ಸವ ಸಾರ್ಥಕತೆ ಪಡೆಯುತ್ತಿದೆ.

ಇದರಂಗವಾಗಿ ಜನವರಿ 13ರಂದು ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡವು ‘ಕೂ ಹೂ’ ಮಲಯಾಳಂ ನಾಟಕ ಪ್ರದರ್ಶಿಸಿತು. ಇದರ ರಚನೆ ಮತ್ತು ನಿರ್ದೇಶನ ಅರುಣ್ ಲಾಲ್. ರೈಲಿನ ಕುರಿತ ಈ ನಾಟಕವು ಒಂದೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟಿತು. ನಾಟಕದ ಪರಿಕರವಾಗಿ ಬಳಸಿದ ಟ್ರಂಕುಗಳು ಸಂಗೀತದ ಉಪಕರಣಗಳಾಗಿ, ರೈಲು ಡಬ್ಬಿಗಳಾಗಿ, ರೈಲಿನ ಕಿಟಕಿಗಳಾಗಿ, ಬ್ಯಾಗುಗಳಾಗಿ, ರೈಲು ನಿಲ್ದಾಣಗಳಾಗಿ, ಪಾತ್ರಗಳಾಗಿ ಹೀಗೆ ರೈಲಿನ ಪಯಣವನ್ನು ಕಟ್ಟಿಕೊಟ್ಟ ಈ ನಾಟಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಾಟಕದ ಆರಂಭದಲ್ಲಿ ರೈಲು ಹತ್ತುವುದನ್ನು ತಪ್ಪಿಸಿಕೊಳ್ಳುವ, ಹಾಗೆ ತಪ್ಪಿಸಿಕೊಂಡ ಪ್ರಯಾಣಿಕನಿಗೆ ನೀರು ಕೊಡುವ, ಚಹಾ ಕೊಡುವ ರೈಲ್ವೆ ಸಿಬ್ಬಂದಿ ನಂತರ ಹಣ ವಸೂಲಿ ಮಾಡುವ... ಹೀಗೆ ಆಕರ್ಷಿಸುವ ಈ ನಾಟಕವು ನಂತರ ಗಂಭೀರ ಸ್ವರೂಪ ಪಡೆಯುತ್ತದೆ. ಎರಡನೇ ಮಹಾಯುದ್ಧದಲ್ಲಿ ಮಡಿದ ಸೈನಿಕರು, ಸ್ವಾತಂತ್ರ್ಯ ಚಳವಳಿ, ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಥಮದರ್ಜೆ ಬೋಗಿಯಲ್ಲಿ ಟಿಕೆಟಿನೊಂದಿಗೆ ಪ್ರಯಾಣ ಕೈಗೊಂಡಿದ್ದಕ್ಕೆ ಬ್ರಿಟಿಷರಿಂದ ಅವಮಾನಿಸಿಕೊಳ್ಳುವ ಮಹಾತ್ಮಾ ಗಾಂಧಿ ನಂತರ ಮೂರನೆಯ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸಿದ್ದು, ನಂತರ ತಮ್ಮ ಬದುಕಿನುದ್ದಕ್ಕೂ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ‘ಗಾಂಧಿಕ್ಲಾಸ್’ ಎಂದು ಜನಪ್ರಿಯಗೊಂಡಿದ್ದನ್ನು ಹೆಚ್ಚು ಮಾತಿಲ್ಲದೆ ಪರಿಣಾಮಕಾರಿಯಾಗಿ ತಿಳಿಸುವ ದೃಶ್ಯ ಸೆರೆಹಿಡಿಯುತ್ತದೆ. ಟ್ರಂಕಿನೊಳಗೆ ನೂಲುವ ಚರಕ, ಗಾಂಧಿ ಪಾದರಕ್ಷೆಗಳನ್ನು ಅಲ್ಲದೆ ಕನ್ನಡಕ ತೋರಿಸುವುದು ಕೂಡಾ ಗಮನಸೆಳೆಯುತ್ತದೆ. ಚಾಂದಿನಿ, ಬೆಗುಂಕೊದೂರ, ಧೀಮಾಪುರ, ಪೊಡನೂರು, ಗೋಧ್ರಾ, ಕಕೊರಿ, ಲಾಹೋರ್ ರೈಲುನಿಲ್ದಾಣಗಳಲ್ಲಿ ನಡೆದ ಘಟನೆಗಳು ತೋರಿಸುವ ದೃಶ್ಯಗಳು ಮನಮುಟ್ಟುತ್ತವೆ. ಅದರಲ್ಲೂ ಪಶ್ಚಿಮ ಬಂಗಾಳದ ಬೆಗುಂಕೊದೂರ ರೈಲುನಿಲ್ದಾಣದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟ ಮಹಿಳೆಯಿಂದಾಗಿ 42 ವರ್ಷಗಳಿಂದ ಅದನ್ನು ಮುಚ್ಚಿರುವ ದೃಶ್ಯವಲ್ಲದೆ, ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಸಿನೆಮಾದ ದೃಶ್ಯದೊಂದಿಗೆ ಈ ನಾಟಕದ ಕಲಾವಿದರೂ ಅಭಿನಯಿಸಿದರು. ಹೀಗೆಯೇ ರೈಲಿನಲ್ಲಿ ಶೋಷಣೆಗೆ ಒಳಗಾಗುವ, ಅವಮಾನಿತರಾದರೂ ರೈಲು ಸಮಾನತೆ ಮತ್ತು ಶಾಂತಿಯನ್ನು ಬಯಸುವ, ಕಾಪಾಡುವ ಜಾಗವೆಂದು ಕಲಾವಿದರು ಹೇಳುವ ಸಂಭಾಷಣೆ ಮುಖ್ಯವಾಗುತ್ತದೆ. ಬೆಳಕು, ಕಲಾವಿದರ ನೃತ್ಯ, ಸಂಗೀತ ಪೂರಕವಾಗಿ ನಾಟಕವನ್ನು ಯಶಸ್ವಿಗೊಳಿಸುತ್ತವೆ.

ಈ ನಾಟಕೋತ್ಸವದಲ್ಲಿ ಜನವರಿ 14ರಂದು ಪ್ರದರ್ಶನಗೊಂಡ ಇನ್ನೊಂದು ಮಹತ್ವದ ನಾಟಕ ‘ಬೆಲ್ಲದ ದೋಣಿ’. ಇದು ಹನೂರು ಚನ್ನಪ್ಪ ರಚನೆ. ರೂಬಿನ್ ಸಂಜಯ್ ಅವರ ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕಕ್ಕೆ ಸಂಗೀತ ದೇವಾನಂದ ವರಪ್ರಸಾದ್ ಹಾಗೂ ಸಿದ್ದೇಶ್ ಬದನವಾಳು. ಈ ಸಿದ್ದೇಶ್ ಅವರು ಸಂಗೀತ ನೀಡುವುದರ ಜೊತೆಗೆ ಪಾತ್ರವಾಗಿ ಅಭಿನಯಿಸಿದರು. ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ ಅವರ ರಂಗವಾಹಿನಿ ತಂಡದ ಮೂಲಕ ಪ್ರಸ್ತುತಗೊಂಡ ಈ ನಾಟಕದಲ್ಲಿ ರಾಜು ಕೋಟೆಹುಂಡಿ, ಪುಷ್ಪಲತಾ, ಶಿವಾನಿ, ಗೌತಮ್ ಜಿ.ಪಿ, ರಾಜೇಂದ್ರ, ಅನುರಾಧಾ, ಬುದ್ಧಿವಂತ, ಹೇಮಂತ್, ನಂಜುಂಡ, ಶಿವು, ಸಾಗರ್, ಮನು ನಟಿಸಿದರು. ಇವರಲ್ಲಿ ಅಂಕಿ ಪಾತ್ರದ ಪುಷ್ಪಲತಾ ಮಿಂಚಿದರು.

ಇನ್ನು ನಾಟಕ; ಗಾಲೂರಯ್ಯ ಎಂಬ ದಲಿತ ತಾನು ಜೀತಕ್ಕಿದ್ದ ಜಮೀನಿನ ಒಡೆಯನ ಮೂಲಕ ಸ್ವಾಮಿ ಎನ್ನಿಸಿಕೊಳ್ಳಬೇಕೆಂಬ ಹಂಬಲದಿಂದ ಅಯ್ಯಪ್ಪ ಸ್ವಾಮಿಯಾಗುತ್ತಾನೆ. ಆದರೆ ಆತನ ಒಡೆಯ ಸ್ವಾಮಿ ಎನ್ನುವುದಿರಲಿ ಬಾವಿಯಲ್ಲಿ ನೀರೆತ್ತುವ ಮೋಟರ್ ಬಿದ್ದಿದೆ, ಅದನ್ನು ಎತ್ತು ಎಂದು ಬಯ್ಯುತ್ತಾನೆ. ಆಗ ಕಂಗಾಲಾಗುವ ಗಾಲೂರಯ್ಯ ಬಾವಿಗಿಳಿದು ಮೋಟರ್ ಎತ್ತುತ್ತಾನೆ. ಆಗಲೂ ಸ್ವಾಮಿ ಎನ್ನದ ಒಡೆಯನಿಂದ ಬೇಸತ್ತು ಬೋಧಿ ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತು ಕೊಳ್ಳುತ್ತಾನೆ; ಮೌಢ್ಯದ ಮೂಲಕ ಸಮಾನತೆ ಸಾಧಿಸಲಾಗದು, ಅಯ್ಯಪ್ಪ ಸ್ವಾಮಿಯಾದ ಕೂಡಲೇ ಸಮಾನತೆ ಸಿಗದು, ಇದಕ್ಕಾಗಿ ತಾನು ಬದಲಾಗಬೇಕು ಎಂಬ ಅರಿವು ಪಡೆಯುತ್ತಾನೆ.

ದೋಣಿ ದಡ ಮುಟ್ಟಿಸುತ್ತದೆ ಎನ್ನುವ ನಿರೀಕ್ಷೆ ಅವನದು. ಅದು ಬೆಲ್ಲದಷ್ಟು ಸಿಹಿಯಾಗಿರುತ್ತದೆ ಎನ್ನುವ ನಿರೀಕ್ಷೆ ಗಾಲೂರಯ್ಯನದು. ಆದರೆ ಅದು ಚಲನೆ ಶುರು ಮಾಡಿದಾಗ ಬೆಲ್ಲದ ದೋಣಿ ಕರಗಿಹೋಗುತ್ತದೆ ಅಂದರೆ ಅವನ ಆಸೆ ಕರಗಿಹೋಗುತ್ತದೆ ಎನ್ನುವ ಸಂದೇಶವನ್ನು ನಾಟಕ ಸಾರುತ್ತದೆ. ಇದಕ್ಕಾಗಿ ಶಿಕ್ಷಣವೇ ಮದ್ದು. ಶಿಕ್ಷಣದ ಜೊತೆಗೆ ಸಂವಿಧಾನವೂ ಮುಖ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬ ಆಶಯವನ್ನು ಈ ನಾಟಕ ಸಮರ್ಥವಾಗಿ ಬಿಂಬಿಸುತ್ತದೆ.

ನಾಟಕದಲ್ಲಿ ಚಾಮರಾಜನಗರದ ಆಡುಭಾಷೆ ಹಿಡಿದಿಡುತ್ತದೆ. ಮೈಸೂರಿನ ಡಯಟ್ ಉಪನ್ಯಾಸಕರಾದ ಹನೂರು ಚನ್ನಪ್ಪ ಅವರ ಸಶಕ್ತ ಸಂಭಾಷಣೆಯೇ ಇಡೀ ನಾಟಕದ ಜೀವಾಳ. ಇದಕ್ಕೆ ಪೂರಕವಾಗಿ ಗಾಲೂರಯ್ಯನ ಹೆಂಡತಿಯಾಗಿ ಪುಷ್ಪಲತಾ ತಮ್ಮ ಅಭಿನಯ ಹಾಗೂ ಚುರುಕು ಸಂಭಾಷಣೆ ಮೂಲಕ ಇಡೀ ನಾಟಕವನ್ನು ತೂಗಿಸಿಕೊಂಡು ಹೋಗುತ್ತಾರೆ. ಆದರೆ ಕೊಂಚ ನಿಧಾನವಾಗಿ ಅವರು ಮಾತುಗಳನ್ನು ಹೇಳಿದರೆ ಹೆಚ್ಚು ಪರಿಣಾಮಕಾರಿಯಾಗುವುದು. ಅವರ ಅಭಿನಯವನ್ನು ಮೆಚ್ಚಿ ಪ್ರೇಕ್ಷಕರಾದ ಗಡ್ಡವಾಸು ಅವರು ಐದು ಸಾವಿರ ರೂಪಾಯಿ ಕಾಣಿಕೆಯಾಗಿ ನೀಡಿದರೆ, ತಂಡಕ್ಕೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಮೈಸೂರಿನ ಸದ್ಯ ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ಇಂಜಿನಿಯರ್ ವಿನಯ್ ಭಾರದ್ವಾಜ್ ಘೋಷಿಸಿದರು.

Tags

Jaggery BoatKoo Hoo
share
ವಾರ್ತಾಭಾರತಿ
ವಾರ್ತಾಭಾರತಿ
Next Story
X