Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ...

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ‘ಜನಗಣಮನ’

ಗಣೇಶ ಅಮೀನಗಡಗಣೇಶ ಅಮೀನಗಡ20 Sept 2025 2:40 PM IST
share
ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ‘ಜನಗಣಮನ’

ನಾಟಕ: ಜನ ಗಣ ಮನ

ರಚನೆ:

ದೇವಕಿ ಧರ್ಮಿಷ್ಠೆ, ಸುಗುಣ ಎಂ.ಎಂ.

ನಿರ್ದೇಶನ: ಸುಗುಣ ಎಂ.ಎಂ.

ಸಂಗೀತ:

ನವೀನ್ ಸಜ್ಜು, ಪಿ.ಕೆ.ಕಿರಣ್

ಸಹನಿರ್ದೇಶನ: ಧನುಷ್ ಎಸ್.

ತಂಡ: ನಿರಂತರ ಫೌಂಡೇಷನ್

‘‘ಈ ಬಾಣದಿಂದ ನನ್ನ ತಲೆಯನ್ನು ಕತ್ತರಿಸಿಬಿಡಿ. ವಿದ್ಯೆ ಮತ್ತು ಜ್ಞಾನದ ಉಸಿರಾದ ಹೆಬ್ಬೆರಳನ್ನು ಕೊಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ವಿದ್ಯೆ ನನ್ನ ಶ್ರಮದ ಸಂಕೇತ. ಹೆಬ್ಬೆರಳಿನ ಬದಲಿಗೆ ನೀವು ಬೇಕಾದರೆ ನನ್ನ ಪ್ರಾಣವನ್ನೇ ತೆಗೆದುಕೊಳ್ಳಿ’’ ಎಂದು ಏಕಲವ್ಯ ಹೇಳಿದಾಗ ‘‘ನನ್ನಿಂದ ಪಡೆದ ಜ್ಞಾನವನ್ನು ಕೇಳುವ ಹಕ್ಕು ನನಗಿದೆಯೇ ಹೊರತು ನಿನ್ನ ಪ್ರಾಣ ತೆಗೆಯುವ ಹಕ್ಕು ನನಗಿಲ್ಲ’’ ಎಂದು ದ್ರೋಣಾಚಾರ್ಯರು ಹೇಳುತ್ತಾರೆ. ಆಗ ಏಕಲವ್ಯ ‘‘ಗುರುವಿಗಿಂತ ದೊಡ್ಡದು ಜ್ಞಾನವಲ್ಲವೆ? ನಾನಿಂದು ನನ್ನ ಜ್ಞಾನವನ್ನೇ ತ್ಯಜಿಸಿದರೆ ವಿದ್ಯೆಯಿಂದ ವಂಚಿತರಾಗಿ ಬಾಗಿಲಿಂದ ಹೊರಗೆ ನಿಂತ ಅದೆಷ್ಟೋ ಜನರ ಆತ್ಮಬಲ ಕುಗ್ಗಿ ಹೋಗುವುದಿಲ್ಲವೆ?’’ ಎಂದು ಕೇಳುತ್ತಾನೆ.

ಇಂಥ ಮಹತ್ವದ ಮಾತು ’ಜನಗಣಮನ’ ನಾಟಕದಲ್ಲಿ ಕೇಳಿ ಬಂತು. ಮೈಸೂರಿನ ನಿರಂತರ ಫೌಂಡೇಷನ್ ಮೈಸೂರಿನ ಕಿರು ರಂಗಮಂದಿರದಲ್ಲಿ ಸೆಪ್ಟಂಬರ್ 17, 18ರಂದು ಈ ನಾಟಕವನ್ನು ಪ್ರದರ್ಶಿಸಿತು. ನಿರಂತರ ಫೌಂಡೇಷನ್ ಪ್ರತೀ ವರ್ಷ ರಂಗ ತರಬೇತಿ ಶಿಬಿರ ಆಯೋಜಿಸುವುದರ ಜೊತೆಗೆ ನಾಟಕವೊಂದನ್ನು ಪ್ರದರ್ಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಏರ್ಪಡಿಸಿದ ತರಬೇತಿ ಶಿಬಿರದಲ್ಲಿ ಸಿದ್ಧಗೊಂಡ ನಾಟಕ ಜನಗಣಮನ. ಮುಖ್ಯವಾಗಿ ಸಂವಿಧಾನ ಮತ್ತು ಶಿಕ್ಷಣ ಆಧರಿಸಿದ ಈ ನಾಟಕ ಸಾಕಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಬಿಡಿಬಿಡಿಯಾಗಿ ಹೊರತು ಒಟ್ಟಾರೆ ಅಲ್ಲ. ಅಂದರೆ ಬಿಡಿ ಬಿಡಿ ದೃಶ್ಯಗಳು ಗಮನಸೆಳೆದವು. ಇಡಿಯಾದ ನಾಟಕ ಇನ್ನಷ್ಟು ಕಲಾತ್ಮಕವಾಗಿರಬೇಕಿತ್ತು. ಹೀಗೆಂದಾಗ ನಾಟಕದಲ್ಲಿ ಅಭಿನಯಿಸಿದವರು ಹೊಸ ಹುಡುಗರು ಎನ್ನುವ ವಿನಾಯಿತಿ ಬೇಕಿಲ್ಲ. ಆದರೆ ಹೊಸ ಹುಡುಗರಿಗೆ ಸಂವಿಧಾನ ಕುರಿತು ತಿಳಿವಳಿಕೆ ಮೂಡಿಸಿದ್ದು ಹೆಗ್ಗಳಿಕೆ.

‘‘ನಾಟಕ ಮುಖ್ಯವಲ್ಲ; ನಾಟಕದ ವಸ್ತು ಮುಖ್ಯ’’ ಎಂದು ನಾಟಕದ ನಿರ್ದೇಶಕ ಸುಗುಣ ಹೇಳುವ ಮಾತು ಗಮನಾರ್ಹ. ಹಾಗೆಯೇ ‘‘ಇಂದು ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ ಮತ್ತು ಕಾರ್ಪೊರೇಟಿಕರಣದ ಬಲೆಗೆ ಸಿಲುಕಿರುವುದು ದುರಂತವಾದರೂ ನಾವೆಲ್ಲರೂ ಒಪ್ಪಿರುವ ವಾಸ್ತವ. ಮೂಲಭೂತ ಶಿಕ್ಷಣವೇ ಇನ್ನೂ ಲಕ್ಷಾಂತರ ಮಕ್ಕಳಿಗೆ ಅಸಾಧ್ಯ ಕನಸಾಗಿ ಉಳಿದಿರುವ ಸಂದರ್ಭದಲ್ಲಿ, ಶಿಕ್ಷಣವನ್ನು ಹಕ್ಕು ಎಂದು ನೋಡುವ ಬದಲು ಸರಕು-ಸೇವೆಯಂತೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಾಗಿ ಪರಿವರ್ತಿಸಲಾಗುತ್ತಿದೆ. ಶಿಕ್ಷಣದ ಹೃದಯದಲ್ಲಿ ಇರಬೇಕಾದ ಮಾನವೀಯತೆ, ಸಮಾನತೆ ಮತ್ತು ಪ್ರಜ್ಞಾವಂತರ ಸಮಾಜ ನಿರ್ಮಾಣದ ತತ್ವಗಳನ್ನು ಕಡೆಗಣಿಸಿ, ಇಂದು ಅದು ಕಾರ್ಪೊರೇಟ್ ಲಾಭದ ಅಳ ವಲಯಕ್ಕೆ ತಳ್ಳಲ್ಪಟ್ಟಿದೆ. ಈ ಬದಲಾವಣೆಯ ತೀವ್ರತೆ ಕೇವಲ ಆರ್ಥಿಕ ಅಸಮಾನತೆಯನ್ನು ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂತರಗಳನ್ನೂ ವಿಸ್ತರಿಸುತ್ತಿರುವುದು ಕಳವಳಕಾರಿ’’ ಎನ್ನುವುದು ಸುಗುಣ ಅವರ ಮಾತು.

‘‘ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಆಯೋಜಿಸಲಾದ ಸಹಜರಂಗ ರಂಗ ತರಬೇತಿ ಶಿಬಿರದಲ್ಲಿ ನಡೆದ ಚರ್ಚೆಗಳು ಒಂದು ಮಹತ್ವದ ಮಾರ್ಗವನ್ನು ತೆರೆದವು. ವಿದ್ಯಾರ್ಥಿಗಳು ತಮ್ಮದೇ ಅನುಭವ, ಕಣ್ಣಾರೆ ಕಂಡ ವಾಸ್ತವಗಳು ಹಾಗೂ ಭವಿಷ್ಯದ ಕನಸುಗಳನ್ನು ಹಂಚಿಕೊಂಡಾಗ, ಶಿಕ್ಷಣ ವ್ಯವಸ್ಥೆಯ ದುರಂತ ಮುಖವಾಡವು ಇನ್ನಷ್ಟು ಸ್ಪಷ್ಟವಾಯಿತು. ಜಾತಿ ತಾರತಮ್ಯದ ನೆಲೆಯ ಮೇಲೆ ಮಕ್ಕಳನ್ನು ವರ್ಗೀಕರಿಸುವ ಪರಿಸ್ಥಿತಿ, ಪಠ್ಯಪುಸ್ತಕಗಳ ಒಳಗಿನ ನಿಗೂಢ ಉದ್ದೇಶಗಳು, ಶಿಕ್ಷಣದಿಂದ ಹೊರಗುಳಿದಿರುವ ಬಾಧೆ ಹಾಗೂ ಇದರಿಂದ ಸಮಾಜದ ಮನೋವೈಜ್ಞಾನಿಕ ಸ್ಥಿತಿಯ ಮೇಲೆ ಉಂಟಾಗುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಪ್ರಾಮಾಣಿಕ ಚರ್ಚೆಗಳು ಜರುಗಿದವು. ಈ ಸಂವಾದಗಳು ಕೇವಲ ಅಸಮಾಧಾನವನ್ನು ಹೊರಹಾಕದೆ, ಬದಲಾವಣೆಯ ಕನಸನ್ನು ಹಂಚಿಕೊಂಡವು. ಈ ಕನಸುಗಳನ್ನು ಕಲಾತ್ಮಕವಾಗಿ ರೂಪುಗೊಳಿಸಿ ಜನರ ಮುಂದೆ ತರುವ ಉದ್ದೇಶದಿಂದಲೇ ಈ ನಾಟಕ ಹುಟ್ಟಿಕೊಂಡಿದೆ’’ ಎನ್ನುವ ಸುಗುಣ ಅವರ ಮಾತು ನಿಜ.

ಈ ನಾಟಕ ಆರಂಭವಾಗುವುದೇ ಸರ್ಕಸ್ ಕಂಪೆನಿಯ ರಿಂಗ್ ಮಾಸ್ಟರುಗಳ ಪ್ರವೇಶದಿಂದ. ಇದರಲ್ಲಿ ರಾಜಕಾರಣಿಗಳು, ಶಿಕ್ಷಣ ಸಂಸ್ಥೆಗಳ ಮಾಲಕರು, ವ್ಯಾಪಾರಿಗಳು ಇದ್ದಾರೆ. ಸಂವಿಧಾನದ ಆಶಯದಂತೆ ಈ ದೇಶವನ್ನು ಮುನ್ನಡೆಸಬೇಕಿದೆ ಎಂದು ರಾಜಕಾರಣಿಯೊಬ್ಬರು ಹೇಳಿದಾಗ ಇನ್ನೊಬ್ಬ ರಾಜಕಾರಣಿ ಅದರ ನಾಲ್ಕು ಆಧಾರಸ್ತಂಭಗಳ ಜೊತೆಗೆ ಇನ್ನೂ ಮೂರು ಸೇರಿಸಬೇಕು. ಅವೆಂದರೆ ಕಮಿಷನಾಂಗ, ಲಂಚಾಂಗ, ಪಂಚಾಂಗ ಎಂದು ಹೇಳುತ್ತಾರೆ. ರಾಜಕಾರಣಿಗಳಿಗೆ ಕಮಿಷನಾಂಗ, ಬ್ಯೂರೋ ಬಾಯ್ಸ್‌ಗೆ ಲಂಚಾಂಗ ಇನ್ನು ಪಂಚಾಂಗ ಜನರಿಗೆ ಎನ್ನುತ್ತಾರೆ. ಈ ದೃಶ್ಯ ಮುಗಿಯುವ ಹೊತ್ತಿಗೆ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತದೆ. ಆಗ ಒಂದಿಬ್ಬರು ಪ್ರೇಕ್ಷಕರು ಎದ್ದು ನಿಂತರು. ಹೀಗೆಯೇ ನಾಡಗೀತೆ ಪ್ರಸಾರವಾದಾಗಲೂ ಒಂದಿಬ್ಬರು ಪ್ರೇಕ್ಷಕರು ಎದ್ದು ನಿಂತರು. ಇದಕ್ಕಾಗಿ ರಾಷ್ಟ್ರಗೀತೆ, ನಾಡಗೀತೆ ಪ್ರಸಾರಗೊಳಿಸುವುದನ್ನು ನಿಲ್ಲಿಸುವುದು ಒಳಿತು.

ನಂತರದ ದೃಶ್ಯದಲ್ಲಿ ಶಾಲೆಗೆ ತಡವಾಗಿ ಬರುವ ಗಿರಿಜಾ ಎಂಬ ವಿದ್ಯಾರ್ಥಿನಿಯನ್ನು ಮೇಷ್ಟ್ರು ಕೇಳಿದಾಗ ‘‘ಮುಟ್ಟಾಗಿದ್ದೀನಿ. ಅದಕ್ಕೆ ಯಾರೂ ಮುಟ್ಟಿಸಿಕೊಳ್ಳಬಾರದಂತೆ ಎಂದು ವಿಜ್ಞಾನ ಶಿಕ್ಷಕಿ ಹೇಳಿದ್ದಾರೆ’’ ಎಂದಾಗ ಮೇಷ್ಟ್ರು ತಿಳುವಳಿಕೆ ಹೇಳಿ ಕ್ಲಾಸಲ್ಲಿ ಕೂರಿಸುತ್ತಾರೆ. ತರಬೇತಿ ಮುಗಿದ ನಂತರ ಶಾಲಾ ಆವರಣದಲ್ಲಿಟ್ಟಿದ್ದ ನೀರನ್ನು ವಿದ್ಯಾರ್ಥಿ ಮಾದೇವ ಕುಡಿದಾಗ ಪಿ.ಟಿ. ಮೇಷ್ಟ್ರು ‘‘ನಿಮ್ಮಪ್ಪ ಯಾರು ಗೊತ್ತಾ? ನಿಮ್ಮ ಕೇರಿ ಯಾವುದು ಗೊತ್ತಾ?’’ ಎಂದು ಹೊಡೆಯುತ್ತಾರೆ. ಅವರ ಹೊಡೆತಕ್ಕೆ ವಿದ್ಯಾರ್ಥಿ ಪ್ರಾಣಬಿಡುತ್ತಾನೆ. ಆಗ ಗಿರಿಜಾ ‘‘ನಮ್ಮ ಸಂವಿಧಾನದ ಆರ್ಟಿಕಲ್ 17ರ ಪ್ರಕಾರ ಅಸ್ಪಶ್ಯತೆ ಅಪರಾಧ ಅಂತ ನೀವೇ ಹೇಳಿದ್ರಲ್ಲ ಸರ್?’’ ಎಂದು ಕೇಳುತ್ತಾಳೆ. ನಂತರ ವಿದ್ಯಾರ್ಥಿನಿ ಮೀನಾ ‘‘ಆರ್ಟಿಕಲ್ 21ರ ಪ್ರಕಾರ ಗೌರವದೊಂದಿಗೆ ಬದುಕುವ ಹಕ್ಕು ಎಲ್ಲರಿಗೂ ಇದೆ ಅಂತ ಹೇಳುತ್ತಲ್ಲ ಸರ್’’ ಎಂದು ಪ್ರಶ್ನಿಸುತ್ತಾಳೆ. ಆಗ ಮೇಷ್ಟ್ರು ‘‘ಅಸ್ಪಶ್ಯತೆ ಅನ್ನೋದು ಮನಸ್ಸಿನಲ್ಲೇ ಇರೋವಾಗ ಯಾವ ಆರ್ಟಿಕಲ್ ಆಗಲಿ, ಸಂವಿಧಾನ ಆಗಲಿ ಕೆಲಸ ಮಾಡಲ್ಲ’’ ಎಂದು ಬೇಸರದಿಂದ ಹೇಳುತ್ತಾರೆ. ಆಗ ವಿದ್ಯಾರ್ಥಿ ‘‘ನೀರು ಕುಡಿಯೋದೇ ಅಪರಾಧ ಆದ್ರೆ, ನಮಗೆ ಶಿಕ್ಷಣ ಯಾಕ್ ಬೇಕು ಸರ್?’’ ಎಂದು ಕೇಳಿದಾಗ ಮೇಷ್ಟ್ರು ‘‘ಸಮಾನತೆ ಅನ್ನೋ ಪರಿಕಲ್ಪನೆ ಒಳ್ಳೆಯ ಭರವಸೆಯನ್ನೇ ಕೊಟ್ಟಿತ್ತು. ಆದ್ರೆ ನ್ಯಾಯ ಇಲ್ಲದಿರೋ ಸಮಾನತೆ ಕಾಗದದ ದೋಣಿ ತರಾ. ಮೊದಲ ಮಳೆಗೆ ಮುಳುಗಿಬಿಡುತ್ತೆ’’ ಎನ್ನುತ್ತಾರೆ. ಈ ದೃಶ್ಯದ ಕೊನೆಗೆ ಕುವೆಂಪು ಅವರ ‘‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು’’ ಹಾಡನ್ನು ಕಲಾವಿದರು ಹಾಡುತ್ತಾರೆ. ಈ ದೃಶ್ಯದ ನಂತರ ಮಾಧ್ಯಮದ ವರದಿಗಾರರು ಶಾಲಾ ಆವರಣಕ್ಕೆ ನುಗ್ಗಿ ‘ಶಿಕ್ಷಕನಿಂದಲೇ ಹಲ್ಲೆಗೊಳಗಾದ ಬಾಲಕನ ಸಾವು’ ಎನ್ನುವ ಬ್ರೇಕಿಂಗ್ ನ್ಯೂಸ್ ಕೊಡುತ್ತಾರೆ. ಹೀಗೆ ಸುದ್ದಿವಾಹಿನಿಗಳು ಟಿಆರ್‌ಪಿ ಸಲುವಾಗಿ ಕಣ್ಣೀರುಗರೆವ ದೃಶ್ಯವನ್ನು ತೋರಿಸುವಾಗ ರಿಂಗ್ ಮಾಸ್ಟರುಗಳು ಬಂದು ‘‘ಅವರಿಗೆ ಒಳ್ಳೆಯ ಟಿಆರ್‌ಪಿ. ನಮಗೆ ಒಳ್ಳೆಯ ಬಿಸಿನೆಸ್’’ ಎನ್ನುತ್ತಾರೆ. ಹೀಗೆ ಸಾಗುವ ನಾಟಕದಲ್ಲಿ ಶಾಲಾ ವಾರ್ಷಿಕೋತ್ಸವ ಸಲುವಾಗಿ ಏಕಲವ್ಯ ನಾಟಕವಾಡುವ ಕುರಿತು ಚರ್ಚೆಯಾಗುತ್ತದೆ. ಈ ದೃಶ್ಯದಲ್ಲಿ ಶಿಕ್ಷಣ ಕುರಿತು ಸಂವಿಧಾನದಲ್ಲಿರುವ ವಿವರಗಳ ಚರ್ಚೆ ನಡೆಯುತ್ತದೆ. ಆಮೇಲೆ ಟಿ.ವಿ. ಸ್ಟುಡಿಯೊದಲ್ಲಿ ಶಿಕ್ಷಣ ಯಾರಿಗೆ ಕುರಿತ ಚರ್ಚೆ ನಡೆಯುವ ದೃಶ್ಯವಿದೆ. ಕೊನೆಗೆ ರಿಂಗ್ ಮಾಸ್ಟರುಗಳು, ರಾಜಕಾರಣಿಗಳ ಜೊತೆಗೆ ಖಾವಿಧಾರಿಗಳೂ ಸೇರಿಕೊಳ್ಳುವ ದೃಶ್ಯವಿದೆ. ಬಹುಮಹಡಿ ಕಟ್ಟಡಗಳ ನಡುವೆ ಅಧ್ಯಾತ್ಮ ಅರಸುತ್ತೇವೆ ಎನ್ನುವ ಖಾವಿಧಾರಿಗಳು ಇನ್ವೆಸ್ಟ್‌ಮೆಂಟು ಎನ್ನುವ ಶಬ್ದ ಕಿವಿಗೆ ಬಿದ್ದು ಬಂದೆವು ಎನ್ನುತ್ತಾರೆ. ರಾಜಕಾರಣದ ಜೊತೆಗೆ ಬಿಸಿನೆಸ್ ಹಾಗೂ ಧರ್ಮ ಸೇರಿಕೊಂಡಿರುವುದರಿಂದ ಮೆಗಾ ಸರ್ಕಸ್ ಆಗಿದೆ ಎನ್ನುವ ದೃಶ್ಯವೂ ಇದೆ. ಕೊನೆಗೆ ಏಕಲವ್ಯ ದೃಶ್ಯದೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ದೃಶ್ಯದಲ್ಲಿ ತನ್ನ ಹೆಬ್ಬೆರಳನ್ನು ಕೊಡುವುದಿಲ್ಲವೆಂದು ಏಕಲವ್ಯ ಹೇಳುತ್ತಾನೆ. ಇದಕ್ಕೆ ತರಗತಿಯಲ್ಲಿ ಕೇಳಿದ ಸಂವಿಧಾನದ ಪಾಠಗಳ ಪರಿಣಾಮ ಎನ್ನುತ್ತಾನೆ. ‘‘ಪುರಾಣ, ಚರಿತ್ರೆಗಳಲ್ಲಾದ ತಪ್ಪುಗಳನ್ನು ಇವತ್ತಿನ ಯುವಮನಸ್ಸುಗಳು ಒಪ್ಪುತ್ತಿಲ್ಲ. ಪುರಾಣ, ಚರಿತ್ರೆಗಳಲ್ಲಿರುವ ಅನೇಕ ಮೌಲ್ಯಗಳು ನಮ್ಮನ್ನು ರೂಪಿಸಿವೆ ನಿಜ. ಹಾಗಂತ ಅವುಗಳಲ್ಲಿರುವ ಕೆಡುಕುಗಳನ್ನು ನಾವು ಪ್ರಶ್ನಿಸದೆ ಇರಲು ಸಾಧ್ಯವೆ?’’ ಎಂದು ಕೇಳುತ್ತಾರೆ. ಹಾಗೆಯೇ ‘‘ನಾವು ಯೋಚಿಸುವುದಕ್ಕೆ, ಪ್ರಶ್ನಿಸುವುದಕ್ಕೆ ಶುರು ಮಾಡ್ತಾ ಇದ್ದ ಹಾಗೆ ನಮ್ಮನ್ನು ನಿಯಂತ್ರಿಸುವ ಅನೇಕ ಶಕ್ತಿಗಳು ಹೊಸ ರೂಪ ತಳೆದು ಹುಟ್ಟಿಕೊಳ್ಳುತ್ತವೆ. ಅದೆಲ್ಲವನ್ನು ಮೀರಿ ನಾವು, ನೀವು ಸೇರಿ ಪ್ರೀತಿ, ಸಮಾನತೆ, ಕಾರುಣ್ಯದಿಂದ ತುಂಬಿರುವ ಸಮ ಸಮಾಜ ಕಟ್ಟೋಣ’’ ಎಂದು ಶಿಕ್ಷಕರು ಕರೆ ಕೊಡುತ್ತಾರೆ.

ಹೀಗೆ ಸಮಕಾಲೀನ ವಿದ್ಯಮಾನಗಳ ಅನಾವರಣದ ಈ ನಾಟಕ ಇನ್ನಷ್ಟು ಕಲಾತ್ಮಕವಾಗಿಯೂ ಪರಿಣಾಮಕಾರಿಯೂ ಆಗಬೇಕಿದೆ. ಗಾಯಕ ನವೀನ್ ಸಜ್ಜು ಅವರ ಸಂಗೀತದ ಅಬ್ಬರ ಜೋರಿದೆ. ಅದು ರಂಗಸಂಗೀತವಾಗಿದ್ದರೆ ಚೆನ್ನಿತ್ತು. ಆಂದರೆ ಹೊಸ ಹುಡುಗರನ್ನು ತಲುಪಲು ಅಬ್ಬರದ ಸಂಗೀತಕ್ಕೆ ಮೊರ ಹೋಗಿರಬಹುದು. ಅದು ಮೆಲೊಡಿಯಾಗಿದ್ದರೆ ಚೆನ್ನಿತ್ತು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X